ETV Bharat / entertainment

ಅಥಿಯಾ ಶೆಟ್ಟಿ ಜನ್ಮದಿನ: ವಿಶೇಷವಾಗಿ ಶುಭಕೋರಿದ ಬಾಯ್​​ಫ್ರೆಂಡ್​ ರಾಹುಲ್ - ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್

ನಟಿ ಅಥಿಯಾ ಶೆಟ್ಟಿ ಜನ್ಮದಿನ ಹಿನ್ನೆಲೆ ತಂದೆ ಸುನೀಲ್​ ಶೆಟ್ಟಿ ಮತ್ತು ಬಾಯ್​​ಫ್ರೆಂಡ್​ ಕೆಎಲ್ ರಾಹುಲ್ ವಿಶೇಷವಾಗಿ ಶುಭ ಕೋರಿದ್ದಾರೆ.

KL Rahul wishes on Athiya Shetty birthday
ಅಥಿಯಾ ಶೆಟ್ಟಿ ಜನ್ಮದಿನ
author img

By

Published : Nov 5, 2022, 4:17 PM IST

ಬಾಲಿವುಡ್​ನ ನಟ ಸುನೀಲ್​ ಶೆಟ್ಟಿ ಪುತ್ರಿ, ನಟಿ ಅಥಿಯಾ ಶೆಟ್ಟಿ 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿಗೆ ಕುಟುಂಬಸ್ಥರು, ಆತ್ಮೀಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಇನ್​ಸ್ಟಾ​ಗ್ರಾಮ್​ನಲ್ಲಿ ಸುನೀಲ್​ ಶೆಟ್ಟಿ ಮಗಳೊಂದಿಗಿನ ಫೋಟೋ ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ನನ್ನ ಜೀವನ ಎಂದು ಬರೆದಿದ್ದಾರೆ. ಚಿತ್ರದಲ್ಲಿ ತಂದೆ-ಮಗಳು ನಗು ಮೊಗದಲ್ಲಿ ಮಿಂಚಿದ್ದಾರೆ. ಈ ಫೋಟೋ ಭಾರಿ ಮೆಚ್ಚುಗೆ ಪಡೆದಿದೆ.

ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಭಾವಿ ಪತ್ನಿ ಅಥಿಯಾ ಶೆಟ್ಟಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿ ತುಂಬಿದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೂರು ಚಿತ್ರಗಳನ್ನು ಹಂಚಿಕೊಂಡ ಅವರು, ನನ್ನ ಪ್ರೀತಿಗೆ ಜನ್ಮದಿನದ ಶುಭಾಶಯಗಳು, ನೀವು ಎಲ್ಲವನ್ನೂ ಉತ್ತಮಗೊಳಿಸುತ್ತೀರಿ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಖುಷಿ ಜನ್ಮದಿನಕ್ಕೆ ವಿಶೇಷವಾಗಿ ಶುಭಕೋರಿದ ಸಹೋದರಿ ಜಾನ್ವಿ ಕಪೂರ್

ಪೋಸ್ಟ್ ಹಾಕಿದ ಕೂಡಲೇ ಅಥಿಯಾ ಶೆಟ್ಟಿ ಐ ಲವ್​ ಯೂ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನೂ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ 2023ರ ಜನವರಿಯಲ್ಲಿ ಮಹಾರಾಷ್ಟ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

KL Rahul wishes on Athiya Shetty birthday
ರಾಹುಲ್ ಮತ್ತು ಅಥಿಯಾ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.