ಸ್ಯಾಂಡಲ್ವುಡ್ನಲ್ಲಿ ಒಳ್ಳೆ ಕಂಟೆಂಟ್ ಜೊತೆಗೆ ಹೊಸಬರು ಸಿನಿಮಾ ಮಾಡುತ್ತಿದ್ದಾರೆ. ಅವರ ಚಿತ್ರಗಳು ಬರ್ತಿದೆ ಅಂದ್ರೆ ಅಲ್ಲಿ ಒಂದಷ್ಟು ಮಟ್ಟಿಗೆ ನಿರೀಕ್ಷೆಗಳಿರುತ್ತವೆ. ಯಾಕೆಂದರೆ ಅವರಿಂದ ಹೊಸತನವನ್ನು ನಿರೀಕ್ಷಿಸಬಹುದು ಅನ್ನೋ ನಂಬಿಕೆ. ಅಂತಹ ನಂಬಿಕೆಯಿಂದಲೇ ಸುದ್ದಿ ಮಾಡ್ತಿರೋ ಸಿನಿಮಾ ಸ್ನೇಹರ್ಷಿ.
![Kiran Narayan entering to kannada film industry with Sneharshi Movie](https://etvbharatimages.akamaized.net/etvbharat/prod-images/25-10-2023/kn-bng-02-sneharshi-cinema-moulaka-minchal-readyada-kirannarayan-7204735_25102023173411_2510f_1698235451_995.jpg)
ಸ್ನೇಹರ್ಷಿ ಅಂದ್ರೆ ಸ್ನೇಹದ ಋಷಿ ಅಂತಾ ಅರ್ಥ. ಹಿಂದೆ ಋಷಿ ಮುನಿಗಳೆಲ್ಲಾ ತಪಸ್ಸು, ಹೋಮ, ಹವನ ಮಾಡಿ ದೇವತೆಗಳಿಗೆ ಶಕ್ತಿ ತುಂಬುತ್ತಿದ್ದರು. ಹಾಗೆಯೇ ಈ ಸಿನಿಮಾದ ನಾಯಕ ಇಲ್ಲಿ ತಮ್ಮ ಇಡೀ ಸ್ನೇಹ ಅನ್ನೋ ಅರ್ಥಕ್ಕೆ ಶಕ್ತಿ ತುಂಬುವಂತ ಕಾರ್ಯ ಮಾಡ್ತಿದ್ದಾರೆ. ರಂಗಭೂಮಿ ಕಲಾವಿದ ಕಿರಣ್ ನಾರಾಯಣ್ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ಶ್ರೀ ಮೇಲುಕೋಟೆ ಚಲುವನಾರಾಯಣ ವೆಂಚರ್ಸ್‌ನಿಂದ ತಾವೇ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.
![Kiran Narayan entering to kannada film industry with Sneharshi Movie](https://etvbharatimages.akamaized.net/etvbharat/prod-images/25-10-2023/kn-bng-02-sneharshi-cinema-moulaka-minchal-readyada-kirannarayan-7204735_25102023173411_2510f_1698235451_335.jpg)
ಚಿತ್ರದ ಹಾಡುಗಳು ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿವೆ. ಗಾಯಕ ನವೀನ್ ಸಜ್ಜು ಧ್ವನಿಯಾಗಿರುವ ತಮಟೆ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದರೆ, ಅರಿವಿಲ್ಲದೆ ಶುರುವಾಗಿದೆ ಅನ್ನೋ ರೊಮ್ಯಾಂಟಿಕ್ ಸಾಂಗ್ ಮಿಲಿಯನ್‌ಗಟ್ಟಲೆ ವೀವ್ಸ್ ಪಡೆಯುವ ಮೂಲಕ ಪ್ರೇಮಿಗಳ ಹೃದಯದಲ್ಲಿ ಝೇಂಕರಿಸುತ್ತಿದೆ.
ಚಿತ್ರದಲ್ಲಿ ಫ್ರೆಂಡ್‌ಶಿಪ್ ಮೇನ್ ಥೀಮ್ ಆದ್ರೂ, ಸಾಮಾಜಿಕ ಕಳಕಳಿ ಇದೆ. ಪ್ರತಿ ದಿನ ನಾವು ಈ ಸಮಾಜದಲ್ಲಿ ಸಾಕಷ್ಟು ಶ್ರಮಜೀವಿಗಳನ್ನು ನೋಡ್ತಾನೆ ಇರ್ತೀವಿ. ಆದರೆ ಅವರ ಸಮಸ್ಯೆ ಏನು? ಅವರ ಬದುಕು ಹೇಗೆ? ಅನ್ನೋದು ಗಮನಕ್ಕೆ ಬರಲ್ಲ. ಅಂಥವರ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲುತ್ತಿದೆ.
![Kiran Narayan entering to kannada film industry with Sneharshi Movie](https://etvbharatimages.akamaized.net/etvbharat/prod-images/25-10-2023/kn-bng-02-sneharshi-cinema-moulaka-minchal-readyada-kirannarayan-7204735_25102023173411_2510f_1698235451_1105.jpg)
ಚಿತ್ರದಲ್ಲಿ ಕಿರಣ್ ನಾರಾಯಣ್ಗೆ ನಾಯಕಿಯಾಗಿ ಸಂಜನಾ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಸುಧಾ ಬೆಳವಾಡಿ, ಹಿರಿಯ ನಟ ಉಮೇಶ್, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಕಾಣಿಕೊಂಡಿದ್ದಾರೆ. ರವಿ ಕಿಶೋರ್ ಕ್ಯಾಮರಾ ವರ್ಕ್, ಆಕಾಶ್ ಅಯ್ಯಪ್ಪರ ಸಂಗೀತ, ಮೋಹನ್ ಭಜರಂಗಿ ನೃತ್ಯ ಗಮನ ಸೆಳೆಯುತ್ತಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ, ಸೆನ್ಸಾರ್ನಲ್ಲಿ ಪಾಸ್ ಆಗಿ, ಟ್ರೈಲರ್ ತೋರಿಸಲು ಸಿದ್ಧತೆ ನಡೆಸುತ್ತಿದೆ ಚಿತ್ರತಂಡ.
ಇದನ್ನೂ ಓದಿ: ಗಂಟುಮೂಟೆ ತಂಡದ ಹೊಸ ಚಿತ್ರ 'ಕೆಂಡ'; ವಿಭಿನ್ನ ಕಥೆಯೊಂದಿಗೆ ಬರ್ತಿದ್ದಾರೆ ರೂಪಾ ರಾವ್