ETV Bharat / entertainment

'ಕಿಂಗ್​ ಜೊತೆ ಕಿಂಗ್​​ ಸೈಜ್​ ಎಂಟರ್​​ಟೈನ್​ಮೆಂಟ್​ ಸಿನಿಮಾ': ಜವಾನ್​​ ಬಗ್ಗೆ ಮಹೇಶ್​ ಬಾಬು ಗುಣಗಾನ

author img

By ETV Bharat Karnataka Team

Published : Sep 8, 2023, 3:53 PM IST

Updated : Sep 8, 2023, 4:37 PM IST

Mahesh Babu praised Jawan: ಜವಾನ್​ ಸಿನಿಮಾ ಮತ್ತು ಶಾರುಖ್​ ಖಾನ್​ ನಟನೆ ಬಗ್ಗೆ ಟಾಲಿವುಡ್​ ಸೂಪರ್​ ಸ್ಟಾರ್ ಮಹೇಶ್​ ಬಾಬು ಟ್ವೀಟ್​ ಮಾಡಿದ್ದಾರೆ.

Mahesh Babu praised  Jawan and SRK
ಜವಾನ್​​ ಬಗ್ಗೆ ಮಹೇಶ್​ ಬಾಬು ಗುಣಗಾನ

ಬಹುನಿರೀಕ್ಷಿತ ಸಿನಿಮಾ 'ಜವಾನ್​​' ಅಂದುಕೊಂಡಂತೆ ದಾಖಲೆಗಳನ್ನು ಪುಡಿಗಟ್ಟಿದೆ. ನಿರೀಕ್ಷೆಯಂತೆ ಮೊದಲ ದಿನವೇ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 75 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಬೆಸ್ಟ್ ಓಪನಿಂಗ್​ ಪಡೆದ ಸಿನಿಮಾವಾಗಿ ಜವಾನ್​​ ಹೊರಹೊಮ್ಮಿದೆ. ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​​ ತಮ್ಮದೇ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಈವರೆಗೆ ಪಠಾಣ್​ ಹಿಂದಿ ಚಿತ್ರರಂದಲ್ಲಿ ಮೊದಲ ದಿನ ಅತ್ಯಧಿಕ ಕಲೆಕ್ಷನ್​ ಮಾಡಿದ ಸಿನಿಮಾವಾಗಿ ಗುರುತಿಸಿಕೊಂಡಿತ್ತು. ಇದೀಗ ಈ ಪಟ್ಟಕ್ಕೆ 'ಜವಾನ್'​ ಏರಿದೆ.

  • #Jawan... Blockbuster cinema… 💥💥💥 @Atlee_dir delivers king size entertainment with the King himself!! Comes up with his career's best film… 👏👏👏 The aura, charisma and screen presence of @iamsrk are unmatched… He’s on fire here 🔥🔥🔥!! Jawan will break his own records……

    — Mahesh Babu (@urstrulyMahesh) September 8, 2023 " class="align-text-top noRightClick twitterSection" data=" ">

ಜವಾನ್​ ಸಿನಿಮಾ ಬಿಡುಗಡೆ ಹಿನ್ನೆಲೆ ನಿನ್ನೆ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವಾರದ ದಿನವಾದರೂ ಮೊದಲ ದಿನವೇ ಕೋಟ್ಯಂತರ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ವಾರದ ದಿನದ ಕಲೆಕ್ಷನ್​ ಈ ಮಟ್ಟಿಗಿದ್ದರೆ, ಇನ್ನು ವಾರಾಂತ್ಯದ ಕಲೆಕ್ಷನ್​ ಹೇಗಿರಬಹುದು ಎಂದು ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದವರು ಊಹಿಸುತ್ತಿದ್ದಾರೆ. ಚಿತ್ರಮಂದಿರಗಳ ಒಳಗೂ ಮತ್ತು ಹೊರಗೂ ಸೆಲೆಬ್ರೇಶನ್​ ಜೋರಾಗೇ ಇದೆ. ಪಟಾಕಿ ಸಿಡಿಸುವಿಕೆ, ಸಿಹಿ ಹಂಚುವಿಕೆ, ಸಿಳ್ಳೆ, ಚಪ್ಪಾಳೆ ಜೋರಾಗೇ ಇದೆ.

ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ನಟರೂ ಕೂಡ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ ನಟನ ಸಿನಿಮಾದಿಂದ ದಕ್ಷಿಣದ ಹೀರೋ ಪ್ರಭಾವಿತರಾಗಿದ್ದಾರೆ. ಈ ಸಿನಿಮಾ ಕುರಿತು ಟಾಲಿವುಡ್​ ಆ್ಯಕ್ಷನ್​ ಪ್ರಿನ್ಸ್​ ಮಹೇಶ್​ ಬಾಬು ಟ್ವೀಟ್​​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಖತ್​ ಸದ್ದು ಮಾಡುತ್ತಿದೆ.

ಜವಾನ್​​ ಬಗ್ಗೆ ಮಹೇಶ್​ ಬಾಬು ಟ್ವೀಟ್: ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್​) ನಲ್ಲಿ ಟ್ವೀಟ್​ ಮಾಡಿರುವ ಟಾಲಿವುಡ್​ ಸೂಪರ್​ ಸ್ಟಾರ್ ಮಹೇಶ್​ ಬಾಬು, ''ಜವಾನ್​​, ಬ್ಲಾಕ್​ಬಸ್ಟರ್​ ಸಿನಿಮಾ. ನಿರ್ದೇಶಕ ಅಟ್ಲೀ ಅವರು ಕಿಂಗ್​ ಜೊತೆ ಕಿಂಗ್​ ಸೈಜ್​​ ಎಂಟರ್​ಟೈನ್​ಮೆಂಟ್​ ಸಿನಿಮಾ ವಿತರಿಸಿದ್ದಾರೆ. ಅವರ ವೃತ್ತಿಜೀವನದ ಅತ್ಯುತ್ತಮ ಸಿನಿಮಾ. ನಟ ಶಾರುಖ್​ ಖಾನ್​ ಅವರ ಸ್ಕ್ರೀನ್​​ ಪ್ರೆಸೆಂಟೇಶನ್​ ರೀತಿಗೆ ಸರಿಸಾಟಿಯಿಲ್ಲ. ಫೈಯರ್​! ತಮ್ಮ ಸ್ವಂತ ದಾಖಲೆಯನ್ನೇ ಪುಡಿಗಟ್ಟಿದ್ದಾರೆ. ಕೂಲ್​​... ದಂತಕಥೆಗಳ ವಿಷಯ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಎಸ್‌ಆರ್‌ಕೆ ಸಿನಿಮಾ ಗಾಡ್, ನಿಮ್ಮ ಪರಿಶ್ರಮ, ನಮ್ರತೆಗೆ ನನ್ನ ನಮಸ್ಕಾರ': ಕಂಗನಾ ಗುಣಗಾನ

ನಟ ಮಹೇಶ್​ ಬಾಬು ಸಿನಿಮಾ ಬಿಡುಗಡೆಗೂ ಮುನ್ನವೂ ಶಾರುಖ್​ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದರು. ಈ ಸಮಯ ಜವಾನ್​ ಚಿತ್ರಕ್ಕಾಗಿ. ಎಸ್​ಆರ್​ಕೆ ಪವರ್​ ಎಲ್ಲಾ ಕಡೆಗಳಲ್ಲೂ ಕಾಣುತ್ತಿದೆ. ಸಾರ್ವಕಾಲಿಕ ಬ್ಲಾಕ್​ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಲು ಚಿತ್ರತಂಡಕ್ಕೆ ಶುಭ ಕೋರುತ್ತೇನೆ. ಸಿನಿಮಾವನ್ನು ಕುಟುಂಬದೊಂದಿಗೆ ವೀಕ್ಷಿಸಲಿದ್ದೇನೆ ಎಂದು ತಿಳಿಸಿದ್ದರು. ಅದಕ್ಕೆ ಶಾರುಖ್​​ ಕೃತಘ್ಞತೆ ತಿಳಿಸಿದ್ದರು.

ಇದನ್ನೂ ಓದಿ: ಫ್ಯಾಮಿಲಿಯೊಂದಿಗೆ ಜವಾನ್​ ವೀಕ್ಷಿಸಲಿರುವ ಮಹೇಶ್​ ಬಾಬು... ಟಾಲಿವುಡ್​ ಸ್ಟಾರ್ ಜೊತೆ ಸಿನಿಮಾ ನೋಡುತ್ತೇನೆ ಎಂದ ಶಾರುಖ್​ ಖಾನ್

Last Updated : Sep 8, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.