ETV Bharat / entertainment

ಹೃತಿಕ್ ರೋಷನ್ ಹಾಡಿಗೆ ಹೆಜ್ಜೆ ಹಾಕಿದ ಲಿಲ್ಲಿ & ಹೈಲಿ, ಜಸ್ಟಿನ್ ಬೈಬರ್ ಪತ್ನಿ ಡ್ಯಾನ್ಸ್ ವೈರಲ್! - ಲಿಲ್ಲಿ ಸಿಂಗ್ ಹೈಲಿ ಬೈಬರ್ ಡ್ಯಾನ್ಸ್

ಹಾಸ್ಯನಟಿ ಲಿಲ್ಲಿ ಸಿಂಗ್ ಅವರು ಗಾಯಕ ಜಸ್ಟಿನ್ ಬೈಬರ್ ಪತ್ನಿ ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

Lilly Singh dance with Hailey Bieber
ಲಿಲ್ಲಿ ಸಿಂಗ್ ಮತ್ತು ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್
author img

By

Published : Feb 4, 2023, 2:26 PM IST

ಇಂಡೋ ಕೆನಡಿಯನ್​ ಹಾಸ್ಯನಟಿ ಲಿಲ್ಲಿ ಸಿಂಗ್ (comedian Lilly Singh) ಅವರು ಶುಕ್ರವಾರದಂದು ಸೂಪರ್ ಮಾಡೆಲ್ ಮತ್ತು ಖ್ಯಾತ ಅಂತಾರಾಷ್ಟ್ರೀಯ ಗಾಯಕ ಜಸ್ಟಿನ್ ಬೈಬರ್ (Justin Bieber) ಅವರ ಪತ್ನಿ ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್ (Hailey Rhode Baldwin Bieber) ಅವರೊಂದಿಗಿನ ಹಾಸ್ಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿರುವ ಕಿರು ವಿಡಿಯೋ ಕ್ಲಿಪ್‌ನಲ್ಲಿ, ಲಿಲ್ಲಿ ಮತ್ತು ಹೈಲಿ ಜೋಡಿ ಹೃತಿಕ್ ರೋಷನ್ ಮತ್ತು ಅಮಿಶಾ ಪಟೇಲ್ ಅವರ ನಟನೆಯ 2000ರಲ್ಲಿ ಬಿಡುಗಡೆಯಾದ ಕಹೋ ನಾ ಪ್ಯಾರ್ ಹೈ ಚಿತ್ರದ ಶೀರ್ಷಿಕೆ ಗೀತೆಗೆ ನೃತ್ಯ ಮಾಡಿದ್ದಾರೆ.

ಸೂಪರ್ ವುಮನ್ ಎಂದು ಜನಪ್ರಿಯವಾಗಿರುವ ಹಾಸ್ಯನಟಿ ಲಿಲ್ಲಿ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಮಾನ್ಯವಾಗಿ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಯೂಟ್ಯೂಬ್​ನಲ್ಲಿ 14.6 ಮಿಲಿಯನ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ 12.9 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿರುವ ಖ್ಯಾತ ಯೂಟ್ಯೂಬರ್​ ಇವರು. ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್ ಅವರೊಂದಿಗಿನ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಕಾಮಿಡಿಯನ್​ ಲಿಲ್ಲಿ ಸಿಂಗ್, "ನೀವು ಹೊಸ ಸ್ನೇಹಿತರನ್ನು ಮಾಡಿಕೊಂಡಾಗ, ಅವರು ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್​ನಂತಹ ಸ್ಟನ್ನಿಂಗ್​ ಮಾಡೆಲ್​ ಕೂಡ ಆಗಿದ್ದಾಗ'' ಎಂದು ಬರೆದುಕೊಂಡಿದ್ದಾರೆ.

