ETV Bharat / entertainment

ಆನಂದ ಸಾಗರದಲ್ಲಿ ನವ ದಂಪತಿ.. ಪತ್ನಿ ಕಿಯಾರಾ ಚೆಲುವಿಗೆ ಸಿದ್ಧಾರ್ಥ್ ಮೆಚ್ಚುಗೆಯ ಮಾತು - ಮಹಿಳಾ ಪ್ರೀಮಿಯರ್ ಲೀಗ್

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ವ್ಯಕ್ತಪಡಿಸುವುದರಿಂದ ಹಿಂದೇಟು ಹಾಕುತ್ತಿಲ್ಲ.

Kiara Advani Sidharth Malhotra
ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ
author img

By

Published : Mar 5, 2023, 5:40 PM IST

ಬಾಲಿವುಡ್​​ ಬಹುಬೇಡಿಕೆ ತಾರೆಯರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಬಹುದಿನಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿರುವ ಈ ಜೋಡಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ತಾರಾ ದಂಪತಿ ಪ್ರೀತಿ ವ್ಯಕ್ತಪಡಿಸುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಮುಂಬೈ ನಗರದ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಿನ್ನೆ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಯಿತು. ಬಾಲಿವುಡ್ ಚೆಂದುಳ್ಳಿ ಚೆಲುವೆಯರು ತಮ್ಮ ಭರ್ಜರಿ ಸ್ಟೆಪಸ್​ ಮೂಲಕ ವೇದಿಕೆಗೆ ಮೆರುಗು ತಂದರು. ಬಾಲಿವುಡ್​ ಕೃತಿ ಸನೋನ್, ಕಿಯಾರಾ ಅಡ್ವಾಣಿ ಮತ್ತು ಸ್ಟಾರ್ ಸಿಂಗರ್ ಎ.ಪಿ ಧಿಲ್ಲೋನ್ ಅವರು ಪ್ರದರ್ಶನ ನೀಡುವ ಮೂಲಕ ಮಹಿಳಾ ಆಟಗಾರರು, ಅಭಿಮಾನಿಗಳಿಗೆ ಮನೋರಂಜನೆ ನೀಡಿದರು..

ನಟಿ ಕಿಯಾರಾ ಅಡ್ವಾಣಿ ತಮ್ಮ ಚಿತ್ರಗಳ ಹಿಟ್ ಹಾಡುಗಳೊಂದಿಗೆ ನಿನ್ನೆ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ ಶುರು ಮಾಡಿದರು. ನಂತರ ನಟಿ ಕೃತಿ ಸನೋನ್​ 'ಚಕ್ ದೇ ಇಂಡಿಯಾ'ದ ಹಾಡಿಗೆ ಹೆಜ್ಜೆ ಹಾಕಿದರು. ಈ ಇಬ್ಬರೂ ನಟಿಯರು ಪ್ರಮುಖ ಹಿಟ್ ಹಾಡುಗಳಿಗೆ ಮೈ ಕುಣಿಸುತ್ತಿದ್ದಂತೆ, ಪ್ರೇಕ್ಷಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ನಟಿ ಕಿಯಾರಾ ಅಡ್ವಾಣಿ ಗುಲಾಬಿ ಬಣ್ಣದ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮಕ್ಕೂ ಮೊದಲು ಎಂದಿನಂತೆ ಈ ಸುಂದರ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಚಿತ್ರಗಳನ್ನು ಕಿಯಾರಾ ಅಡ್ವಾಣಿ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಸುಂದರ ಚಿತ್ರಗಳನ್ನು ಹಂಚಿಕೊಂಡಿರುವ ನಟಿ ಕಿಯಾರಾ ಅಡ್ವಾನಿ, "Tonight I’m feeling pink'' ಎಂದು ಬರೆದುಕೊಂಡಿದ್ದಾರೆ. ನಟಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಕಾಮೆಂಟ್​ ವಿಭಾಗವು ಫೈಯರ್​, ಹಾರ್ಟ್ ಎಮೋಜಿಗಳಿಂದ ತುಂಬಿತು. ನಟಿಯ ಚಿತ್ರಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಪತಿ ಸಿದ್ಧಾರ್ಥ್ ಮಲ್ಹೋತ್ರಾ ಸಹ ಕಾಮೆಂಟ್​ ಮಾಡುವುದರಿಂದ ಹಿಂದೆ ಸರಿದಿಲ್ಲ. ಪತ್ನಿಯ ಚಿತ್ರಗಳಿಗೆ ''colour me pink" ಎಂದು ಸಿದ್ಧಾರ್ಥ್ ಮಲ್ಹೋತ್ರಾ ಕಾಮೆಂಟ್​ ಮಾಡಿ, ಹೃದಯ ಕಣ್ಣಿನ ಎಮೋಜಿಯನ್ನು ಹಾಕಿದ್ದಾರೆ.

ಸಿದ್ಧಾರ್ಥ್ ಮತ್ತು ಕಿಯಾರಾ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸಿರುವುದನ್ನು ಗಮನಿಸಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಶೆರ್ಷಾ ಜೋಡಿ ಗೋಲ್ಸ್, ಈ ದಂಪತಿ ಮೇಲೆ ಯಾರ ದೃಷ್ಟಿ ಕೂಡ ಬೀಳದಿರಲಿ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಊ ಅಂಟಾವಾ ಹಾಡಿಗೆ ಅಲ್ಲು ಅರ್ಜುನ್ ಸ್ಟೆಪ್ಸ್​: ಹುಚ್ಚೆದ್ದು ಕುಣಿದ ಅಭಿಮಾನಿಗಳು

ಇನ್ನು, ಕೆಲಸದ ವಿಚಾರ ನೋಡುವುದಾದರೆ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ನಿರ್ದೇಶಕ ರೋಹಿತ್ ಶೆಟ್ಟಿ ಅವರ ವೆಬ್ ಸಿರೀಸ್ ಇಂಡಿಯನ್ ಪೊಲೀಸ್ ಫೋರ್ಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಕರ್ ಓಜಾ ಮತ್ತು ಸಾಗರ್ ಅಂಬ್ರೆ ನಿರ್ದೇಶನದ ಯೋಧಾ ಬಿಡುಗಡೆಗೆ ಸಿದ್ಧವಾಗಿದೆ. ರಾಶಿ ಖನ್ನಾ ಮತ್ತು ದಿಶಾ ಜೊತೆಗೆ ನಟಿಸಿರುವ ಈ ಚಿತ್ರವು ಜುಲೈ 7ರಂದು ಬಿಡುಗಡೆ ಅಗಲಿದೆ. ಇನ್ನೂ ನಟಿ ಕಿಯಾರಾ ಅಡ್ವಾಣಿ ಅವರು ಕಾರ್ತಿಕ್ ಆರ್ಯನ್ ಅವರೊಂದಿಗೆ ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಹೊಗಳಿದ ವಿವೇಕ್ ಅಗ್ನಿಹೋತ್ರಿ: ಶುರುವಾಯ್ತು 'ಡಬಲ್ ಸ್ಟ್ಯಾಂಡರ್ಡ್' ಚರ್ಚೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.