ETV Bharat / entertainment

ಕೆ.ಆರ್​.ಜಿ ಸ್ಟುಡಿಯೋಸ್​ ಜೊತೆ ಕಿಚ್ಚ ಸಿನಿಮಾ; 9 ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್​ ತೊಟ್ಟ ಸುದೀಪ್​ - ಅಭಿನಯ ಚಕ್ರವರ್ತಿ

ಕೆ.ಆರ್​.ಜಿ ಸ್ಟುಡಿಯೋಸ್ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿರುವ ಮುಂದಿನ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಅಭಿನಯದ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ.

kiccha
ಕೆ.ಆರ್​.ಜಿ ಸ್ಟುಡಿಯೋಸ್​ ಜೊತೆ ಕಿಚ್ಚ ಸಿನಿಮಾ
author img

By ETV Bharat Karnataka Team

Published : Sep 1, 2023, 8:07 PM IST

ಭಾರತೀಯ ಸಿನಿಮಾ ರಂಗದಲ್ಲಿ ಅಭಿನಯದ ಮೂಲಕ ತನ್ನದೇ ಸ್ಟಾರ್‌ಡಮ್ ಹೊಂದಿರುವ ಆರಡಿ ಕಟೌಟ್ ಅಂದ್ರೆ ಕಿಚ್ಚ ಸುದೀಪ್. ನಾಳೆ ಇವರು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಬಾರಿ ಜನ್ಮದಿನಕ್ಕೆ ಕಿಚ್ಚನ ಸಾಲು ಸಾಲು ಸಿನಿಮಾಗಳು ಅನೌನ್ಸ್​ ಆಗುತ್ತಿವೆ. ಸದ್ಯಕ್ಕೆ ಹೆಸರಿಡದ 46ನೇ ಚಿತ್ರದ ಕ್ಲೈಮ್ಯಾಕ್ಸ್​ ಸನ್ನಿವೇಶಕ್ಕಾಗಿ ಸಖತ್​ ಬಾಡಿ ಬಿಲ್ಡ್​​ ಮಾಡಿ ಕ್ರೇಜ್​ ಸೃಷ್ಟಿಸಿರುವ ಸುದೀಪ್​ ಅವರ 47ನೇ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದೀಗ ಕಿಚ್ಚನ 47ನೇ ಚಿತ್ರದ ನಿರ್ಮಾಣ ಸಂಸ್ಥೆ ಯಾವುದು ಅನ್ನೋದು ರಿವೀಲ್​ ಆಗಿದೆ.

ಕೆಲವು ತಿಂಗಳ ಹಿಂದೆ ಕೆ.ಆರ್.ಜಿ ಸ್ಟುಡಿಯೋ ಹಾಗೂ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕಿಚ್ಚ ಸುದೀಪ್ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಆವಾಗ್ಲೇ ಕೆ.ಆರ್.ಜಿ ಸ್ಟುಡಿಯೋ ಜೊತೆ ಮುಂದಿನ ಸಿನಿಮಾದ ಮಾತುಕತೆ ಆಗಿದೆ ಎಂದು ಹೇಳಲಾಗಿತ್ತು. ಈಗ ಈ ಎಲ್ಲಾ ವದಂತಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

ಹೌದು, ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ಭಾಗವಾಗಿರುವ ಕೆ.ಆರ್.ಜಿ ಸ್ಟುಡಿಯೋದಿಂದ ಈಗಾಗಲೇ ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ, ಉತ್ತರಕಾಂಡ, ಕಿರಿಕ್ et 11 ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇದೀಗ ಕಿಚ್ಚ ಸುದೀಪ್​ ಕೆ.ಆರ್​.ಜಿ ಸ್ಟುಡಿಯೋಸ್​ ಜೊತೆ ಕೈ ಜೋಡಿಸಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿರುವ ಮುಂದಿನ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಅಭಿನಯದ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅರಸು ಕ್ರಿಯೇಷನ್ಸ್ ವತಿಯಿಂದ ಸುದೀಪ್​ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ!

