ETV Bharat / entertainment

ಮುಂದಿನ ವರ್ಷ ತೆರೆ ಕಾಣಲಿರುವ ಸೂಪರ್​ಸ್ಟಾರ್​ ನಟರ ಪ್ಯಾನ್​ ಇಂಡಿಯಾ ಸಿನಿಮಾಗಳಿವು! - ಗೇಮ್​ ಚೇಂಜರ್​

Movies to be released in 2024: ಮುಂದಿನ ವರ್ಷ ತೆರೆ ಕಾಣಲಿರುವ ಟಾಲಿವುಡ್​ ಸ್ಟಾರ್​ ನಟರ ಸಿನಿಮಾ ಡೀಟೈಲ್ಸ್​ ಇಲ್ಲಿದೆ..

list-of-telugu-movies-to-be-released-in-2024
ಮುಂದಿನ ವರ್ಷ ತೆರೆ ಕಾಣಲಿರುವ ಸೂಪರ್​ಸ್ಟಾರ್​ ನಟರ ಪ್ಯಾನ್​ ಇಂಡಿಯಾ ಸಿನಿಮಾಗಳಿವು!
author img

By ETV Bharat Karnataka Team

Published : Dec 11, 2023, 5:42 PM IST

ಭಾರತೀಯ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ತೆರೆ ಕಾಣುತ್ತವೆ. ತೆಲುಗು ಪ್ರೇಕ್ಷಕರಂತೂ ಎಲ್ಲ ಭಾಷೆಯ ಸಿನಿಮಾಗಳನ್ನು​ ಇಷ್ಟಪಡುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ತಾರೆಯರು ನಟಿಸುತ್ತಿದ್ದರಂತೂ ಅವುಗಳ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಥಿಯೇಟರ್​ಗಳಲ್ಲಿ ಜನಜಂಗುಳಿ, ದಾಖಲೆಯ ಕಲೆಕ್ಷನ್​, ಅಭಿಮಾನಿಗಳ ಸಂಭ್ರಮ.. ಇವೆಲ್ಲವೂ ಟಾಪ್​ ಸ್ಟಾರ್​ಗಳ ಚಿತ್ರಗಳಿಂದ ಮಾತ್ರ ಸಾಧ್ಯ.

ಸೂಪರ್​ಸ್ಟಾರ್​ ನಟರು ಪ್ರತಿ ವರ್ಷ ಒಂದೋ ಎರಡೋ ಸಿನಿಮಾಗಳನ್ನು ಮಾಡಬೇಕು ಎನ್ನುವ ಹಂಬಲ ಇಟ್ಟುಕೊಂಡಿರುತ್ತಾರೆ. ಪ್ರತಿ ಬಾರಿ ಹೊಸ ವರ್ಷ ಆರಂಭವಾದಾಗಲೂ ಈ ಅಭಿಪ್ರಾಯ ವ್ಯಕ್ತವಾಗುತ್ತದೆ. ಹಾಗಂತ ಎಲ್ಲಾ ವರ್ಷವೂ ಇದು ಸಾಧ್ಯವಾಗುವುದಿಲ್ಲ. ಅದಕ್ಕೆ ನಾನಾ ಕಾರಣಗಳಿವೆ. ಅದರಂತೆ 2023 ಅಂದರೆ ಈ ವರ್ಷ ಅನೇಕ ಸ್ಟಾರ್​ ನಟರು ಸದ್ದು ಮಾಡೇ ಇಲ್ಲ. ಇವರೆಲ್ಲರೂ 2024ರಲ್ಲಿ ಭೇಟಿಯಾಗೋಣ ಎನ್ನುತ್ತಿದ್ದಾರೆ. ಕೊನೆಗೂ ಆ ಸಮಯ ಸಮೀಪಿಸುತ್ತಿದೆ.

