ETV Bharat / entertainment

ಪತ್ನಿ ಅಥಿಯಾ ರ‍್ಯಾಂಪ್​ ವಾಕ್​ಗೆ ಕೆ.ಎಲ್.ರಾಹುಲ್​ ಮೆಚ್ಚುಗೆ - ಈಟಿವಿ ಭಾರತ ಕನ್ನಡ

ಲಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಅಥಿಯಾ ಶೆಟ್ಟಿ ರ‍್ಯಾಂಪ್​ ವಾಕ್ ಮಾಡಿದ್ದು, ಪತಿ ಕೆ.ಎಲ್.ರಾಹುಲ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ramp-walk
ಲಾಕ್ಮೆ ಫ್ಯಾಶನ್​ ವೀಕ್​ 2023
author img

By

Published : Mar 12, 2023, 11:05 AM IST

ಕ್ರಿಕೆಟಿಗ ಕೆ.ಎಲ್.ರಾಹುಲ್ ತಮ್ಮ ಪತ್ನಿ ಮತ್ತು ನಟಿ ಅಥಿಯಾ ಶೆಟ್ಟಿ ಅವರನ್ನು ಅಭಿನಂದಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಲಾಕ್ಮೆ ಫ್ಯಾಶನ್​ ವೀಕ್​ 2023 ರಲ್ಲಿ ಅಥಿಯಾ ಶೆಟ್ಟಿ ರ‍್ಯಾಂಪ್​ ವಾಕ್​ ಮಾಡಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ರಾಹುಲ್​ ಪಿಂಕ್​ ಹಾರ್ಟ್​ ಎಮೋಜಿನೊಂದಿಗೆ ಅಥಿಯಾ ಶೆಟ್ಟಿ ಅವರನ್ನು ಟ್ಯಾಗ್​ ಮಾಡಿದ್ದಾರೆ.

ಅಥಿಯಾ ಕೂಡ ರಾಹುಲ್​ ಸ್ಟೋರಿಯನ್ನು ಮರು ಹಂಚಿಕೊಂಡು ಕೃತಜ್ಞತೆ ಹೇಳಿದ್ದಾರೆ. ಜೊತೆಗೆ 'ಲವ್​ ಯು' ಎಂದು ಬರೆದು ಪತಿಯ ಸ್ಟೋರಿಗೆ ಪ್ರತಿಕ್ರಿಯಿಸಿದ್ದಾರೆ. ಲಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಅಥಿಯಾ ಶೆಟ್ಟಿ ನೇರಳೆ ಬಣ್ಣದ ಉಡುಪಿನಲ್ಲಿ ರ‍್ಯಾಂಪ್​ ವಾಕ್​ ಮಾಡಿದ್ದರು.

ramp-walk
ಪತ್ನಿ ಅಥಿಯಾ ರ‍್ಯಾಂಪ್​ ವಾಕ್​ಗೆ ಕೆಎಲ್​ ರಾಹುಲ್​ ಮೆಚ್ಚುಗೆ

ರಾಹುಲ್​- ಅಥಿಯಾ ವಿವಾಹ: ಜನವರಿ 23 ರಂದು ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು​ ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ಅಥಿಯಾ ಶೆಟ್ಟಿ ತಂದೆ, ನಟ ಸುನೀಲ್​ ಶೆಟ್ಟಿ ಫಾರ್ಮ್‌ಹೌಸ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಕೆಲವೇ ಮಂದಿಯ ಸಮ್ಮುಖದಲ್ಲಿ ಈ ಮದುವೆ ಸಮಾರಂಭ ನಡೆದಿತ್ತು. ವಿವಾಹವಾಗುವವರೆಗೂ ತಮ್ಮ ಪ್ರೀತಿಯನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದ ಈ ಜೋಡಿ ಮದುವೆ ಬಳಿಕವಷ್ಟೇ ಫೋಟೋ ಹಂಚಿಕೊಂಡಿದ್ದರು.