ಹಾಸ್ಯನಟಿ ಲಿಲ್ಲಿ ಸಿಂಗ್ ಅವರು ಗಾಯಕ ಜಸ್ಟಿನ್ ಬೈಬರ್ ಅವರ ಪತ್ನಿ ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್ ಅವರೊಂದಿಗಿನ ಈ ಕ್ಷಣವನ್ನು ಆನಂದಿಸಿದ್ದಾರೆ. ಶೂಟಿಂಗ್​ ವೇಳೆ ಖುಷಿ ಪಟ್ಟಿದ್ದಾರೆ. ಈ ಮೂಲಕ ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್ ಅವರ ಮೆಚ್ಚಿನ ಕೆನಡಿಯನ್​ ಆಗಿ ಹೊರಹೊಮ್ಮಿದ್ದಾರೆ ಲಿಲ್ಲಿ ಸಿಂಗ್. ಈ ಮೊದಲು ಇವರು ಗಾಯಕ ಜಸ್ಟಿನ್ ಬೈಬರ್ ಅವರ ಮೆಚ್ಚುಗೆಯನ್ನೂ ಸಂಪಾದಿಸಿದ್ದಾರೆ.

ಇದನ್ನೂ ಓದಿ: 'ಪಠಾಣ್​ ಬಿಡಿ, ಆ್ಯಕ್ಷನ್​ ಹೀರೋ ಸಿನಿಮಾ ನೋಡಿ' ಎಂದ ಅಭಿಮಾನಿಗೆ ಆಯುಷ್ಮಾನ್ ಖುರಾನ ಹೀಗಂದ್ರು!

ಹಾಸ್ಯನಟಿ ಲಿಲ್ಲಿ ಸಿಂಗ್ ಅವರು ಈ ಮೊದಲು ಪ್ರಿಯಾಂಕಾ ಚೋಪ್ರಾ, ದಿಲ್ಜಿತ್ ದೋಸಾಂಜ್, ಡ್ರೆವ್ ಬ್ಯಾರಿಮೋರ್ ಮತ್ತು ಇತರೆ ಗಣ್ಯರೊಂದಿಗೆ ಕೆಲಸ ಮಾಡಿದ್ದಾರೆ. 2022ರಲ್ಲಿ ಅವರು ಡ್ರೆವ್ ಬ್ಯಾರಿಮೋರ್ ( Drew Barrymore) ಅವರೊಂದಿಗೆ ಚುರಾ ಕೆ ದಿಲ್ ಮೇರಾ ನೃತ್ಯ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದರು. ಬಳಿಕ ಡ್ರೆವ್ ಬ್ಯಾರಿಮೋರ್ ಅವರ ಟಾಕ್ ಶೋ ದಿ ಡ್ರೂ ಬ್ಯಾರಿಮೋರ್ ನಲ್ಲಿಯೂ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಮದುವೆ ಸಂಭ್ರಮ: ನಾಳೆ ಅರಮನೆ ತಲುಪಲಿರುವ ಜೋಡಿ

ಇನ್ನೂ ಖ್ಯಾತ ಅಂತಾರಾಷ್ಟ್ರೀಯ ಗಾಯಕ ಜಸ್ಟಿನ್ ಬೈಬರ್ 2019ರಲ್ಲಿ ಹೈಲಿ ರೋಡ್ ಬಾಲ್ಡ್​ವಿನ್ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ತಮ್ಮ 25ನೇ ವಯಸ್ಸಿನಲ್ಲಿ 22 ವರ್ಷದ ತಮ್ಮ ಬಹುಕಾಲದ ಗೆಳತಿ ಹೈಲಿ ಜೊತೆ ಮದುವೆಯಾಗಿ ಸಖತ್​ ಸುದ್ದಿ ಮಾಡಿದ್ದರು. ಅವರು ಹಂಚಿಕೊಂಡ ಫೋಟೋಗಳಲ್ಲಿ 'ದಿ ಬೈಬರ್ಸ್- se. 30,2019' ಎಂದು ಬರೆಯಲಾಗಿತ್ತು. ಈ ಮೂಲಕ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ಖಚಿತಪಡಿಸಿದ್ದರು. ಇದೀಗ ಹೈಲಿ ರೋಡ್ ಬಾಲ್ಡ್​ವಿನ್ ಬೈಬರ್ ಜೊತೆ ಹಾಸ್ಯನಟಿ ಲಿಲ್ಲಿ ಸಿಂಗ್ ವಿಡಿಯೋ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.