ಕ್ಯಾಲೆಂಡರ್​ ಬದಲಾಯಿಸುವ ಗಳಿಗೆ ಬಂದಿದೆ. ಈ ಕ್ರಮದಲ್ಲಿ ಚಿತ್ರರಂಗದ ಈ ವರ್ಷ ಹೇಗಿತ್ತು ಮತ್ತು ಮುಂದಿನ ವರ್ಷದ ಕೆಲಸಗಳೇನು ಎಂಬ ಯೋಜನೆಯೂ ಸಿದ್ಧವಾಗಲಿದೆ. ನಮ್ಮ ಸ್ಟಾರ್​ ನಾಯಕರು ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಅನೇಕ ನಟರಿಗೆ 2023ರಲ್ಲಿ ಬೆಳ್ಳಿ ತೆರೆಯಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಟಾಪ್​ ಹೀರೋಗಳಾದ ವೆಂಕಟೇಶ್​, ನಾಗಾರ್ಜುನ, ಮಹೇಶ್​ ಬಾಬು, ಅಲ್ಲು ಅರ್ಜುನ್​, ಎನ್​ಟಿಆರ್​ ಮತ್ತು ರಾಮ್​ಚರಣ್​ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಕೆಲವರದ್ದು ಅನಿರೀಕ್ಷಿತವಾಗಿ ಮುಂದಿನ ವರ್ಷಕ್ಕೆ ಮುಂದೂಡಲಾಯಿತು.

ಮೆಗಾಸ್ಟಾರ್​ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ವೆಂಕಟೇಶ್​ ಮತ್ತು ನಾಗಾರ್ಜುನ ತೆಲುಗು ಚಿತ್ರರಂಗದ ಆಧಾರ ಸ್ತಂಭಗಳು. ಅತ್ಯಂತ ಅದ್ಭುತ ಸಿನಿಮಾಗಳನ್ನು ಮಾಡಿರುವ ಖ್ಯಾತಿ ಈ ನಟರಿಗಿದೆ. ಈಗಲೂ ಅದೇ ಶಕ್ತಿ ಪ್ರದರ್ಶಿಸಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಈ ವರ್ಷ ಚಿರಂಜೀವಿ ಮತ್ತು ಬಾಲಯ್ಯ ತಲಾ ಎರಡು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಕಾರಣಾಂತರಗಳಿಂದ ಈ ವರ್ಷ ವೆಂಕಟೇಶ್​ ಮತ್ತು ನಾಗಾರ್ಜುನ ಅವರ ಸಿನಿಮಾಗಳು ತೆರೆ ಕಂಡಿಲ್ಲ.

ಮತ್ತೊಂದೆಡೆ ವೆಂಕಿ ಹಿಂದಿಯ 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್​' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು 'ರಾಣಾ ನಾಯ್ಡು' ವೆಬ್​ ಸರಣಿಯೊಂದಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ವೆಂಕಟೇಶ್​ ಅಭಿನಯದ 'ಸೈಂಧವ' ಇದೇ ತಿಂಗಳು ತೆರೆಗೆ ಬರಬೇಕಿದ್ದರೂ ಬಿಡುಗಡೆ ದಿನಾಂಕ ಬದಲಾಗಿದೆ. ಮತ್ತೊಂದೆಡೆ, ಹಿಂದಿನ ಚಿತ್ರಗಳ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ನಾಗಾರ್ಜುನ ಕಥೆಗಳ ವಿಷಯದಲ್ಲಿ ನಿಧಾನಗತಿಯ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇತ್ತೀಚೆಗಷ್ಟೇ 'ನಾ ಸಾಮಿ ರಂಗ'ಕ್ಕೆ ಎಂಟ್ರಿ ಕೊಟ್ಟಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಮುಂದಿನ ವರ್ಷ ಸಂಕ್ರಾತಿ ಸಮಯಲ್ಲಿ ಈ ಇಬ್ಬರು ಹಿರಿಯ ನಟರ ಝೇಂಕಾರ ನಡೆಯಲಿದೆ.

