ETV Bharat / entertainment

ರಾಜರತ್ನನ ಗಂಧದ ಗುಡಿ ಟ್ರೈಲರ್​ ರಿಲೀಸ್: ಅಪ್ಪುನ ಅಪ್ಪು ಆಗೇ ನೋಡೋ ಭಾಗ್ಯ - Gandhadagudi trailer review

ಅಪ್ಪು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಗಂಧದ ಗುಡಿ ಟ್ರೈಲರ್ ಇಂದು ಬಿಡುಗಡೆ ಆಗಿದೆ.

late actor puneeth rajkumar starrer Gandhadagudi movie trailer released
ರಾಜರತ್ನನ ಗಂಧದ ಗುಡಿ ಟ್ರೈಲರ್​ ರಿಲೀಸ್
author img

By

Published : Oct 9, 2022, 10:23 AM IST

Updated : Oct 9, 2022, 11:01 AM IST

ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಗಂಧದ ಗುಡಿ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಟ್ರೈಲರ್ ಅದ್ಭುತವಾಗಿದ್ದು, ನೋಡಿದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಟ್ರೈಲರ್​​ನಲ್ಲಿ ಪ್ರಕೃತಿ ಸೌಂದರ್ಯ, ಜಲ ಜೀವ ರಾಶಿ, ಕಾನನದೊಳಗೆ ಅಪ್ಪು ಪಯಣವನ್ನು ಅದ್ಭುತವಾಗಿ ತೋರಿಸಲಾಗಿದೆ. 'ಕರ್ನಾಟಕದ ಕಾಡು ಉಳಿಸಿ' ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿ ಸಾರಾಂಶ. ನದಿ, ಬೆಟ್ಟ, ಮರ, ಗಿಡ, ಪ್ರಾಣಿ-ಪಕ್ಷಿಗಳ ನೋಟವನ್ನು ಅತ್ಯದ್ಭುತವಾಗಿ ನೈಜವಾಗಿ ಸೆರೆ ಹಿಡಿಯಲಾಗಿದೆ. ವಿಶೇಷವೆಂದ್ರೆ ಅಪ್ಪು ಈ ಸಿನಿಮಾದಲ್ಲೇ ಅಪ್ಪು ಆಗಿಯೇ ನಿಸರ್ಗದ ಜೊತೆ ಬೆರೆತಿದ್ದಾರೆ.

  • " class="align-text-top noRightClick twitterSection" data="">

ಗಂಧದ ಗುಡಿ ಸಿನಿಮಾ ಪ್ರಕೃತಿಯತ್ತ ಒಂದು ಪಯಣ. ನಿಜವಾದ ನಾಯಕನ ಮತ್ತು ಪ್ರಕೃತಿ ಕಾಳಜಿಯ ಕಥೆ. ಬಯಲು ಸೀಮೆಯಿಂದ ಹಿಡಿದು ಸಮುದ್ರ ತೀರದವರೆಗೂ, ಪತನವಾಗಿರುವ ಕಾಡುಗಳಿಂದ, ಪಶ್ಚಿಮ ಘಟ್ಟ, ದಟ್ಟ ಅರಣ್ಯದವರೆಗೂ ಈ ಮಣ್ಣಿನ ಸಿರಿ ಸೆರೆ ಹಿಡಿದಿರುವ ಸಿನಿಮಾ ಇದು. ಪ್ರಕೃತಿಯ ಸಿರಿವಂತಿಕೆಯನ್ನು ಹಾಡುಗಳೊಂದಿಗೆ, ದೃಶ್ಯ ವೈಭವದೊಂದಿಗೆ ಜನರಿಗೆ ಪರಿಚಯಿಸುವ ಉತ್ಸಾಹವನ್ನು ಪುನೀತ್ ರಾಜ್​ಕುಮಾರ್ ಮಾಡಿದ್ದಾರೆ.

