ETV Bharat / entertainment

ಮಾಜಿ ಪತಿ ಮದುವೆ ಬೆನ್ನಲ್ಲೇ ಮಲೈಕಾ ಅರೋರಾ 'ಲವ್​​' ಸ್ಟೋರಿ - ಮಲೈಕಾ ಅರೋರಾ

Malaika Arora Instagram story: ಮಾಜಿ ಪತಿ ಅರ್ಬಾಜ್ ಖಾನ್ ಎರಡನೇ ಮದುವೆಯಾದ ನಂತರ ನಟಿ ಮಲೈಕಾ ಅರೋರಾ 'ಪ್ರೀತಿ'ಯ ಕುರಿತಾದ ಪೋಸ್ಟ್ ಶೇರ್ ಮಾಡಿದ್ದಾರೆ.

Malaika Arora
ಮಲೈಕಾ ಅರೋರಾ
author img

By ETV Bharat Karnataka Team

Published : Dec 27, 2023, 8:12 PM IST

ಬಾಲಿವುಡ್​ನಲ್ಲಿ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅರ್ಬಾಜ್ ಖಾನ್ ಇತ್ತೀಚಿಗೆ ಮೇಕಪ್ ಆರ್ಟಿಸ್ಟ್​​ ಶುರಾ ಖಾನ್​ ಅವರನ್ನು ಮದುವೆಯಾಗಿದ್ದಾರೆ. ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್ ನಿವಾಸದಲ್ಲಿ ಭಾನುವಾರ ಮದುವೆ ಕಾರ್ಯಕ್ರಮ ನಡೆದಿದೆ. ಮಾಜಿ ಪತ್ನಿ, ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಇಂದು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ರಹಸ್ಯಕರ ಬರಹವೊಂದನ್ನು ಹಂಚಿಕೊಂಡಿದ್ದಾರೆ.

2017ರಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ತಮ್ಮ 19 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ್ದರು. ಆದರೆ ಪುತ್ರನ ಜವಾಬ್ದಾರಿಯನ್ನು ಇಬ್ಬರೂ ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅರ್ಬಾಜ್ ಖಾನ್ ಎರಡನೇ ವಿವಾಹವಾಗಿದ್ದು, ಇಂದು ಮಲೈಕಾ ಅರೋರಾ ಬರಹವೊಂದರನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ಶೇರ್ ಮಾಡಲಾದ ಪೋಸ್ಟ್ ''LOVE'' ಕುರಿತಾಗಿದೆ.

Malaika Arora Instagram Story
ಮಲೈಕಾ ಅರೋರಾ ಇನ್​ಸ್ಟಾಗ್ರಾಮ್​ ಸ್ಟೋರಿ

ಮಲೈಕಾ ಇನ್‌ಸ್ಟಾ ಸ್ಟೋರಿ: ಸ್ಟೋರಿಯಲ್ಲಿ, ''ನಿಮ್ಮ ಸುರಕ್ಷಿತ ಸ್ಥಳ ಮತ್ತು ನಿಮ್ಮ ದೊಡ್ಡ ಸಾಹಸ ಎನಿಸುವ ಎರಡನ್ನೂ ಹೊಂದಿರುವ ಯಾರನ್ನಾದರೂ ಪ್ರೀತಿಸಿ" (Fall in love with someone who is both your safe place and your biggest adventure) ಎಂದು ಬರೆದಿದ್ದಾರೆ. ನಟಿ ತಮ್ಮ ಸಂದೇಶದಲ್ಲಿ ಯಾರನ್ನು ಉದ್ದೇಶಿಸಿ ಬರೆದಿದ್ದಾರೆಂಬ ಗೊಂದಲದಲ್ಲಿ ನೆಟ್ಟಿಗರಿದ್ದಾರೆ. ಇದು ಮಾಜಿ ಪತಿಯನ್ನು ಟೀಕಿಸಿದ್ದೋ ಅಥವಾ ಪ್ರಸ್ತುತ ಗೆಳೆಯನ್ನು ಹೊಗಳಿದ್ದೋ ಎಂಬುದು ತಿಳಿಯದಾಗಿದೆ.

ಡಿಸೆಂಬರ್ 24ರ (ಭಾನುವಾರ) ಸಂಜೆ ಮಲೈಕಾ ಅರೋರಾ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸಿ ಸೋಷಿಯಲ್​ ಮೀಡಿಯಾದಲ್ಲಿ ಸೆಲೆಬ್ರೇಶನ್​ ಫೋಟೋಗಳನ್ನು ಹಂಚಿಕೊಂಡಿದ್ದರು. ಅಂದೇ, ಅರ್ಬಾಜ್ ಖಾನ್ ಅವರು ಶುರಾ ಖಾನ್ ಅವರೊಂದಿಗೆ ನಿಖಾ ಮಾಡಿಕೊಂಡಿದ್ದರು. ಎರಡನೇ ಮದುವೆಯಲ್ಲಿ ಪಾಲ್ಗೊಂಡಿದ್ದ ಪುತ್ರ ಅರ್ಹಾನ್ ನಂತರ ತನ್ನ ತಾಯಿ ಮಲೈಕಾ ಅವರೊಂದಿಗೆ ಕ್ರಿಸ್ಮಸ್​​ ಸೆಲೆಬ್ರೇಶನ್​ನ ಭಾಗವಾದರು.

ಇದನ್ನೂ ಓದಿ: 2023ರಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ ಶ್ರೀಲೀಲಾ; ಗುಂಟೂರು ಕಾರಂ ರಿಲೀಸ್​ಗೆ ರೆಡಿ

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್​​ ಡೇಟಿಂಗ್​​ನಲ್ಲಿದ್ದಾರೆ. 2019ರಲ್ಲಿ ಇವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಅರ್ಜುನ್ 38 ವರ್ಷ ಹರೆಯದವರಾದರೆ, ಮಲೈಕಾ ಇತ್ತೀಚೆಗೆ 50 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಲೈಕಾ ಅರೋರಾ ಸಿನಿಮಾ ವಿಚಾರ ಗಮನಿಸೋದಾದ್ರೆ, ರಿಯಾಲಿಟಿ ಡ್ಯಾನ್ಸ್ ಶೋ 'ಜಲಕ್ ದಿಖ್ಲಾ ಜಾ'ದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫರಾ ಖಾನ್ ಮತ್ತು ಅರ್ಷದ್ ವಾರ್ಸಿ ಕೂಡ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.

ಇದನ್ನೂ ಓದಿ: 'ಡಂಕಿ' ಮಂಗಳವಾರ ಗಳಿಸಿದ್ದೆಷ್ಟು? ಬಾಕ್ಸ್​ ಆಫೀಸ್‌ ಪೈಪೋಟಿ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.