ಗೇಮ್​ ಚೇಂಜರ್​ Vs ಗುಂಟೂರು ಖಾರಂ: ಈ ಮೊದಲಿನ ಲೆಕ್ಕಾಚಾರದ ಪ್ರಕಾರ, ಈ ವರ್ಷ ಮಹೇಶ್​ ಬಾಬು ಮತ್ತು ರಾಮ್​ ಚರಣ್​ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಬೇಕಿತ್ತು. ಬಿಡುಗಡೆ ದಿನಾಂಕವನ್ನೂ ಅಂತಿಮಗೊಳಿಸಲಾಗಿತ್ತು. ಆದರೆ ಚಿತ್ರೀಕರಣ ವಿಳಂಬ ಮತ್ತಿತರ ಕಾರಣಗಳಿಂದ ಅವರ ಚಿತ್ರಗಳು ಮುಂದಿನ ವರ್ಷಕ್ಕೆ ಶಿಫ್ಟ್​ ಆಗಿವೆ. ಶಂಕರ್​ ನಿರ್ದೇಶನದಲ್ಲಿ ರಾಮ್​ ಚರಣ್​ 'ಗೇಮ್​ ಚೇಂಜರ್​' ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಸಮಾನಾಂತರವಾಗಿ ಶಂಕರ್​ ಅವರು ಕಮಲ್​ ಹಾಸನ್​ ಜೊತೆ 'ಭಾರತೀಯಾಡು 2' ಸಿನಿಮಾ ಕೂಡ ಮಾಡುತ್ತಿದ್ದಾರೆ. ಹೀಗಾಗಿ 'ಗೇಮ್​ ಚೇಂಜರ್​' ಚಿತ್ರೀಕರಣ ಕೊಂಚ ನಿಧಾನವಾಗಿ ಸಾಗಿತು. ಅದಕ್ಕಾಗಿ ಈ ವರ್ಷ ರಾಮ್​ ಚರಣ್​ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ತ್ರಿವಿಕ್ರಮ್​ ನಿರ್ದೇಶನದ ಮಹೇಶ್​ ಬಾಬು ಅಭಿನಯದ 'ಗುಂಟೂರು ಖಾರಂ' ಕೂಡ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.

ಇನ್ನು 'ಪುಷ್ಪ: ದಿ ರೈಸ್​' ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ನಟ ಅಲ್ಲು ಅರ್ಜುನ್​. ಆ ಸಿನಿಮಾದ ನಂತರ ಅನೇಕ ನಿರ್ದೇಶಕರು ನಟನಿಗಾಗಿ ಅನೇಕ ಕಥೆಗಳನ್ನು ಸಿದ್ಧಪಡಿಸಿದ್ದರು. ಆದರೆ, ಅವರು 'ಪುಷ್ಪ 2' ಚಿತ್ರಕ್ಕಾಗಿ ಅದೆಲ್ಲವನ್ನೂ ನಿರಾಕರಿಸಿ, ಸುಮಾರು ಹತ್ತು ತಿಂಗಳುಗಳ ಕಾಲ ಬಿಡುವು ಮಾಡಿಕೊಂಡು ಕೇವಲ 'ಪುಷ್ಪ: ದಿ ರೂಲ್​'ನಲ್ಲಿ ಬ್ಯುಸಿಯಾದರು. ಸದ್ಯ ಶೂಟಿಂಗ್​ ಹಂತದಲ್ಲಿರುವ ಈ ಸಿನಿಮಾ ಮುಂದಿನ ವರ್ಷ ಆಗಸ್ಟ್​ 15ರಂದು ತೆರೆಗೆ ಬರಲಿದೆ. ಹಾಗಾಗಿ ಅಲ್ಲು ಅರ್ಜುನ್​ ಸಿನಿಮಾ ಕೂಡ ಈ ವರ್ಷ ಬಿಡುಗಡೆಯಾಗಿಲ್ಲ.

ಜೂನಿಯರ್​ ಎನ್​ಟಿಆರ್​ ಅವರ ಸಿನಿಮಾವೂ ಇದೇ ಹಾದಿಯಲ್ಲಿ ಸಾಗಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಿದ 'ಆರ್​ಆರ್​ಆರ್​' ನಂತರ ಅದಕ್ಕೆ ತಕ್ಕಂತೆಯೇ ಸಿನಿಮಾ ಮಾಡಲು 'ದೇವರ'ವನ್ನು ಆಯ್ದುಕೊಂಡರು. ನಿರ್ದೇಶಕ ಕೊರಟಾಲ ಶಿವ ಅವರಿಗೆ ಸ್ಕ್ರಿಪ್ಟ್​ ರೆಡಿ ಮಾಡಲು ಬೇಕಾದಷ್ಟು ಸಮಯ ಕೊಟ್ಟ ಎನ್​ಟಿಆರ್​, ಒಂದೊಳ್ಳೆ ಕಥೆಯ ಜೊತೆ ಪ್ರೇಕ್ಷಕರನ್ನು ಮನರಂಜಿಸಲು ಸಿದ್ಧರಾಗಿದ್ದಾರೆ. ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗ ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ: ಪ್ರಭಾಸ್ ನಟನೆಯ 'ಸಲಾರ್​'ಗೆ ಸೆನ್ಸಾರ್​ ಮಂಡಳಿಯಿಂದ 'ಎ' ಸರ್ಟಿಫಿಕೇಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.