ಮೋಷನ್​ ಪಿಕ್ಚರ್​ ರಿವೀಲ್​: 'ಮಾಣಿಕ್ಯ' ಸಿನಿಮಾ ಬಳಿಕ 9 ವರ್ಷಗಳ ನಂತರ ಕಿಚ್ಚ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಸದ್ಯ ಹೆಬ್ಬುಲಿಯ ಹುಟ್ಟುಹಬ್ಬಕ್ಕೆ ಮೋಷನ್ ಪಿಕ್ಚರ್ ರಿವೀಲ್ ಮಾಡುವ ಮೂಲಕ ಕಿಚ್ಚನ ಬರ್ತ್​ಡೇಗೆ ಅಡ್ವಾನ್ಸ್​ ಗಿಫ್ಟ್​ ಸಿಕ್ಕಿದೆ. ಸದ್ಯ ಅನಾವರಣಗೊಂಡಿರುವ ಪೋಸ್ಟರ್​ನಲ್ಲಿ 'ಕೆಕೆ' ಎಂದು ಶೀರ್ಷಿಕೆ ಕಾಣಿಸುತ್ತಿದೆ. ಪತ್ರಿಕೆಯ ಮುಖಪುಟದಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಪ್ರಾಣಬಿಟ್ಟಿರುವ ಹೆಣಗಳನ್ನು ನೋಡುತ್ತಿರುವ ಕಿಚ್ಚನ ನೆರಳಿನ ಫೋಟೋವನ್ನು ಚಿತ್ರಿಸಲಾಗಿದೆ. ಸುದೀಪ್​ ಬಲಗೈಗೆ ಬೇಡಿ ಹಾಕಿರುವುದು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

  • " class="align-text-top noRightClick twitterSection" data="">

ಪೋಸ್ಟರ್​ ಕೆಳಗೆ 'GOD FORGIVES I DON T- KING KICHCHA' ಎಂಬ ಟ್ಯಾಗ್ ಲೈನ್ ಕೂಡ ಇದೆ. ಕೆ.ಆರ್.ಜಿ ಸ್ಟುಡಿಯೋದ ಕಾರ್ತಿಕ್​ ಹಾಗೂ ಯೋಗಿ.ಜಿ.ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಎಲ್ಲಾ ಕೆಲಸಗಳು 2024ರಿಂದ ಪ್ರಾರಂಭವಾಗಲಿದೆ. ಇದರ ಜೊತೆಗೆ ತಮಿಳಿನ ಮೈ ಆಟೋಗ್ರಾಫ್ ಸಿನಿಮಾ ನಿರ್ದೇಶಕ ಚೇರನ್ ಜೊತೆ ಕಿಚ್ಚನ ಹೆಸರಿಡದ 48ನೇ ಚಿತ್ರ ಕೂಡ ಅನೌಂಸ್ ಆಗಲಿದೆ. ಈ ಸಿನಿಮಾವನ್ನು ಸತ್ಯಜ್ಯೋತಿ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಹಾಗೆಯೇ 'ಕಬ್ಜ' ನಿರ್ದೇಶಕ ಆರ್ ಚಂದ್ರು ಕಿಚ್ಚ ಸುದೀಪ್​ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇನ್ನು ಸುದೀಪ್ ಬರ್ತ್​ಡೇಗೆ ಪತ್ನಿ ಪ್ರಿಯಾ ಸುದೀಪ್ ಕಡೆಯಿಂದಲೂ ಒಂದು ಸರ್​ಪ್ರೈಸ್​ ಇದೆ ಎನ್ನಲಾಗಿದ್ದು, ಸಹಜವಾಗಿ ಕುತೂಹಲ ಮೂಡಿಸಿದೆ. ಕಿಚ್ಚ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಮನೆ ಜೆ.ಪಿ ನಗರ ಬಿಟ್ಟು, ಇಂದು ರಾತ್ರಿಯಿಂದಲೇ ಬೆಂಗಳೂರಿನ ನಂದಿ ಲಿಂಕ್​​ ಗ್ರೌಂಡ್​ನಲ್ಲಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ವಿವಿಧ ಸಿನಿಮಾ ತಂಡಗಳು ಸುದೀಪ್​ ಬರ್ತ್​ಡೇ ವಿಭಿನ್ನವಾಗಿ ಶುಭಾಶಯ ಹೇಳಲಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಹುಟ್ಟುಹಬ್ಬಕ್ಕೆ ನಿರ್ದೇಶಕ ಆರ್​.ಚಂದ್ರು ಬಿಗ್​ ಸರ್​ಪ್ರೈಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.