ETV Bharat / entertainment

ಶಿರಡಿ ಸಾಯಿ ಬಾಬಾ ದರ್ಶನ ಪಡೆದ ಕಿಚ್ಚ ಸುದೀಪ್ ದಂಪತಿ.. ವೃದ್ಧಾಶ್ರಮದಲ್ಲಿ ಹಿರಿಯರ ಭೇಟಿ - Shirdi Sai Baba temple

ಮಂಗಳವಾರ ಶಿರಡಿಗೆ ಭೇಟಿ ನೀಡಿದ ಕಿಚ್ಚ ಸುದೀಪ್​ ದಂಪತಿ ಮತ್ತು ಸ್ನೇಹಿತರು ಸಾಯಿ ಬಾಬಾರ ದರ್ಶನ ಪಡೆದಿದ್ದಾರೆ.

Kichcha Sudeep visits Shirdi Sai Baba temple
ಶಿರಡಿ ಸಾಯಿ ಬಾಬ ದರ್ಶನ ಪಡೆದ ಕಿಚ್ಚ ಸುದೀಪ್
author img

By

Published : Nov 16, 2022, 7:55 PM IST

ಸೂಪರ್​ ಹಿಟ್​ ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚ ಸುದೀಪ್ ರಿಲ್ಯಾಕ್ಸ್ ಮೂಡ್​ಗೆ ಜಾರಿದಂತೆ ಕಾಣ್ತಿದೆ. ವೀಕೆಂಡ್​ನಲ್ಲಿ ಬಿಗ್ ಬಾಸ್​ ವಾರದ ಸಂಚಿಕೆಯಲ್ಲಿ ಕಾಣಿಸಿಕೊಳ್ಳುವ ಕಿಚ್ಚ ವೀಕ್ ಡೇಸ್​ನಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಸದ್ಯ ಪತ್ನಿ ಪ್ರಿಯಾ ಹಾಗು ಸ್ನೇಹಿತರ ಜೊತೆ ಪುಣೆಗೆ ತೆರಳಿದ್ದಾರೆ.

ಮಂಗಳವಾರ ಶಿರಡಿಗೆ ಭೇಟಿ ನೀಡಿದ್ದ ಸುದೀಪ್​ ದಂಪತಿ ಮತ್ತು ಸ್ನೇಹಿತರು ಸಾಯಿ ಬಾಬಾರ ದರ್ಶನ ಪಡೆದಿದ್ದಾರೆ. ದ್ವಾರಕಾಮಯಿ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟು ಹಿರಿ ಜೀವಗಳ ಅರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಆಶ್ರಮದ ವೃದ್ಧರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇಂದು ಕೂಡ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ನಾಳೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.

Kichcha Sudeep visits Shirdi Sai Baba temple
ಶಿರಡಿ ಸಾಯಿ ಬಾಬ ದರ್ಶನ ಪಡೆದ ಕಿಚ್ಚ ಸುದೀಪ್

ಕಿಚ್ಚ ಸುದೀಪ್​ ಶಿರಡಿ ಸಾಯಿ ಬಾಬಾರ ಪರಮ ಭಕ್ತ. ಪ್ರತೀ ವರ್ಷ ಕುಟುಂಬ ಸಮೇತ ಹೋಗಿ ಬಾಬಾರ ದರ್ಶನ ಪಡೆದು ಬರುತ್ತಿದ್ದರು. ಅದ್ರೆ ಕೋವಿಡ್​ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಶಿರಡಿಗೆ ಭೇಟಿ ಕೊಡಲಾಗಲಿಲ್ಲ. ಇದೀಗ ಸಾಯಿ ಬಾಬಾರ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಕಟೀಲು, ದೈವ ಕ್ಷೇತ್ರಗಳಿಗೆ ಸಪ್ತಮಿ ಗೌಡ ಭೇಟಿ.. ಕಾಂತಾರ ಯಶಸ್ಸಿನ ಸಿಕ್ರೇಟ್​ ತಿಳಿಸಿದ ನಟಿ​

ಇದಲ್ಲದೇ ತೆರೆ ಮರೆಯಲ್ಲೇ ಕಿಚ್ಚ ಹೊಸ ಚಿತ್ರಕ್ಕೆ ತಯಾರಿ ಮಾಡ್ತಿದ್ದು, ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಹೊಂಬಾಳೆಯಲ್ಲಿ ಅಥವಾ ಕಬಾಲಿ ಚಿತ್ರ ನಿರ್ಮಾಪಕರ ಜೊತೆ ಕಿಚ್ಚನ ಹೊಸ ಚಿತ್ರ ಮೂಡಿಬರೋದು ಬಹುತೇಕ ಪಕ್ಕಾ ಆಗಿದೆ. ಕಿಚ್ಚನ‌ ಚಿತ್ರಕ್ಕೆ ಸಾರಥಿ ಫೈನಲ್ ಆಗುತ್ತಿದ್ದಂತೆ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಅಭಿನಯ ಚಕ್ರವರ್ತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.