ETV Bharat / entertainment

'ಕಿರಿಕ್​ ಪಾರ್ಟಿ' ಶೈಲಿಯಲ್ಲೇ ಮತ್ತೊಂದು ಸಿನಿಮಾ: ಹೊಸ ಅಪ್​ಡೇಟ್​ ನೀಡಿದರು ರಕ್ಷಿತ್​ ಶೆಟ್ಟಿ - etv bharat kannada

Paramvah studios new movie update: 'ಕಿರಿಕ್​ ಪಾರ್ಟಿ'ಯಂತಹದ್ದೇ ಮತ್ತೊಂದು ಸಿನಿಮಾ ಮಾಡಲು ರಕ್ಷಿತ್​ ಶೆಟ್ಟಿ ರೆಡಿಯಾಗಿದ್ದಾರೆ. ಈ ಬಗ್ಗೆ ನಾಳೆ ಹೊಸ ಅಪ್​ಡೇಟ್​ ಹೊರಬೀಳಲಿದೆ.

Kirik Party completed 7 years Paramvah studios give new update
'ಕಿರಿಕ್​ ಪಾರ್ಟಿ' ಶೈಲಿಯಲ್ಲೇ ಮತ್ತೊಂದು ಸಿನಿಮಾ: ಹೊಸ ಅಪ್​ಡೇಟ್​ ನೀಡಿದ್ರು ರಕ್ಷಿತ್​ ಶೆಟ್ಟಿ
author img

By ETV Bharat Karnataka Team

Published : Dec 12, 2023, 4:41 PM IST

Updated : Dec 12, 2023, 4:53 PM IST

ಸಿಂಪಲ್​ ಕಥೆ, ಡಬಲ್​ ಮನರಂಜನೆ, ಮತ್ತೊಮ್ಮೆ ನೋಡಬೇಕೆನಿಸುವ ದೃಶ್ಯಗಳು, ಅದ್ಭುತ ಪಾತ್ರಗಳ ಪರಿಚಯ, ಸಹಜ ಅಭಿನಯ, ಕಾಮಿಡಿ ಡೈಲಾಗ್ಸ್​, ಹೆವಿ ಎಂಟರ್​ಟೈನ್​ಮೆಂಟ್​... ಇದಕ್ಕೆಲ್ಲಾ ಒಂದೇ ಹೆಸರು 'ಕಿರಿಕ್​ ಪಾರ್ಟಿ'. ರಿಷಬ್​ ಶೆಟ್ಟಿ ನಿರ್ದೇಶಿಸಿ, ರಕ್ಷಿತ್​ ಶೆಟ್ಟಿ ನಟಿಸಿರುವ ಕನ್ನಡದ ಸೂಪರ್​ ಹಿಟ್​ ಸಿನಿಮಾ ತೆರೆ ಕಂಡು 7 ವರ್ಷಗಳೇ ಆಗಿವೆ. ಈ ಚಿತ್ರದ ಕಥೆ ಇಂದಿಗೂ ಎಲ್ಲರಿಗೂ ನೆನಪಿದೆ. ಮತ್ತೊಮ್ಮೆ ಇಂತಹದ್ದೊಂದು ಸಿನಿಮಾ ತೆರೆ ಮೇಲೆ ನೋಡಲು ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  • We heard you! And I can assure you that this time the party is going to be crazier. Stay tuned for an update tomorrow at 10:06 AM ☺️

    ಈ ಸಲ ಪಾರ್ಟಿ ಜೋರು! pic.twitter.com/pe4UWtEFvI

    — Rakshit Shetty (@rakshitshetty) December 12, 2023 " class="align-text-top noRightClick twitterSection" data=" ">

ಹೌದು. 2016, ಡಿಸೆಂಬರ್​ 30ರಂದು ಬಿಡುಗಡೆಯಾದ 'ಕಿರಿಕ್​ ಪಾರ್ಟಿ' ಸಿನಿಮಾ ಕಾಲೇಜು ಲೈಫ್​ ಸ್ಟೋರಿಯನ್ನು ಒಳಗೊಂಡಿತ್ತು. ಪಿಯುಸಿ ಮುಗಿಸಿ ಡಿಗ್ರಿ ಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳ ಕಥೆ, ವ್ಯಥೆಯೇ ಈ ಚಿತ್ರದ ತಿರುಳು. ಪಾಠಕ್ಕಿಂತ ಹೆಚ್ಚಾಗಿ ತುಂಟಾಟಗಳು, ತಪ್ಪು ಮಾಡಿ ಪ್ರಿನ್ಸಿಪಾಲ್​ ಕೈಗೆ ಸಿಕ್ಕಿ ಬೀಳುವುದು, ಕಾಲೇಜಲ್ಲೊಂದು ಲವ್​ ಸ್ಟೋರಿ, ಹಾಸ್ಟೆಲ್​ ಲೈಫ್​.. ಹೀಗೆ ಎಲ್ಲಾ ವಿಚಾರಗಳನ್ನು ಒಂದೇ ಸಿನಿಮಾದಲ್ಲಿ ಅತ್ಯಂತ ಅದ್ಭುತವಾಗಿ ಮತ್ತು ಸಹಜವಾಗಿ ತೋರಿಸಲಾಗಿತ್ತು. ಈ ಸಿನಿಮಾವನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಕೂಡ ನೋಡಿ ಸಖತ್ ಎಂಜಾಯ್​ ಮಾಡಿದ್ರು.

