ETV Bharat / entertainment

'ಇನ್' ಚಿತ್ರದ ಟೀಸರ್ ಬಿಡುಗಡೆ : ಚಿತ್ರ ತಂಡಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್ - 'ಇನ್' ಚಿತ್ರದ ಟೀಸರ್ ಬಿಡುಗಡೆ: ಚಿತ್ರ ತಂಡಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್.

ಬಡಿಗೇರ್ ದೇವೇಂದ್ರ ನಿರ್ದೇಶನದ ಮಹಿಳಾಪ್ರಧಾನ ಸಿನಿಮಾ ಇನ್ ಚಿತ್ರದ ಟೀಸರ್‌ನ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದಾರೆ..

kiccha-sudeep-has-released-the-teaser-of-in-movie
'ಇನ್' ಚಿತ್ರದ ಟೀಸರ್ ಬಿಡುಗಡೆ: ಚಿತ್ರ ತಂಡಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್
author img

By

Published : Apr 5, 2022, 11:33 AM IST

ಬೆಂಗಳೂರು : ಹೊಸಬರ ಪ್ರಯತ್ನಗಳಿಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಬಡಿಗೇರ್ ದೇವೇಂದ್ರ ನಿರ್ದೇಶನದ ಪ್ರಯೋಗಾತ್ಮಕ 'ಇನ್' ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಮಹಿಳಾ ಪ್ರಧಾನ ರುದ್ರಿ ಚಿತ್ರವನ್ನು ನಿರ್ದೇಶಿಸಿದ್ದ ಬಡಿಗೇರ್ ದೇವೇಂದ್ರ ಅವರು, ಈ ಬಾರಿಯೂ ಒಂದು ಮಹಿಳಾ ಪ್ರಧಾನ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆ ಮಾಡಿರುವ ನಟ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿ, ಈ ಸಿನಿಮಾ ಯಶಸ್ವಿಯಾಗಲಿ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

'ಇನ್' ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ನಟ ಕಿಚ್ಚ ಸುದೀಪ್..

ಚಿತ್ರದ ಕುರಿತು ನಿರ್ದೇಶಕ ಬಡಿಗೇರ್ ದೇವೇಂದ್ರ ಮಾತನಾಡಿ, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಿದ್ಧವಾಗಿರುವ ಪ್ರಯೋಗಾತ್ಮಕ ಚಿತ್ರ ಇದಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂದು ಸುದೀಪ್‌ ಅಭಿಪ್ರಾಯ ಪಟ್ಟಿದ್ದಾರೆ. ಚಿತ್ರದ ನಾಯಕಿ ಪಾವನಾ ಗೌಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಐಡಿಯಾ ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಪ್ರಶಾಂತ್ ಅಯ್ಯಂಗಾರಿ ನಿರ್ಮಾಣ ಮಾಡಿದ್ದಾರೆ. ದೀಪಕ ದುರ್ಗಾಯಿ, ಕರವೀರ ಸಂಗೊಳ್ಳಿ, ಸಹದೇವ್ ಪಾಗೋಜಿ, ನಾಗಪ್ಪ ಓಮನ್ನವರ, ಧನರಾಜ ಬಡಿಗೇರ, ಸಂಜೋತಾ ಪಾಗೋಜಿ ಚಿತ್ರದ ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಭರತ್ ನಾಯಕ್ ಸಂಗೀತವಿದ್ದು, ಬಡಿಗೇರ್ ದೇವೇಂದ್ರ ಅವರ ಸಾಹಿತ್ಯ ಮತ್ತು ಪತ್ರಕರ್ತ ಶಂಕರ ಪಾಗೋಜಿ ಚಿತ್ರಕಥೆ, ಸಂಭಾಷಣೆ ಈ ಚಿತ್ರಕ್ಕಿದೆ.

ಓದಿ : ರಶ್ಮಿಕಾ ಮಂದಣ್ಣ@26: ಬಹುಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡತಿಗೆ ಹ್ಯಾಪಿ ಬರ್ತ್‌ಡೇ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.