ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ ಘರ್ಷಿಸಲು ಸಜ್ಜಾದ 'ಮಾರ್ಟಿನ್​' & 'ಯುವ'.. ಒಂದೇ ದಿನ 2 ಬಹುನಿರೀಕ್ಷಿತ ಚಿತ್ರಗಳು ರಿಲೀಸ್​?

author img

By ETV Bharat Karnataka Team

Published : Sep 7, 2023, 11:13 AM IST

ಸ್ಯಾಂಡಲ್​ವುಡ್​ನ 2 ಬಹುನಿರೀಕ್ಷಿತ ಚಿತ್ರಗಳಾದ ಯುವ ಮತ್ತು ಮಾರ್ಟಿನ್​ ಡಿಸೆಂಬರ್​ 22ರಂದು ಬಿಡುಗಡೆಯಾಗಲಿವೆ ಎಂಬ ಟಾಕ್​ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

Martin and Yuva
ಯುವ' & 'ಮಾರ್ಟಿನ್​

ಕನ್ನಡ ಸಿನಿ ಪ್ರೇಮಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ 2 ಸಿನಿಮಾಗಳೆಂದರೆ 'ಯುವ' ಮತ್ತು 'ಮಾರ್ಟಿನ್'​. ಇದೀಗ ಈ ಎರಡು ಬಿಗ್​ ಸ್ಟಾರ್​ಗಳ ಚಿತ್ರಗಳು ಒಂದೇ ದಿನ ತೆರೆಗೆ ಅಪ್ಪಳಿಸಲು ಸಜ್ಜಾಗಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಗಳ ಎರಡು ಪ್ಯಾನ್​ ಇಂಡಿಯಾ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಲು ರೆಡಿಯಾಗಿವೆ. ಆದ್ರೆ ಯುವ ಸಿನಿಮಾ ಬಿಡುಗಡೆ ದಿನಾಂಕ ಡಿಸೆಂಬರ್​ 22 ರಂದು ತೆರೆಗೆ ಅಪ್ಪಳಿಸುವುದು ಖಚಿತವಾಗಿದ್ದರೆ, ಮಾರ್ಟಿನ್​ ರಿಲೀಸ್​ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಟೀಸರ್​ನಿಂದಲೇ ಸೌತ್​ ಇಂಡಸ್ಟ್ರಿಯಲ್ಲಿ ಸಖತ್​ ಹವಾ ಕ್ರಿಯೇಟ್​ ಸೃಷ್ಟಿಸಿರುವ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ನಟನೆಯ ಚಿತ್ರ 'ಮಾರ್ಟಿನ್'​. ಹಾಡು ಚಿತ್ರೀಕರಣ, ಪೋಸ್ಟ್​ ಪ್ರೊಡಕ್ಷನ್ಸ್​ ಸೇರಿದಂತೆ ಕೆಲವೊಂದು ಕೆಲಸಗಳನ್ನು ಬಾಕಿ ಉಳಿಸಿಕೊಂಡಿದ್ದ ಈ ಸಿನಿಮಾವು ಸದ್ಯ ತನ್ನೆಲ್ಲಾ ಕೆಲಸ ಮುಗಿಸಿಕೊಂಡು ಇದೇ ವರ್ಷ ಥಿಯೇಟರ್​ಗೆ ಬರಲು ಸಜ್ಜಾಗಿದೆ. ಸದ್ಯದ ಮಾಹಿತಿ ಪ್ರಕಾರ 'ಮಾರ್ಟಿನ್'​ ಹೆಸರಿನ ಪ್ಯಾನ್​ ಇಂಡಿಯಾ ಚಿತ್ರವು ಡಿಸೆಂಬರ್​ 22ರಂದು ತೆರೆಕಾಣಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಅನೌನ್ಸ್​ ಮಾಡದೇ ಹೋದರೂ, ಮಾರ್ಟಿನ್​ ಬಿಡುಗಡೆಗೆ ಸಂಬಂಧಿಸಿದ ಕೆಲವು ಪೋಸ್ಟರ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಮಧ್ಯೆ ದೊಡ್ಮನೆ ಕುಡಿ ಯುವ ರಾಜ್​ಕುಮಾರ್​ 'ಯುವ' ಎಂಬ ಸಿನಿಮಾದೊಂದಿಗೆ ಇಂಡಸ್ಟ್ರಿಗೆ ಕಾಲಿಡುತ್ತಿರುವ ವಿಚಾರ ಈಗಾಗಲೇ ಗೊತ್ತಿದೆ. ಚಿತ್ರವು ಪೋಸ್ಟರ್​ನಿಂದಲೇ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾ ಕೂಡ ಡಿಸೆಂಬರ್​ 22ರಂದು ಬಿಡುಗಡೆಯಾಗಲಿದೆ ಎಂಬುದು ಈಗಾಗಲೇ ಅನೌನ್ಸ್​ ಆಗಿದೆ.

ಯುವ ಸಿನಿಮಾ ಬಗ್ಗೆ.. ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡುತ್ತಿರುವ 'ಯುವ' ಚಿತ್ರದಲ್ಲಿ ಯುವ ರಾಜ್​ಕುಮಾರ್​ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರ. ಕಾಂತಾರ ಖ್ಯಾತಿ ಸಪ್ತಮಿ ಗೌಡ ನಾಯಕಿಯಾಗಿದ್ದು, ಖ್ಯಾತ ಹೊಂಬಾಳೆ ಫಿಲ್ಮ್ಸ್​ ಚಿತ್ರ ನಿರ್ಮಾಣ ಮಾಡುತ್ತಿದೆ. ಕಳೆದ 65 ದಿನಗಳಿಂದ ಬಿಡುವಿಲ್ಲದೇ ಶೂಟಿಂಗ್​ ನಡೆಯುತ್ತಿದೆ. ಬೆಂಗಳೂರು, ಮಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ. ಜೂನಿಯರ್​ ಪವರ್​ಸ್ಟಾರ್​ ಎಂಬ ಭಾವನಾತ್ಮಕ ಕನೆಕ್ಷನ್​ನೊಂದಿಗೆ 'ಯುವ' ಸಿನಿಮಾ ರೆಡಿಯಾಗುತ್ತಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ಆ್ಯಕ್ಷನ್​ ಪ್ರಿನ್ಸ್​ ಧ್ರುವ​ ಸರ್ಜಾ ಅಭಿಮಾನಿಗಳಿಗೆ ನಾಳೆ ಸಿಗಲಿದೆ ಗುಡ್​ ನ್ಯೂಸ್

'ಮಾರ್ಟಿನ್'​ ಆದ ಧ್ರುವ ಸರ್ಜಾ​: ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಚಿತ್ರ 'ಮಾರ್ಟಿನ್'​. ಎ ಪಿ ಅರ್ಜುನ್ ನಿರ್ದೇಶನದಲ್ಲಿ ಚಿತ್ರ ರೆಡಿಯಾಗುತ್ತಿದ್ದು, ಉದಯ್ ಕೆ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಖ್ಯಾತ ಕೆ ವಿ ಎನ್​ ಸಂಸ್ಥೆ ಮಾರ್ಟಿನ್​ಗೆ ಪವರ್​ ಹೌಸ್​ ಆಗಿ ನಿಂತಿದೆ. ಕರ್ನಾಟಕದಾದ್ಯಂತ ಧ್ರುವನ ಚಿತ್ರವನ್ನು ರಿಲೀಸ್ ಮಾಡುವ ಜವಾಬ್ದಾರಿಯನ್ನು ಕೆ.ವಿ.ಎನ್​ ಹೊತ್ತುಕೊಂಡಿದೆ. ಮಾರ್ಟಿನ್​ ಸಿನಿಮಾದ ಶೇಕಡಾ 95ರಷ್ಟು ಕೆಲಸ ಪೂರ್ಣಗೊಂಡಿದೆ.

ಹೆಚ್ಚು ಕಡಿಮೆ ಚಿತ್ರದ ಟಾಕಿ ಪೋಷನ್​ ಕಂಪ್ಲೀಟ್​ ಆಗಿತ್ತು. ಕೆಲವು ಪ್ಯಾಚ್ ವರ್ಕ್​ಗಳ ಜೊತೆಗೆ ಹಾಡುಗಳ ಚಿತ್ರೀಕರಣ ಮಾತ್ರ ಉಳಿದುಕೊಂಡಿತ್ತು. ಆದರೀಗ ಅದು ಕೂಡ ಮುಕ್ತಾಯಗೊಂಡಿದೆ. ಹೈದರಾಬಾದ್​ನಲ್ಲಿ ಮಾರ್ಟಿನ್​ ಚಿತ್ರದ ಸಾಂಗ್​ ಶೂಟಿಂಗ್​ ಇತ್ತೀಚೆಗೆ ನಡೆದಿತ್ತು. ಈ ಹಾಡಿನ ಸ್ಪೆಷಾಲಿಟಿ ಅಂದ್ರೆ ಧ್ರುವ ಸರ್ಜಾ ಜೊತೆ ಇಟಲಿ ಡ್ಯಾನ್ಸರ್​ ಗಾರ್ಗಿಯಾ ಆಂಡ್ರಿಯಾನಿ ಹೆಜ್ಜೆ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿಗಾಗಿ ಮೂರೂವರೆ ಕೋಟಿ ಖರ್ಚು ಮಾಡಲಾಗಿದ್ದು, 350ಕ್ಕೂ ಹೆಚ್ಚು ವಿದೇಶಿ ಡ್ಯಾನ್ಸರ್​ಗಳು ಭಾಗಿಯಾಗಿದ್ದರು.

ರಿಲೀಸ್​ ಡೇಟ್​ ಬದಲಾವಣೆ ಸಾಧ್ಯತೆ?: ಯುವ ಸಿನಿಮಾದ ಬಿಡುಗಡೆ ದಿನಾಂಕದಲ್ಲಿ ಈವರೆಗೆ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಸಲಾರ್​ ಚಿತ್ರ ಪೋಸ್ಟ್​ಪೋಸ್​ ಆಗಿರುವ ಕಾರಣ ಕೊನೆ ಕ್ಷಣದಲ್ಲಿ ಪ್ರಭಾಸ್​ ಸಿನಿಮಾಗಾಗಿ ಯುವ ಡಿಸೆಂಬರ್​ ತಿಂಗಳನ್ನು ಅವರಿಗೆ ಬಿಟ್ಟುಕೊಟ್ಟರೂ ಅಚ್ಚರಿಯಿಲ್ಲ. ಇನ್ನು ಮಾರ್ಟಿನ್​ ಕೂಡ ಫೈನಲ್​ ಕಾಪಿ ಸಿದ್ಧ ಮಾಡಿಕೊಳ್ಳುತ್ತಿದ್ದು, ಡಿಸೆಂಬರ್​ 22ರ ಮೇಲೆ ಕಣ್ಣಾಕಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಡಿಸೆಂಬರ್​ 22ರ ಮುಂಚಿತವಾಗಿಯೂ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸಿನಿ ಪ್ರೇಮಿಗಳು ಈ ಎರಡು ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: 'ಯುವ' ಸಿನಿಮಾ ಚಿತ್ರೀಕರಣ ಪ್ರಾರಂಭ: ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.