ಹೈದರಾಬಾದ್: ತಮ್ಮ ತಂದೆ ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಗಟ್ಟಿಮನೇನಿ ಕೃಷ್ಣ ಮೊದಲ ಪುಣ್ಯ ತಿಥಿ ಕಾರ್ಯಕ್ರಮಕ್ಕಾಗಿ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಆಗಮಿಸಿದರು. ಕೃಷ್ಣ ಅವರ ಮನೆಗೆ ಮಹೇಶ್ ಬಾಬು ಆಗಮಿಸುತ್ತಿರುವ ವಿಡಿಯೋವನ್ನು ಪ್ಯಾಪಾರಾಜಿಗಳು ಸೆರೆ ಹಿಡಿದಿದ್ದಾರೆ. ಕಳೆದ ವರ್ಷ ಅಂದರೆ, ನವೆಂಬರ್ 15ರ 2022ರಲ್ಲಿ ವಯೋ ಸಹಜ ಸಮಸ್ಯೆಯಿಂದಾಗಿ ಹೋರಾಟ ನಡೆಸುತ್ತಿದ್ದ ಕೃಷ್ಣ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ತಂದೆಯ ವರ್ಷದ ಸವಿ ನೆನಪಲ್ಲಿ ನಟ ಮಹೇಶ್ ಬಾಬು, ಕೃಷ್ಣ ಅವರ ಯೌವನದ ಚಿತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಯಾವಾಗಲೂ ಮತ್ತು ಎಂದಿಗೂ ಸೂಪರ್ ಸ್ಟಾರ್ ಎಂದು ಬರೆದು ತಂದೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ವಿಜಯವಾಡದಲ್ಲಿ ನಿರ್ಮಿಸಲಾಗಿದ್ದ ಕೃಷ್ಣ ಅವರ ಪುತ್ಥಳಿಯನ್ನು ನಟ ಕಮಲ್ ಹಾಸನ್ ಅವರು ಅನಾವರಣ ಮಾಡಿದ್ದರು. ಈ ಉದ್ಘಾಟನಾ ವಿಡಿಯೋವನ್ನು ನಟ ಮಹೇಶ್ ಬಾಬು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ತಂದೆಯ ಪುತ್ಥಳಿ ಅನಾವರಣ ಮಾಡಿದ್ದಕ್ಕೆ ನಟ ಕಮಲ್ ಹಾಸನ್ಗೆ ಅಭಿನಂದನೆ ಸಲ್ಲಿಸಿದ್ದರು.
-
Heartfelt gratitude to @ikamalhaasan Sir and @DevineniAvi Garu for gracing the inaugural event of Krishna garu's statue in Vijayawada. Truly honoured to have them unveil Nanna garu's statue, a homage to the legacy he left behind. Also, a big thank you to all the fans from the… pic.twitter.com/4YUOidCR8d
— Mahesh Babu (@urstrulyMahesh) November 10, 2023 " class="align-text-top noRightClick twitterSection" data="
">Heartfelt gratitude to @ikamalhaasan Sir and @DevineniAvi Garu for gracing the inaugural event of Krishna garu's statue in Vijayawada. Truly honoured to have them unveil Nanna garu's statue, a homage to the legacy he left behind. Also, a big thank you to all the fans from the… pic.twitter.com/4YUOidCR8d
— Mahesh Babu (@urstrulyMahesh) November 10, 2023Heartfelt gratitude to @ikamalhaasan Sir and @DevineniAvi Garu for gracing the inaugural event of Krishna garu's statue in Vijayawada. Truly honoured to have them unveil Nanna garu's statue, a homage to the legacy he left behind. Also, a big thank you to all the fans from the… pic.twitter.com/4YUOidCR8d
— Mahesh Babu (@urstrulyMahesh) November 10, 2023
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಮಹೇಶ್ ಬಾಬು, ಕಮಲ್ ಹಾಸನ್ ಮತ್ತು ವೈಎಸ್ಆರ್ಸಿಪಿ ಉಸ್ತುವಾರಿಯಾಗಿರುವ ರಾಜಕಾರಣಿ ದೇವಿನೇನಿ ಅವಿನಾಶ್ ಅವರಿಗೆ ಹೃದಯ ತುಂಬಿದ ಕೃತಜ್ಞತೆ ಸಲ್ಲಿಸಿದ್ದರು. ತಂದೆಯವರ ಪುತ್ಥಳಿಯನ್ನು ಅನಾವರಣ ಮಾಡಿರುವುದು ನಿಜಕ್ಕೂ ಗೌರವ ಪೂರ್ವಕವಾಗಿದೆ. ಹಾಗೆಯೇ ಎಲ್ಲ ಅಭಿಮಾನಿಗಳು ಈ ಘಟನೆಯನ್ನು ಸಾಧ್ಯವಾಗಿಸಿದ್ದಕ್ಕೆ ಧನ್ಯವಾದಗಳು. ಎಲ್ಲ ಪ್ರೀತಿಗೆ ಕೃತಜ್ಞತೆಗಳು ಎಂದು ಬರೆದಿದ್ದರು.
ಗಟ್ಟಿಮನೇನಿ ಸಿವ ರಾಮ ಕೃಷ್ಣ ಮೂರ್ತಿ ತೆಲುಗು ಚಿತ್ರರಂಗದಲ್ಲಿ ಕೃಷ್ಣ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸರಿಸುಮಾರು 350 ಚಿತ್ರಗಳಲ್ಲಿ ನಟಿಸಿದ್ದರು. ನಟನೆ ಹೊರತಾಗಿ ಕೃಷ್ಣ ಅವರು, ನಿರ್ಮಾಣ ಮತ್ತು ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದರು. 1965ರಲ್ಲಿ ಥಾಣೆ ಮನಸುಲು ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ಕೃಷ್ಣ ಅವರು ತಮ್ಮ ನಟನೆ ಆರಂಭಿಸಿದ್ದರು. ಈ ಚಿತ್ರವನ್ನು ಅದ್ರತಿ ಸುಬ್ಬ ರಾವ್ ನಿರ್ದೇಶಿಸಿದ್ದರು. ಕೃಷ್ಣ ಅವರ ಸಿನಿ ಜೀವನದ ಕೊಡುಗೆ ಗಮನಿಸಿ 2009ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಇದನ್ನೂ ಓದಿ: ತಂದೆ ಪ್ರತಿಮೆ ಅನಾವರಣಗೊಳಿಸಿದ ಕಮಲ್ ಹಾಸನ್ಗೆ ಕೃತಜ್ಞತೆ ಸಲ್ಲಿಸಿದ ನಟ ಮಹೇಶ್ ಬಾಬು