ETV Bharat / entertainment

ಮಾಜಿ ಪ್ರಿಯಕರನಿಂದ ಹಲ್ಲೆ: ಫೋಟೋ ಹಂಚಿಕೊಂಡ ಮಲಯಾಳಂ ನಟಿ ಅನಿಕಾ - ಮಲಯಾಳಂ ನಟಿ ಅನಿಕಾ

ಮಾಜಿ ಪ್ರಿಯಕರನಿಂದ ಹಲ್ಲೆ- ಇನ್​ಸ್ಟಾಗ್ರಾಮ್​ನಲ್ಲಿ​ ಫೋಟೋ ಹಂಚಿಕೊಂಡ ಮಲಯಾಳಂ ನಟಿ ಅನಿಕಾ

malayalam-actress-anicka-vijayi-vikramman-shares-bruised-pictures-after-attack-by-ex-boyfriend
ಮಾಜಿ ಪ್ರಿಯಕರನಿಂದ ಹಲ್ಲೆ: ಫೋಟೋ ಹಂಚಿಕೊಂಡ ಮಲಯಾಳಂ ನಟಿ ಅನಿಕಾ
author img

By

Published : Mar 6, 2023, 10:54 PM IST

ಹೈದರಾಬಾದ್ : ಮಲಯಾಳಂ ನಟಿ ಅನಿಕಾ ವಿಜಯಿ ವಿಕ್ರಮನ್​ ತಮ್ಮ ಮಾಜಿ ಪ್ರಿಯಕರ ಹಲ್ಲೆ ಮಾಡಿರುವ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಪ್ರಿಯಕರ ಅನೂಪ್​ ಪಿಳ್ಳೈ ಹಲ್ಲೆ ಮಾಡಿರುವ ಪೋಟೊಗಳನ್ನು ಅನಿಕಾ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಾಕಿದ್ದು, ಇದರಲ್ಲಿ ಮೂಗು, ಕಣ್ಣುಗಳಿಗೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ.

ಈ ಘಟನೆಗಳ ಹೊರತಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿದೆ. ಅಲ್ಲದೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ನಾನು ನನ್ನ ಮಾಜಿ ಪ್ರಿಯಕರ ಹಲ್ಲೆ ಮಾಡುವುದಕ್ಕೆ ಮೊದಲು ನಾನು ತೆಗೆದ ಕೊನೆಯ ಚಿತ್ರವನ್ನು ನಿಮಗೆ ತೋರಿಸುತ್ತಿದ್ದೇನೆ. ಇದರಲ್ಲಿ ನಾನು ನನ್ನ ಹೇರ್​ ಸ್ಟೈಲ್​ ತೋರಿಸಲು ತುಂಬಾ ಉತ್ಸುಕನಾಗಿದ್ದೆ. ಅದು ಈಗ ಹಳೆಯದಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ವಾರದಿಂದ ನಾನು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲು ಶುರು ಮಾಡುತ್ತೇನೆ ಎಂದು ಬರೆದಿದ್ದಾರೆ.

ನಟಿ ಫೋಟೊ ಪೋಸ್ಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಪೋಸ್ಟ್​ ವೈರಲ್​ ಆಗಿದ್ದು, ನಟಿಯ ಮೇಲೆ ಆಗಿರುವ ಹಲ್ಲೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಟಿಯ ಬೆಂಬಲಕ್ಕೆ ಮಲಯಾಳಂ ಚಿತ್ರರಂಗ ಮತ್ತು ಅಭಿಮಾನಿಗಳು ನಿಂತಿದ್ದಾರೆ. ಅಭಿಮಾನಿಯೋರ್ವರು ನಟಿಯ ಬೆಂಬಲಕ್ಕೆ ನಿಂತಿದ್ದು, ನಾನು ನಿಮ್ಮ ಪೋಸ್ಟ್‌ಗಳ ಬಗ್ಗೆ ಎಂದಿಗೂ ಕಾಮೆಂಟ್ ಮಾಡಿಲ್ಲ. ನಾನು ಯುಎಸ್​ಎನಿಂದ ಬಂದಿದ್ದೇನೆ ಮತ್ತು ನಾನು ವೃತ್ತಿಪರ ಛಾಯಾಗ್ರಾಹಕನಾಗಿದ್ದೇನೆ. ನಾನು ನೋಡಿದ ಅತ್ಯಂತ ಸುಂದರವಾದ ವ್ಯಕ್ತಿಗಳಲ್ಲಿ ನೀವು ಒಬ್ಬರು. ಆದರೆ ನಿಮ್ಮ ಮೇಲೆ ಹಲ್ಲೆ ನಡೆದಿರುವುದು ತುಂಬ ದುಃಖವನ್ನುಂಟು ಮಾಡಿದೆ. ನಿಮ್ಮಂತಹ ಉತ್ತಮ ಮನಸ್ಸುಳ್ಳವರಿಗೆ ಈ ರೀತಿ ಮಾಡಲು ಮನಸ್ಸಾದರೂ ಹೇಗೆ ಬಂತು. ನಾನು ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದರು.

ಇನ್ನು ನೀವು ಕರ್ಮ ಎಂಬ ಪದವನ್ನು ಬಳಸಿದ್ದೀರಿ, ನಾನು ಅದನ್ನು ಬಳಸುವುದಿಲ್ಲ. ಆದರೆ ಒಬ್ಬ ವ್ಯಕ್ತಿಯು ತಾನು ಬಿತ್ತಿದ ಬೀಜದ ಫಲವನ್ನೇ ಪಡೆಯುತ್ತಾನೆ ಎಂಬ ಅಂಶವನ್ನು ನಂಬುತ್ತೇನೆ. ನಿಮಗೆ ಆದ ಗತಿಯೇ ಅವನಿಗೂ ಆಗುತ್ತದೆ. ನಿಮ್ಮ ಧೈರ್ಯ ಮತ್ತು ನಿಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ನಟಿ ಅನಿಕಾ ಹಂಚಿಕೊಂಡ ಚಿತ್ರಗಳಲ್ಲಿ, ಕಣ್ಣುಗಳ ಸುತ್ತಲೂ ರಕ್ತ ಹೆಪ್ಪುಗಟ್ಟಿರುವುದು ಮತ್ತು ಮುಖದ ಮೇಲಿನ ಗಾಯಗಳನ್ನು ನೋಡಬಹುದು. ಅಲ್ಲದೇ ಈ ಹಿಂದೆ ಮಾಜಿ ಪ್ರಿಯಕರ ಮೊದಲ ಬಾರಿಗೆ ತನ್ನ ಮೇಲೆ ದಾಳಿ ಮಾಡಿದ ನಂತರ ನಟಿ ಅವನನ್ನು ಕ್ಷಮಿಸಿದ ಬಗ್ಗೆ ಇರುವ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ನಟಿ ಹೈದರಾಬಾದ್‌ನಲ್ಲಿದ್ದು ಚೇತರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಜೊತೆಗೆ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದಾರೆ. ಹಲ್ಲೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ನಟಿ ದೂರಿನ ನಂತರ ಆರೋಪಿ ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ : ಅಜಯ್​ ದೇವಗನ್​ ಬಹುನಿರೀಕ್ಷಿತ 'ಭೋಲಾ' ಸಿನಿಮಾದ ಟ್ರೇಲರ್​ ರಿಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.