ಇದನ್ನೂ ಓದಿ: ಲಾಕ್ಮೆ ಫ್ಯಾಶನ್ ವೀಕ್ 2023: ತುಂಬು ಗರ್ಭಿಣಿ ರ‍್ಯಾಂಪ್​ ವಾಕ್​ಗೆ ಜಾಹ್ನವಿ ಕಪೂರ್​ ಮೆಚ್ಚುಗೆ

ವಿವಾಹ ಸಮಾರಂಭದ ದಿನ ಕೆಲವು ಫೋಟೋಗಳನ್ನಷ್ಟೇ ಈ ಜೋಡಿ ಶೇರ್ ಮಾಡಿಕೊಂಡಿದ್ದರು. ಬಳಿಕ ಹಂತ ಹಂತವಾಗಿ ಅರಿಶಿಣ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳ ಫೊಟೋಗಳನ್ನು ಹಂಚಿಕೊಂಡರು. ಅವರ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಜೊತೆಗೆ ಭಾರೀ ಮೆಚ್ಚುಗೆ ಗಳಿಸಿದ್ದವು.

ಡೇಟಿಂಗ್​ನಲ್ಲಿದ್ದ ಜೋಡಿ: ಕರ್ನಾಟಕ ಮೂಲದವರಾದ ನಟ ಸುನೀಲ್​​ ಶೆಟ್ಟಿ ಪುತ್ರಿ ಅಥಿಯಾ, ರಾಹುಲ್​ ಜೊತೆ ಬಹು ಸಮಯದಿಂದ ಡೇಟಿಂಗ್​​ನಲ್ಲಿದ್ದರು ಎಂಬ ಗಾಸಿಪ್​ ಎಲ್ಲೆಡೆ ಕೇಳಿಬರುತ್ತಿತ್ತು. ಆದರೆ, ತಮ್ಮ ಪ್ರೀತಿ ಬಗ್ಗೆ ಆಗಲಿ ಅಥವಾ ಮದುವೆ ವಿಷಯವನ್ನಾಗಲಿ ಈ ಜೋಡಿ ಎಲ್ಲಿಯೂ ಮುಕ್ತವಾಗಿ ಚರ್ಚಿಸಿರಲಿಲ್ಲ. ಸಂದರ್ಶನಗಳಲ್ಲಿ ತಂದೆ ಸುನೀಲ್​ ಶೆಟ್ಟಿ ಕೆಲವು ಸುಳಿವುಗಳನ್ನು ನೀಡಿದ್ದರಷ್ಟೇ. ಮದುವೆ ಬಳಿಕ ಅಂದೇ ನಟ ​ಸುನೀಲ್​​ ಶೆಟ್ಟಿ ಅಧಿಕೃತವಾಗಿ ಈ ಮದುವೆಯ ಬಗ್ಗೆ ಖಚಿತಪಡಿಸಿದ್ದರು.

ಇದನ್ನೂ ಓದಿ: ಅಲನ್ನಾ ಮದುವೆ ಸಂಭ್ರಮ: ಶ್ವೇತ ವರ್ಣದ ಉಡುಗೆಯಲ್ಲಿ ಕಂಗೊಳಿಸಿದ ಸಂಬಂಧಿ ಅನನ್ಯಾ ಪಾಂಡೆ

ವಿವಾಹದ ನಂತರ ನವದಂಪತಿ ಅಥಿಯಾ ಮತ್ತು ರಾಹುಲ್​ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರಕ್ಕೆ ಭೇಟಿ ಕೊಟ್ಟು ಬಾಬಾ ಮಹಾಕಾಲ್​ಗೆ ಪೂಜೆ ಸಲ್ಲಿಸಿದ್ದರು. ಫೆಬ್ರವರಿ 25 ಶನಿವಾರದಂದು ದಂಪತಿ ಶಿವನಿಗೆ ಪೂಜೆ ಸಲ್ಲಿಸಿ ಬಳಿಕ ಬಾಬಾ ಮಹಾಕಾಲ್ ಗರ್ಭಗುಡಿಗೆ ತೆರಳಿ ನಮನ ಸಲ್ಲಿಸಿದ್ದರು. ಅಥಿಯಾ ಶೆಟ್ಟಿ ಹಳದಿ ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಸ್ಟಾರ್​ ಕ್ರಿಕೆಟಿಗ ರಾಹುಲ್​ ಧೋತಿ ಧರಿಸಿ ದೇವಾಲಯಕ್ಕೆ ಬಂದಿದ್ದರು.

ಇದನ್ನೂ ಓದಿ: ಬಂದೂಕಿನೊಂದಿಗೆ ಛತ್ರಿ ಹಿಡಿದು ಬಂದ 'ಎಕ್ಸ್‌ಕ್ಯೂಸ್ ಮೀ' ಹೀರೋ..'ವೀರ್ ಸಾವರ್ಕರ್ ಸಿನಿಮಾ'ದ ಫಸ್ಟ್ ಲುಕ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.