ವನ್ಯಜೀವಿಗಳ ಬದುಕು, ಕಾಡಿನ ಸಂರಕ್ಷಣೆ, ಜನ ಸಾಮಾನ್ಯರಿಗೆ ಕಾಡಿನ ಬಗ್ಗೆ ಉತ್ಸಾಹ ಹಾಗೂ ಕಾಳಜಿಯನ್ನು ಹೆಚ್ಚಿಸಲು ಪ್ರಯತ್ನಿಸಿ, ನಮ್ಮ ವ್ಯಕ್ತಿತ್ವದ ಮೇಲೆ ಮಹತ್ತರವಾದ ಬದಲಾವಣೆಯನ್ನು ತರಲು ಅಪ್ಪು ಹೊರಟಿದ್ದರು.

ಆದರೆ ಅವರ ಅಕಾಲಿಕ ನಿಧನದಿಂದ ಆ ಕನಸು ಹಾಗೇ ಉಳಿದಿದೆ. ಇಂದು ಅವರ ನೆನಪಿನಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ತಿಂಗಳಾಂತ್ಯದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಹೌದು, ಈ ವರ್ಷದ ನಾಡಹಬ್ಬ ರಾಜ್ಯೋತ್ಸವವನ್ನು ಅಪ್ಪುವಿನ ಗಂಧದ ಗುಡಿಯೊಂದಿಗೆ ಆಚರಿಸಲು ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 28, 2022 ರಂದು ಪವರ್ ಸ್ಟಾರ್ ಕಂಡ ಈ ಕನಸು ಬಹುಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಅಪ್ಪು ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಷ್ಟ್ರ ಪ್ರಶಸ್ತಿ ಪಡೆದ ವನ್ಯಜೀವಿ ಚಿತ್ರ ನಿರ್ದೇಶಕ ಅಮೋಘವರ್ಷ ನಿರ್ದೇಶನದ ಚಲನಚಿತ್ರ ಇದಾಗಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಕಾಂತಾರ ಹಿಂದಿ, ತೆಲುಗು ಟ್ರೈಲರ್ ಜೊತೆ ರಿಲೀಸ್ ಡೇಟ್ ಅನೌನ್ಸ್... ತಮಿಳು, ಮಲೆಯಾಳಂನಲ್ಲೂ ಸದ್ಯದಲ್ಲೇ ತೆರೆಗೆ

ಟ್ರೈಲರ್​ ವೀಕ್ಷಿಸಿದ ನಟಿ ರಮ್ಯಾ ಸಹ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಟ್ರೈಲರ್​ ವೀಕ್ಷಣೆಗೆ ಅಭಿಮಾನಿಗಳು ಬೆಳಿಗ್ಗೆಯಿಂದಲೇ ನರ್ತಕಿ ಥಿಯೇಟರ್​ ಎದುರು ಜಮಾಯಿಸಿದ್ದರು. ಇದೀಗ ಟ್ರೈಲರ್​ ನೋಡಿ ಸಂಭ್ರಮಾಚರಿಸುತ್ತಿದ್ದಾರೆ. ನರ್ತಕಿ ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಶುಭೋದಯ, ಅಪ್ಪು ಮಗನೆ...ನೀನೆ ನನ್ನನ್ನು ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವೆ ಎಂಬ ಭಾವನೆ! ಇಂದು ಬೆಳಗ್ಗೆ 9:45ಕ್ಕೆ ನರ್ತಕಿ ಚಿತ್ರಮಂದಿರದಲ್ಲಿ ಗಂಧದಗುಡಿ ಟ್ರೈಲರ್ ಬಿಡುಗಡೆ ಸಮಾರಂಭ ಎಂದು ಅಪ್ಪು ಸಹೋದರ, ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್​ ಟ್ವೀಟ್ ಮಾಡಿದ್ದರು. ಇದೀಗ ಬಿಡುಗಡೆ ಆದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದರು. ಈ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು 'ಗಂಧದ ಗುಡಿ'ಯನ್ನು ರಿಲೀಸ್ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿಗಳು ಒಟಿಟಿ ಹಾಗೂ ಯೂಟ್ಯೂಬ್​ಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, 'ಗಂಧದ ಗುಡಿ'ಯನ್ನು ಪುನೀತ್ ಅವರ ಆಸೆಯಂತೆ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳಿಂದ ಉತ್ತಮ ಬೆಂಬಲ ಸಿಗುವ ನಿರೀಕ್ಷೆ ಇದೆ.

Last Updated : Oct 9, 2022, 11:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.