ಬಾಲಿವುಡ್ ಕಿಂಗ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಸಿನಿಮಾ ವೀಕ್ಷಣಗೆ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಉತ್ಸುಕರಾಗಿದ್ದಾರೆ.
-
All The Best @iamsrk sir and #Jawan Team From SSMB Fans ❤ pic.twitter.com/RL2vgEtdbi
— Mahesh Babu Trends ™ (@MaheshFanTrends) September 6, 2023 " class="align-text-top noRightClick twitterSection" data="
">All The Best @iamsrk sir and #Jawan Team From SSMB Fans ❤ pic.twitter.com/RL2vgEtdbi
— Mahesh Babu Trends ™ (@MaheshFanTrends) September 6, 2023All The Best @iamsrk sir and #Jawan Team From SSMB Fans ❤ pic.twitter.com/RL2vgEtdbi
— Mahesh Babu Trends ™ (@MaheshFanTrends) September 6, 2023
ದೇಶ ಮಾತ್ರವಲ್ಲದೇ ಸಾಗರೋತ್ತರ ಪ್ರದೇಶಗಳಲ್ಲೂ ಜವಾನ್ನ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್ ಜೋರಾಗೇ ನಡೆದಿದೆ. ಜವಾನ್ ಸದ್ಯ ಟ್ರೆಂಡಿಗ್ನಲ್ಲಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡ ಜವಾನ್ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.
-
It's time for #Jawan!!! The frenzy and power of @iamsrk are on full display!! 💥 Wishing the team an all-time blockbuster success across all markets! So looking forward to watching it with the entire family!!#Nayanthara @VijaySethuOffl @Atlee_dir @anirudhofficial…
— Mahesh Babu (@urstrulyMahesh) September 6, 2023 " class="align-text-top noRightClick twitterSection" data="
">It's time for #Jawan!!! The frenzy and power of @iamsrk are on full display!! 💥 Wishing the team an all-time blockbuster success across all markets! So looking forward to watching it with the entire family!!#Nayanthara @VijaySethuOffl @Atlee_dir @anirudhofficial…
— Mahesh Babu (@urstrulyMahesh) September 6, 2023It's time for #Jawan!!! The frenzy and power of @iamsrk are on full display!! 💥 Wishing the team an all-time blockbuster success across all markets! So looking forward to watching it with the entire family!!#Nayanthara @VijaySethuOffl @Atlee_dir @anirudhofficial…
— Mahesh Babu (@urstrulyMahesh) September 6, 2023
ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ, ಸದ್ಯ ಗುಂಟೂರು ಕಾರಂ ಸಿನಿಮಾ ಸಲುವಾಗಿ ಸುದ್ದಿಯಲ್ಲಿರುವ ಮಹೇಶ್ ಬಾಬು ಸಾಮಾಜಿಕ ಜಾಲತಾಣ X (ಹಿಂದಿನ ಟ್ವಿಟರ್) ನಲ್ಲಿ ಜವಾನ್ ಕುರಿತು ಬರೆದುಕೊಂಡಿದ್ದಾರೆ. ''ಈ ಸಮಯ ಜವಾನ್ಗಾಗಿ. ನಟ ಶಾರುಖ್ ಖಾನ್ ಅವರ ಪವರ್ ಎಲ್ಲೆಡೆ ಪ್ರದರ್ಶನವಾಗುತ್ತಿದೆ. ಎಲ್ಲ ಮಾರುಕಟ್ಟೆಗಳಲ್ಲಿ (ಬಹುಭಾಷೆ) ಸಾರ್ವಕಾಲಿಕ ಬ್ಲಾಕ್ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಲು ಚಿತ್ರತಂಡಕ್ಕೆ ಶುಭ ಕೋರುತ್ತೇನೆ. ಸಿನಿಮಾವನ್ನು ಸಂಪೂರ್ಣ ಕುಟುಂಬಸ್ಥರೊಂದಿಗೆ ವೀಕ್ಷಿಸಲು ಎದುರು ನೋಡುತ್ತಿದ್ದೇನೆ'' ಎಂದು ಟಾಲಿವುಡ್ ಆ್ಯಕ್ಷನ್ ಪ್ರಿನ್ಸ್ ಟ್ವೀಟ್ ಮಾಡಿದ್ದಾರೆ. ತೆಲುಗು ಸೂಪರ್ ಸ್ಟಾರ್ನ ಈ ಟ್ವೀಟ್ ಜವಾನ್ ಸಿನಿಮಾ ಮೇಲಿನ ಉತ್ಸಾಹ ಮತ್ತು ನಿರೀಕ್ಷೆ ಬಗ್ಗೆ ಒತ್ತಿ ಹೇಳುತ್ತಿದೆ.
