ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಎಂದರೆ ಅದು ವಿಜಯ್ ರಾಘವೇಂದ್ರ. ಪ್ರಸ್ತುತ ರಿಯಾಲಿಟಿ ಶೋ ಅಂತಾ ಬ್ಯುಸಿಯಾಗಿರೋ ವಿಜಯ್ ರಾಘವೇಂದ್ರ ನಟನೆಯ 'ಮರೀಚಿ' ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘಟದಲ್ಲಿ ಮರೀಚಿ ಟ್ರೇಲರ್ ಅನಾವರಣಗೊಳಿಸಲಾಯಿತು. ಈವೆಂಟ್ನಲ್ಲಿ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿತು.
- " class="align-text-top noRightClick twitterSection" data="">
ನಟ ವಿಜಯ್ ರಾಘವೇಂದ್ರ ಮಾತನಾಡಿ, ಮರೀಚಿ ಸಿನಿಮಾದ ಟೀಸರ್ ಹಾಗೂ ಹಾಡುಗಳು ಜನರನ್ನು ತಲುಪಿವೆ. ಟ್ರೇಲರ್ ಕೂಡ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರಕ್ಕಾಗಿ ತಾಂತ್ರಿಕ ಸಿದ್ಧತೆ ಮಾಡಿಕೊಂಡು, ಚಿತ್ರೀಕರಿಸಲಾಗಿದೆ. ಸಿನಿಮಾವನ್ನು ಬಹಳ ಪ್ರೀತಿಸುವ ನಿರ್ಮಾಪಕರು, ನಿರ್ದೇಶಕರು ಇಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.
ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಪೊಲೀಸ್ ಆಫೀಸರ್ ಲೈಫ್ ಸ್ಟೈಲ್ ನಮ್ಮ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕನ ಕನಸನ್ನು ನನಸು ಮಾಡಲು ತಾಂತ್ರಿಕ ವರ್ಗ, ಕಲಾವಿದರ ತಂಡ ಬೆಂಬಲ ನೀಡಬೇಕು. ನಾನು ಈ ವಿಚಾರದಲ್ಲಿ ಅದೃಷ್ಟವಂತ. ನನ್ನ ಚಿತ್ರತಂಡ ಆರಂಭದಿಂದ ಇಲ್ಲಿವರೆಗೂ ನನಗೆ ಬೆಂಬಲವಾಗಿ ನಿಂತಿದೆ. ಹೊಸ ನಿರ್ದೇಶಕನಿಗೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಮರೀಚಿ ಬಗ್ಗೆ ಹೇಳುವುದಾರೆ ಹುಟ್ಟುತ್ತಲೇ ಯಾರೂ ಕೂಡ ಕ್ರೈಮ್ ಮಾಡಬೇಕು ಅಂದುಕೊಂಡಿರೋಲ್ಲ. ಆದರೆ ಪರಿಸ್ಥಿತಿ ಮನುಷ್ಯನನ್ನು ಬದಲಾಯಿಸುತ್ತವೆ. ತಂತ್ರಜ್ಞಾನ ನಕಾರಾತ್ಮಕ ಮನಸ್ಸಿಗೆ ಸಿಕ್ಕಾಗ ಏನಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೋಮಲ್: 'ಕೋಣ' ಪೋಸ್ಟರ್ ರಿಲೀಸ್
ಮರೀಚಿ ಲವ್ ಸ್ಟೋರಿ ಒಳಗೊಂಡ ಒಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಚೊಚ್ಚಲ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ. ವಿಜಯ್ ರಾಘವೇಂದ್ರ, ಸೋನುಗೌಡ ಜೊತೆಗೆ ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಮಗಳಿಗೆ 50 ಕೋಟಿ ಮೌಲ್ಯದ ಬಂಗಲೆ ಉಡುಗೊರೆಯಾಗಿ ಕೊಟ್ಟ ಬಿಗ್ ಬಿ
ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಎಸ್.ಎಸ್.ಆರ್.ಕೆ ಬ್ಯಾನರ್ ಅಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳ ಮರೀಚಿ ಟ್ರೇಲರ್ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದು, ಪೊಲೀಸ್ ಅವತಾರದಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ಡಿಸೆಂಬರ್ 8ಕ್ಕೆ ರಾಜ್ಯಾದ್ಯಂತ ಮರೀಚಿ ಚಿತ್ರ ಬಿಡುಗಡೆ ಆಗಲಿದೆ.