ETV Bharat / entertainment

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ಶಿಯಾಸ್ ಕರೀಂ ಬಂಧನ

author img

By ETV Bharat Karnataka Team

Published : Oct 7, 2023, 4:26 PM IST

Updated : Oct 7, 2023, 4:43 PM IST

ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಲಯಾಳಂ ನಟ ಶಿಯಾಸ್ ಕರೀಂ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

Malayalam actor Shiyas Kareem arrsted
ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ಶಿಯಾಸ್ ಕರೀಂ ಬಂಧನ

ಚೆನ್ನೈ (ತಮಿಳುನಾಡು): ಮಲಯಾಳಂ ನಟ ಶಿಯಾಸ್​ ಪೀಚಟ್ಕುನ್ನೆಲ್​ ಅಬ್ದುಲ್​ ಕರೀಂ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವ ನೆಪದಲ್ಲಿ ಹಲವೆಡೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಯುವತಿಯೊಬ್ಬಳು ಆರೋಪಿಸಿದ ಹಿನ್ನೆಲೆ 32 ವರ್ಷದ ನಟನನ್ನು ಬಂಧಿಸಲಾಗಿದೆ.

ಪ್ರಕರಣವೇನು?: ಎರ್ನಾಕುಲಂನಲ್ಲಿ ಫಿಟ್ನೆಸ್​ ಸೆಂಟರ್​ ನಡೆಸುತ್ತಿರುವ ನಟ ಶಿಯಾಸ್​ ಕರೀಂಗೆ ಕಾಸರಗೋಡು ಜಿಲ್ಲೆಯ ಪೆರುನ್ನ ಪ್ರದೇಶದ 31 ವರ್ಷದ ಮಹಿಳೆಯೊಂದಿಗೆ ಸಂಬಂಧವಿತ್ತು. ಈ ಮಹಿಳೆಗೆ ಮದುವೆಯಾಗಿದ್ದು, ವಿಚ್ಛೇದನ ಕೂಡ ಪಡೆದಿದ್ದಾರೆ. ಬಳಿಕ ನಟನಿಗೆ ಸೇರಿರುವ ಎರ್ನಾಕುಲಂನಲ್ಲಿರುವ ಜಿಮ್​ನಲ್ಲಿ ಮಹಿಳೆಯು ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು.

ಆದರೆ ನಟ ಶಿಯಾಸ್​ ತನ್ನನ್ನು ಮದುವೆಯಾಗುವ ನೆಪದಲ್ಲಿ ಹಲವೆಡೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿಯು ಕಾಸರಗೋಡು ಜಿಲ್ಲೆಯ ಚಂದ್ರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ನನ್ನಿಂದ 11 ಲಕ್ಷ ರೂಪಾಯಿಗಳನ್ನು ಶಿಯಾಸ್​ ಪಡೆದಿದ್ದು, ಅದನ್ನು ಹಿಂತಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಪೊಲೀಸರು ಶಿಯಾಸ್​ ಕರೀಂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಇದನ್ನೂ ಓದಿ: ಚಾಕೊಲೇಟ್ ಆಮಿಷ ತೋರಿಸಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ: ಹುಬ್ಬಳ್ಳಿಯಲ್ಲಿ ಹೋಟೆಲ್​ ಕುಕ್ ಅರೆಸ್ಟ್​

ಆದರೆ ಈ ಮಧ್ಯೆ ಶಿಯಾಸ್​ ಕರೀಂ ದುಬೈಗೆ ಹಾರಿದ್ದ. ಬಳಿಕ ಅವರ ಬಂಧನಕ್ಕಾಗಿ ಎಲ್ಲಾ ವಿಮಾನ ನಿಲ್ದಾಣಗಳಿಗೆ ಲುಕ್​ಔಟ್​ ನೋಟಿಸ್​​ ಜಾರಿ ಮಾಡಲಾಗಿತ್ತು. ನಟ ಶಿಯಾಸ್​ ನಿನ್ನೆ (ಅ.6) ದುಬೈನಿಂದ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳು ನಟನ ಪೌರತ್ವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆತನ ವಿರುದ್ಧ ಪ್ರಕರಣವಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿ, ಶಿಯಾಸ್​ನನ್ನು ಹಸ್ತಾಂತರಿಸಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಪಡೆದು, ಕೇರಳ ರಾಜ್ಯ ಸಂದೇರಾ ಪೊಲೀಸ್​ ಇಲಾಖೆಗೆ ತಿಳಿಸಿದರು. ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯ ಚಂದ್ರ ಠಾಣಾ ಪೊಲೀಸರು ಕೇರಳದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಟ ಶಿಯಾಸ್​ ಪೀಚಟ್ಕುನ್ನೆಲ್​ ಅಬ್ದುಲ್​ ಕರೀಂನನ್ನು ಬಂಧಿಸಿ ಕರೆದೊಯ್ದಿದ್ದಾರೆ.

'ವೀರಂ'ನಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ನಟ: ಶಿಯಾಸ್​ ಕರೀಂ ಎರ್ನಾಕುಲಂ ಬಳಿಯ ಪೆರುಂಬವೂರ್​ ಪ್ರದೇಶದವರು. ಇವರು ಮಲಯಾಳಂ ಬಿಗ್​ ಬಾಸ್​ ಮತ್ತು ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖ್ಯಾತ ತಮಿಳು ನಟ ಅಜಿತ್​ ಕುಮಾರ್​ ಅವರ ತಮಿಳು ಚಿತ್ರ 'ವೀರಂ'ನಲ್ಲಿ ಖಳನಾಯಕನ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಸಿಟಿ ಸ್ಕ್ಯಾನ್ ಲ್ಯಾಬ್​ನಲ್ಲಿ ವೃದ್ದೆ ಮೇಲೆ ಲೈಂಗಿಕ ದೌರ್ಜನ್ಯ: ಲ್ಯಾಬ್ ಟೆಕ್ನಿಷಿಯನ್ ಅರೆಸ್ಟ್

Last Updated : Oct 7, 2023, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.