ETV Bharat / entertainment

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಕಲೆಕ್ಷನ್​​ ಎಷ್ಟು ಗೊತ್ತಾ? - ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಕಲೆಕ್ಷನ್

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಒಟ್ಟು 41 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

Kisi ka Bhai Kisi ki Jaan
ಕಿಸಿ ಕಾ ಭಾಯ್ ಕಿಸಿ ಕಿ ಜಾನ್
author img

By

Published : Apr 23, 2023, 4:57 PM IST

ಮೊದಲ ದಿನದ 15.8 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದ ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರ ಎರಡನೇ ದಿನ 25 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಯಶಸ್ವಿಯಾಯಿತು.

ಸಲ್ಮಾನ್ ಖಾನ್ ಮುಖ್ಯಭೂಮಿಕೆಯ 'ಕಿಸಿ ಕಾ ಭಾಯ್​​ ಕಿಸಿ ಕಿ ಜಾನ್' ಶುಕ್ರವಾರದಂದು (21-4-23) ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ನಾಲ್ಕು ವರ್ಷಗಳ ಬ್ರೇಕ್​ ನಂತರ ಬಂದ ಚಿತ್ರವಿದು. ಪಠಾಣ್​ ಬಳಿಕ ಬಂದ ಬಹುನಿರೀಕ್ಷಿತ ಚಿತ್ರವಿದು. ಆದ್ರೆ ಪಠಾಣ್​ ಮತ್ತು ಸಲ್ಮಾನ್​ ಕೊನೆಯ ಸಿನಿಮಾಗೆ ಹೋಲಿಸಿದರೆ ಕಲೆಕ್ಷನ್​ ವಿಚಾರದಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಹಿಂದೆ ಉಳಿದಿದೆ. ಎರಡು ಅಂಕಿಗಳೊಂದಿಗೆ ಬಾಕ್ಸ್​ ಆಫೀಸ್ ಸಂಖ್ಯೆ ಆರಂಭಗೊಂಡಿದ್ದರೂ, ನಿರೀಕ್ಷೆ ತಲುಪುವಲ್ಲಿ ಚಿತ್ರ ವಿಫಲವಾಗಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ. ವಿಮರ್ಶೆಯಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನ ಮೊದಲ ದಿನ 15.81 ಕೋಟಿ ರೂಪಾಯಿ, ಎರಡನೇ ದಿನ 25 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಎರಡು ದಿನಗಳಲ್ಲಿ ಒಟ್ಟು 41 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಸಲ್ಮಾನ್ ಖಾನ್​ ಅವರ ಕೊನೆಯ ಭಾರತ್ (2019) ಸಿನಿಮಾ ಮೊದಲ ದಿನ 42.30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ಪಲಕ್ ತಿವಾರಿ, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್ ಮತ್ತು ಜಗಪತಿ ಬಾಬು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶನಿವಾರದಂದು ಈ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾದ ಆಕ್ಯುಪೆನ್ಸಿ ಶೇ. 27.05ರಷ್ಟಿತ್ತು. ಈದ್ ಸಂದರ್ಭ ಬಿಡುಗಡೆ ಆದ ಚಿತ್ರ ಎರಡನೇ ದಿನ (ವಾರಾಂತ್ಯ) ಉತ್ತಮ ವ್ಯವಹಾರ ನಡೆಸಿದೆ. ಇಂದು ಭಾನುವಾರ, ರಜಾ ದಿನ ಹಿನ್ನೆಲೆ ಕಲೆಕ್ಷನ್​ ಸಂಖ್ಯೆ ಮತ್ತಷ್ಟು ಏರುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ವಿಷ್ಣುವರ್ಧನ್​ಗೆ ದೇವರ ಸ್ಥಾನ ಕೊಟ್ಟ ಅವಿನಾಶ್, ಮಾಳವಿಕಾ: ಮಗನ ಸ್ಥಿತಿ ನೆನೆದು ದಂಪತಿ ಭಾವುಕ!

ಈದ್​ ಸಂದರ್ಭ ತೆರೆಕಂಡಿರುವ ಸಲ್ಮಾನ್​ ಸಿನಿಮಾಗಳ ಪೈಕಿ, 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಅತಿ ಕಡಿಮೆ ಓಪನಿಂಗ್ (ಮೊದಲ ದಿನದ ಕಲೆಕ್ಷನ್​) ಪಡೆದಿರುವ ಎರಡನೇ ಚಿತ್ರ. 2010ರಲ್ಲಿ ಬಿಡುಗಡೆಯಾದ ದಬಾಂಗ್ 14.10 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಭಾರತ್‌ 42.30 ಕೋಟಿ ರೂ ಗಳಿಸಿತ್ತು. ಇದೀಗ 41 ಕೋಟಿ ರೂ. ಸಂಗ್ರಹಿಸಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌' ಒಟ್ಟು ಕಲೆಕ್ಷನ್​ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಅಖಿಲ್ ಅಕ್ಕಿನೇನಿಯಿಂದ ರೌಟೇಲಾಗೆ ಕಿರುಕುಳ ಆರೋಪ: ಉಮೈರ್ ಸಂಧು ವಿರುದ್ಧ ಸಿಡಿದೆದ್ದ ನಟಿ

ಇನ್ನು ಟೈಗರ್​ 3 ಇದೇ ವರ್ಷ ಬಿಡುಗಡೆ ಆಗಲಿರುವ ಸಲ್ಮಾನ್​ ಅವರ ಬಹುನಿರೀಕ್ಷಿತ ಚಿತ್ರ. ದೀಪಾವಳಿ ಸಂದರ್ಭ ತೆರೆ ಕಾಣಲು ಸಜ್ಜಾಗುತ್ತಿರುವ ಟೈಗರ್​ 3 ಸಿನಿಮಾದಲ್ಲಿ ಸಲ್ಮಾನ್​ ಜೊತೆ ಕತ್ರಿನಾ ಕೈಫ್​ ತೆರೆ ಹಂಚಿಕೊಂಡಿದ್ದು, ಪಠಾಣ್​ ಹೀರೋ ಶಾರುಖ್​ ಖಾನ್​​ ಅತಿಥಿ ಪಾತ್ರ ವಹಿಸಲಿದ್ದಾರೆ. ಭರ್ಜರಿ ಆ್ಯಕ್ಷನ್​ ಸೀನ್​ಗಳಲ್ಲಿ ಖಾನ್​​ಗಳು ಆರ್ಭಟಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.