ETV Bharat / entertainment

ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್​ಕುಮಾರ್

author img

By

Published : Mar 15, 2023, 6:36 PM IST

ಕೆಲ ಸಮಯದ ಹಿಂದೆ ಕಬ್ಜ ಸಿನಿಮಾ ನಿರ್ದೇಶಕ ಆರ್ ಚಂದ್ರು ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು ದಿ. ನಟ ಪುನೀತ್​ ರಾಜ್​ಕುಮಾರ್.

late actor puneeth rajkumar once said kabzaa will hit
ಕಬ್ಜ ಸಿನಿಮಾ ಸೆಟ್

ಕಬ್ಜ ಸಿನಿಮಾ ಸೆಟ್

ಕಬ್ಜ ಮೂಲಕ ಸಖತ್​ ಸುದ್ದಿಯಲ್ಲಿರುವ ನಿರ್ದೇಶಕ ಆರ್ ಚಂದ್ರು ಅವರು ಹ್ಯಾಟ್ರಿಕ್​ ಹೀರೋ ಶಿವ ರಾಜ್‍ಕುಮಾರ್ ಜೊತೆ ಮೈಲಾರಿ ಸಿನಿಮಾ ಮಾಡಿದ ವೇಳೆ ದಿ. ಪುನೀತ್​ ರಾಜ್​ಕುಮಾರ್​ ದನಿಯಾಗಿದ್ರು. ಮೈಲಾಪುರ ಮೈಲಾರಿ ಎಂಬ ಹಾಡು ಹಾಡಿ ಆ ಹಾಡಿಗೊಂದು ಎನರ್ಜಿ ತುಂಬಿದ್ರು. ಪ್ರೇಕ್ಷಕರನ್ನು ಕುಂತಲ್ಲೇ ಕುಣಿಸುವಂತಹ ಪವರ್ ತುಂಬಿದ್ರು. ಅಂದಿನಿಂದಲೂ ನಿರ್ದೇಶಕ ಆರ್ ಚಂದ್ರು ಅವರ ಮೇಕಿಂಗ್, ತೆರೆ ಮೇಲೆ ಕಥೆ ಹೇಳುವ ಶೈಲಿ ಪುನೀತ್​ ರಾಜ್​ಕುಮಾರ್​​ ಅವರಿಗೆ ಅಚ್ಚುಮೆಚ್ಚಾಗಿತ್ತು.

ಕಬ್ಜ ಸಿನಿಮಾಗೆ ಬೆನ್ನೆಲುಬಾಗಿ ನಿಂತಿದ್ದ ಅಪ್ಪು: ಜೊತೆಗೊಂದು ಸಿನಿಮಾ ಮಾಡೋಣ ಎಂದೂ ಸಹ ಸಾಕಷ್ಟು ಬಾರಿ ಹೇಳಿಕೊಂಡಿದ್ರು. ಆದ್ರೆ ವಿಧಿಯಾಟಕ್ಕೆ ಆ ಕನಸು ಕಮರಿತು. ಇನ್ನು, ಕಬ್ಜ ಆರ್ ಚಂದ್ರು ಮಹತ್ವಾಕಾಂಕ್ಷೆಯ ಸಿನಿಮಾ. ಈ ಸಿನಿಮಾ ಬಜೆಟ್ ನೂರು ಕೋಟಿ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡ್ತೀನಿ ಅಂತಾ ಆರ್ ಚಂದ್ರು ಹೊರಟಾಗ ಅಪ್ಪು ಅಚ್ಚರಿ ವ್ಯಕ್ತಪಡಿಸಿದ್ರು. ಇಷ್ಟೊಂದು ರಿಸ್ಕ್ ತೆಗೆದುಕೊಂಡಿದ್ದೀರಿ ಹುಷಾರು ಎಂದು ಎಚ್ಚರಿಸಿದ್ರು. ಜೊತೆಗೆ ನಾನಿದ್ದೇನೆಂದು ಬೆನ್ನು ತಟ್ಟಿ, ಬೆನ್ನೆಲುಬಾಗಿ ನಿಂತಿದ್ರು.

ಕಬ್ಜ ಸಿನಿಮಾ ಸೆಟ್​ಗೆ ಅಪ್ಪು ಭೇಟಿ: ನಿರ್ದೇಶಕ ಆರ್ ಚಂದ್ರು ಈ ಮೊದಲೇ ಹೇಳಿದಂತೆ ಸ್ಯಾಂಡಲ್‍ವುಡ್‍ನಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ ಅಂದಾಗ ಪುನೀತ್‍ ಅವರಿಗೂ ಆ ಸಿನಿಮಾ ಸೆಟ್‍ಗೆ ಹೋಗಬೇಕು, ಮೇಕಿಂಗ್ ಬಗ್ಗೆ ನೋಡಬೇಕು ಎಂದು ಕುತೂಹಲ ವ್ಯಕ್ತಪಡಿಸಿದ್ರು. ಹೀಗಾಗಿ ಅಪ್ಪು ಬದುಕಿದ್ದ ವೇಳೆ ಅಂದ್ರೆ ಬಹಳ ದಿನಗಳ ಹಿಂದೆ ಕಬ್ಜ ಸೆಟ್‍ಗೆ ಭೇಟಿ ಕೊಟ್ಟಿದ್ದರು. ಮಾನಿಟರ್​ನಲ್ಲಿ ಶಾಟ್ಸ್ ನೋಡುತ್ತ ಖುಷಿ ಪಟ್ಟಿದ್ರು. ನೀವು ಸಾಮಾನ್ಯರಲ್ಲ ಎಂದು ಚಂದ್ರು ಅವರ ಬೆನ್ನು ತಟ್ಟಿದ್ರು. ಇದು ದೊಡ್ಡ ಸಿನಿಮಾ ಆಗುತ್ತೆ ಎಂದು ಭವಿಷ್ಯ ನುಡಿದಿದ್ರು. ನಿರ್ದೇಶಕ ಚಂದ್ರು ಮೇಕಿಂಗ್ ಶೈಲಿಗೆ ಫಿದಾ ಆಗಿದ್ರು ಪವರ್​ ಸ್ಟಾರ್. ಶೂಟಿಂಗ್ ಸಮಯದಲ್ಲಿ ಕೆಲವು ಶಾಟ್ಸ್ ನೋಡಿಯೇ ಇದು ಇಂಡಿಯನ್ ಸಿನಿಮಾದಲ್ಲಿ ಧೂಳೆಬ್ಬಿಸಲಿದೆ ಎಂದು ತಿಳಿಸಿದ್ದರು ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​.

ಕಬ್ಜ ಸದ್ದು: ಕಬ್ಜ ಸಿನಿಮಾ ರಿಲೀಸ್‍ಗೆ ಸಜ್ಜಾಗಿದೆ. ಕನ್ನಡದ ಮೂವರು ದಿಗ್ಗಜ ನಟರು ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿದ ಅಮಿತಾಭ್ ಬಚ್ಚನ್​ ಫಿದಾ ಆಗಿದ್ದಾರೆ. ಅಮಿತಾಭ್ ಪುತ್ರ ಅಭಿಷೇಕ್ ಕೂಡ ಟ್ರೇಲರ್​ ಮೆಚ್ಚಿದ್ದಾರೆ. ಅಜಯ್ ದೇವಗನ್, ರಾಕೇಶ್ ರೋಷನ್ ಸೇರಿದಂತೆ ಹಲವರು ಮನಸಾರೆ ಕೊಂಡಾಡಿದ್ದಾರೆ.

ಇದನ್ನೂ ಓದಿ: ನಾಟು ನಾಟು ಆಸ್ಕರ್​ಗೆ ಅರ್ಹವೇ? ಎಂದು ಪ್ರಶ್ನಿಸಿದ ನಟಿ ಹಿಗ್ಗಾಮುಗ್ಗಾ ಟ್ರೋಲ್​!

ಕಬ್ಜ ರಿಲೀಸ್‍ಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ವಿಶೇಷ ಅಂದ್ರೆ ಪುನೀತ್​ ರಾಜ್​ಕುಮಾರ್​ ಅವರಿಗೆ ಈ ಸಿನಿಮಾ ಅರ್ಪಣೆ ಆಗಲಿದೆ. ಮಾರ್ಚ್ 17 ಅಪ್ಪು ಜನ್ಮದಿನ. ಈ ಹಿನ್ನೆಲೆ ಅಂದೇ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕಬ್ಜ ತೆರೆಕಾಣಲಿದೆ.

ಇದನ್ನೂ ಓದಿ: ಕನ್ನಡ ಗೊತ್ತಿಲ್ಲವೆಂದು ಅವಮಾನ: ಸಲ್ಮಾನ್ ಯೂಸುಫ್ ಖಾನ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.