ಸದ್ಯ ಈ ಸಿನಿಮಾ ಬಂದು 7 ವರ್ಷವೇ ಆಗಿದೆ. ಮತ್ತೊಮ್ಮೆ ಇಂತಹದ್ದೇ ಕಥೆಯನ್ನು ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಯಾಕೆ ಮಾಡುತ್ತಿಲ್ಲ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಎಂಬಂತೆ ರಕ್ಷಿತ್​ ಶೆಟ್ಟಿ ನ್ಯೂ ಅಪ್​ಡೇಟ್​ ಜೊತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. 'ಈ ಸಲ ಪಾರ್ಟಿ ಜೋರು' ಎಂಬ ಶೀರ್ಷಿಕೆಯಡಿ, 'ನಿಮ್ಮೆಲ್ಲರ ಬೇಡಿಕೆ ಕೇಳಿಸಿದೆ. ಈ ಬಾರಿ ಇನ್ನಷ್ಟು ಕ್ರೇಜಿ ಪಾರ್ಟಿ ಮಾಡಲಾಗುವುದು. ನಾಳೆ (ಡಿಸೆಂಬರ್​ 13) ಬೆಳಗ್ಗೆ ಹತ್ತು ಗಂಟೆ ಆರು ನಿಮಿಷಕ್ಕೆ ಈ ಕುರಿತು ಹೊಸ ಅಪ್​ಡೇಟ್​ ಹೊರಬೀಳಲಿದೆ' ಎಂಬುದಾಗಿ ಅವರು ತಿಳಿಸಿದ್ದಾರೆ.

ಈ ಹೊಸ ಅಪ್​ಡೇಟ್​ ನೋಡಿ ರಕ್ಷಿತ್​ ಶೆಟ್ಟಿ ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದೆ. ಕಳೆದ ವರ್ಷ ಪರವಃ ಸ್ಟುಡಿಯೋದಿಂದ 'ಬ್ಯಾಚುರಲ್​ ಪಾರ್ಟಿ' ಸಿನಿಮಾ ಅನೌನ್ಸ್​ ಆಗಿತ್ತು. ಇದೇ ಸಿನಿಮಾದ ಕುರಿತು ನಾಳೆ ಅಪ್​ಡೇಟ್​ ನೀಡುತ್ತಾರೆಯೇ? ಎಂಬ ಸಂದೇಹವೂ ಫ್ಯಾನ್ಸ್​ಗೆ ಇದೆ. ಅಥವಾ 'ಕಿರಿಕ್​ ಪಾರ್ಟಿ 2' ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರಲಿದೆಯಾ? ಎಂಬ ಅನುಮಾನವೂ ಇದೆ. ಇದಕ್ಕೆಲ್ಲಾ ಉತ್ತರ ಸಿಗಬೇಕಾದರೆ ನಾಳೆಯವರೆಗೆ ಕಾಯಲೇಬೇಕು.

ಇನ್ನೂ 'ಕಿರಿಕ್​ ಪಾರ್ಟಿ' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಸಾನ್ವಿ ಪಾತ್ರದಲ್ಲಿ ಮಿಂಚಿದ್ದ ರಶ್ಮಿಕಾ ಮುಂದೆ ನ್ಯಾಷನಲ್​ ಕ್ರಶ್​ ಎಂದೇ ಖ್ಯಾತಿ ಪಡೆದರು. ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕರ್ಣನ ಪಾತ್ರದಲ್ಲಿ ಸಹಜ ಅಭಿನಯದ ಮೂಲಕ ಮನರಂಜಿಸಿದ್ದ ರಕ್ಷಿತ್​ ಶೆಟ್ಟಿಗೂ ಅಪಾರ ಅಭಿಮಾನಿಗಳ ಬಳಗವೇ ಸೃಷ್ಟಿಯಾಯ್ತು. ಒಟ್ಟಿನಲ್ಲಿ ಈ ಸಿನಿಮಾದ ಪಾತ್ರಗಳು, ಕಥೆ, ಹಾಡು ಎಲ್ಲವೂ ಜನರ ಮನದಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದಿದೆ.

ಇದನ್ನೂ ಓದಿ: 'ಹಾಯ್ ನಾನ್ನ' ಸಿನಿಮಾಗೆ ಶಿವಣ್ಣ​ ಮೆಚ್ಚುಗೆ: 'ನಾನಿ ಅಭಿಮಾನಿಯಾದೆ' ಎಂದ ಹ್ಯಾಟ್ರಿಕ್ ಹೀರೋ

Last Updated : Dec 12, 2023, 4:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.