'ಕೆಜಿಎಫ್' ಬಳಿಕ ಇಡೀ ಭಾರತೀಯ ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ 'ಸಲಾರ್'. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. 'ಸಲಾರ್ ಪಾರ್ಟ್ 1'ರ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಜುಲೈ 6ರ ಮುಂಜಾನೆ 05:12ಕ್ಕೆ ಗ್ಲಿಂಪ್ಸ್ ರಿಲೀಸ್ ಆಗಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಹೌದು. 'ಕೆಜಿಎಫ್' ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ 'ಸಲಾರ್' ಮೂಲಕ ಮತ್ತೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೂ ಕಂಡು ಕೇಳರಿಯದಷ್ಟರ ಮಟ್ಟಿಗೆ ಚಿತ್ರ ನಿರ್ಮಾಣವಾಗಿದೆ. ಟೀಸರ್ ಬಿಡುಗಡೆಯಾದ 24 ಗಂಟೆಯಲ್ಲಿ 90 ಮಿಲಿಯನ್ ವೀಕ್ಷಣೆಗಳನ್ನು ದಾಟಿತ್ತು. ಸದ್ಯ ಯೂಟ್ಯೂಬ್ನಲ್ಲಿ ಟೀಸರ್ ವೀಕ್ಷಿಸಿದವರ ಸಂಖ್ಯೆ 100 ಮಿಲಿಯನ್ಗೂ ಹೆಚ್ಚಿದೆ. ಈ ಮೂಲಕ ಸಲಾರ್ ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದೆ.
-
100 Million Views and we're feeling dino-mite!
— Hombale Films (@hombalefilms) July 8, 2023 " class="align-text-top noRightClick twitterSection" data="
Thank you all for being part of this incredible milestone. Your support means the world to us 🙏🏻#SalaarTeaser100MViews#SalaarCeaseFire ▶️ https://t.co/KAGJyVxqga#Salaar #Prabhas #PrashanthNeel @PrithviOfficial @shrutihaasan… pic.twitter.com/cbdOUdZjkw
">100 Million Views and we're feeling dino-mite!
— Hombale Films (@hombalefilms) July 8, 2023
Thank you all for being part of this incredible milestone. Your support means the world to us 🙏🏻#SalaarTeaser100MViews#SalaarCeaseFire ▶️ https://t.co/KAGJyVxqga#Salaar #Prabhas #PrashanthNeel @PrithviOfficial @shrutihaasan… pic.twitter.com/cbdOUdZjkw100 Million Views and we're feeling dino-mite!
— Hombale Films (@hombalefilms) July 8, 2023
Thank you all for being part of this incredible milestone. Your support means the world to us 🙏🏻#SalaarTeaser100MViews#SalaarCeaseFire ▶️ https://t.co/KAGJyVxqga#Salaar #Prabhas #PrashanthNeel @PrithviOfficial @shrutihaasan… pic.twitter.com/cbdOUdZjkw
ಹೊಂಬಾಳೆ ಫಿಲ್ಮ್ಸ್ ಟ್ವೀಟ್: ಟೀಸರ್ ವೀಕ್ಷಿಸಿದ ಸಿನಿ ಪ್ರೇಕ್ಷಕರಿಗೆ ಕೃತಜ್ಞತೆ ಹೇಳುವುದರ ಜೊತೆಗೆ ಹೊಂಬಾಳೆ ಫಿಲ್ಮ್ಸ್, 'ಸಲಾರ್' ಚಿತ್ರದ ಬಗ್ಗೆ ಮತ್ತೊಂದು ಅಪ್ಡೇಟ್ ನೀಡಿದೆ. "ಹೃದಯ ತುಂಬಿದ ಧನ್ಯವಾದಗಳು! ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ. ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ ಸಲಾರ್ ಕ್ರಾಂತಿಗೆ ಮುನ್ನುಡಿಯಾಗಿ ಚಿತ್ರಪ್ರೇಮಿಗಳಿಂದ ದೊರಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ. ಭಾರತೀಯ ಚಿತ್ರ 'ಸಲಾರ್' ಸಿನಿಮಾ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾ ಋಣಿಗಳು. ನಿಮ್ಮ ಅಚಲ ಬೆಂಬಲವು ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತಿದೆ." ಎಂದು ಟ್ವೀಟ್ ಮಾಡಿ ಜನತೆಗೆ ಧನ್ಯವಾದ ತಿಳಿಸಿದೆ.
ಇದನ್ನೂ ಓದಿ: Salaar: ಬಿಡುಗಡೆಯಾದ ಕೆಲ ಗಂಟೆಯಲ್ಲೇ 25 ಮಿಲಿಯನ್ ವೀಕ್ಷಣೆ .. ಸಲಾರ್ ಟೀಸರ್ ಬಗ್ಗೆ ಅಭಿಮಾನಿಗಳೇನಂದ್ರು?
ಮುಂದುವರೆದು, "ಭಾರತೀಯ ಸಿನಿಮಾದ ಭವ್ಯತೆಯನ್ನು ಸಾರಲಿರುವ ಅತ್ಯಂತ ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಲು ನಾವು ಸಿದ್ಧರಾಗುತ್ತಿದ್ದೇವೆ. ಆಗಸ್ಟ್ ಕೊನೆಯಲ್ಲಿ ಬಿಡುವು ಮಾಡಿಕೊಳ್ಳಲು ಮರೆಯದಿರಿ, ಅವಿಸ್ಮರಣೀಯ ಅನುಭವ ನೀಡಿ ಪ್ರಪಂಚದಾದ್ಯಂತ ಸದ್ದು ಮಾಡಲಿರುವ ಟ್ರೈಲರ್ ಗಾಗಿ ನಿರೀಕ್ಷಿಸಿ..! ಕ್ಷಣ ಕ್ಷಣದ UPDATES ಗಾಗಿ ಸದಾ ನಮ್ಮೊಂದಿಗೆ ಜೊತೆಯಾಗಿ ಸಂಪರ್ಕದಲ್ಲಿರಿ. ಮರೆಯಲಾಗದ ಅನುಭವ ನಿಮ್ಮದಾಗಿಸಿಕೊಳ್ಳಲು ತಯಾರಾಗಿ. ಈ ಕುತೂಹಲಭರಿತ ರೋಮಾಂಚನಕಾರಿ ಪಯಣವನ್ನು ನಾವು ಮುಂದುವರಿಸೋಣ, ಚರಿತ್ರೆ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ." ಎಂದು ಟ್ವೀಟ್ನಲ್ಲಿ ಹೇಳಿದೆ.
ದೊಡ್ಡ ತಾರಾಗಣವಿರುವ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಪ್ರಭಾಸ್ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆಜಿಎಫ್ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸೆ. 28ರಂದು ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Salaar Teaser: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಟೀಸರ್ ರಿಲೀಸ್; ಕೆಜಿಎಫ್‌ಗೆ ಹೋಲಿಸಿದ ಫ್ಯಾನ್ಸ್!