-
Thank u so much my friend. Hope you enjoy the film. Let me know when you are watching I will come over and watch it with you. Love to you and the family. Big hug. https://t.co/xW0ZD65uvk
— Shah Rukh Khan (@iamsrk) September 6, 2023 " class="align-text-top noRightClick twitterSection" data="
">Thank u so much my friend. Hope you enjoy the film. Let me know when you are watching I will come over and watch it with you. Love to you and the family. Big hug. https://t.co/xW0ZD65uvk
— Shah Rukh Khan (@iamsrk) September 6, 2023Thank u so much my friend. Hope you enjoy the film. Let me know when you are watching I will come over and watch it with you. Love to you and the family. Big hug. https://t.co/xW0ZD65uvk
— Shah Rukh Khan (@iamsrk) September 6, 2023
ಇದನ್ನೂ ಓದಿ: Jawan: 1 ಮಿಲಿಯನ್ಗೂ ಹೆಚ್ಚು ಮುಂಗಡ ಟಿಕೆಟ್ ಮಾರಾಟ - 125 ಕೋಟಿ ರೂ. ಕಲೆಕ್ಷನ್ ಸಾಧ್ಯತೆ!
ಜವಾನ್ ನಾಯಕ ನಟ ಶಾರುಖ್ ಖಾನ್ ಅವರು ಮಹೇಶ್ ಬಾಬು ಅವರ ಈ ಪ್ರೀತಿಪೂರ್ವಕ ಪೋಸ್ಟ್ಗೆ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ಕೃತಜ್ಞತೆ ತಿಳಿಸಿರುವ ಎಸ್ಆರ್ಕೆ, ಸಿನಿಮಾವನ್ನು ಒಟ್ಟಿಗೆ ನೋಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ರಿಯಾಕ್ಷನ್ ಕೊಟ್ಟಿರುವ ಬಾಲಿವುಡ್ ಬಾದ್ಶಾ ''ಥ್ಯಾಂಕ್ ಯೂ ಮೈ ಫ್ರೆಂಡ್. ನೀವು ಸಿನಿಮಾವನ್ನು ಆನಂದಿಸುತ್ತೀರಿ ಎಂದು ಭಾವಿಸುತ್ತೇನೆ. ನೀವು ಯಾವಾಗ ಸಿನಿಮಾ ನೋಡುತ್ತೀರೆಂದು ನನಗೆ ತಿಳಿಸಿ. ನಾನು ಅಲ್ಲಿಗೆ ಬಂದು ನಿಮ್ಮೊಂದಿಗೆ ಸಿನಿಮಾ ವೀಕ್ಷಿಸುತ್ತೇನೆ. ನಿಮಗೆ ಮತ್ತು ಕುಟುಂಬಕ್ಕೆ ನನ್ನ ಪ್ರೀತಿಯ ಅಪ್ಪುಗೆ'' ಎಂದು ಬರೆದುಕೊಮಡಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಗಳ ಈ ಟ್ವೀಟ್ ಅಭಿಮಾನಿಗಳ ಮನ ಮುಟ್ಟಿದೆ. ನಟರಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಚ್ಚಿದ 'Jawan' ಚಿತ್ರದ ಕ್ರೇಜ್.. ಚಿತ್ರಮಂದಿರದಲ್ಲಿ ಟಿಕೆಟ್ಗಾಗಿ ಮುಗಿಬಿದ್ದ ಅಭಿಮಾನಿಗಳು
ಈ ಇಬ್ಬರು ಬಹುಬೇಡಿಕ ನಟರು ತಮ್ಮ ಪರಸ್ಪರ ಸ್ನೇಹ, ಗೌರವವನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ಮಹೇಶ್ ಬಾಬು ತಮ್ಮ ಬ್ರಹ್ಮೋತ್ಸವಂ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಆ ಸಂದರ್ಭ ಹೈದರಾಬಾದ್ನಲ್ಲಿದ್ದ ಎಸ್ಆರ್ಕೆ ಬ್ರಹ್ಮೋತ್ಸವಂ ಶೂಟಿಂಗ್ ಸೆಟ್ಗೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದರು.