ETV Bharat / entertainment

ಕೆಂಪು ಗುಲಾಬಿಯಾದ ಕಿಯಾರಾ ಅಡ್ವಾಣಿ! ಫ್ಯಾಷನ್ ಪ್ರಪಂಚದ ಮೇರು ತಾರೆಗೆ ಕಾಮೆಂಟ್​ಗಳ ಸುರಿಮಳೆ

ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿಯ ಹೊಸ ಲುಕ್​ ಜಾಲತಾಣದಲ್ಲಿ ಜಾಗ ಪಡೆದಿದೆ. ನಟಿಯ ಹೊಸ ಲುಕ್​ ಗಮನಿಸಿದ ನೆಟಿಜನ್ಸ್​ ಅವಳ ಸೌಂದರ್ಯವನ್ನು ಬಗೆ ಬಗೆಯಾಗಿ ವರ್ಣಿಸಿ ಕಾಮೆಂಟ್​ ಬಾಕ್ಸ್​ನಲ್ಲಿ ಕಾಮೆಂಟ್​ ಮಾಡಿದ್ದಾರೆ.

author img

By

Published : Apr 8, 2023, 2:16 PM IST

Kiara Advani oozes glam in red outfit, see pics

ಮುಂಬೈ (ಮಹಾರಾಷ್ಟ್ರ): ಫ್ಯಾಶನ್ ಪ್ರಪಂಚದ ಮೇರು ತಾರೆ ಕಿಯಾರಾ ಅಡ್ವಾಣಿ ಕೆಂಪು ಗುಲಾಬಿ ಅವತಾರದಲ್ಲಿ ತಾಳಿದ್ದಾರೆ. ಶುಕ್ರವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಟೌನ್​ ಬೆಡಗಿ ಕಿಯಾರಾ, ಕೆಂಪು ಧಿರಿಸಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕೇಂದ್ರ ಬಿಂದು ಆದರು. ಕೆಂಪು ಬಣ್ಣದ ಕಟೌಟ್‌ ಬಟ್ಟೆಯಲ್ಲಿ ಕಂಗೊಳಿಸಿದ್ದು, ಆ ಸುಂದರ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟನೆಯ ಜೊತೆಗೆ ಪ್ಯಾಷನ್ ಬಗ್ಗೆ ಆಳವಾದ ಒಲವು ಹೊಂದಿರುವ ಈ ಬೊಂಬೆಯ ಅವತಾರಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕಿಯಾರಾ ಸ್ಟೈಲಿಶ್ ಆಗಿ ಕಾಣುತ್ತಿದ್ದು ಹಲವರು ತಾರೆಯ ಸೌಂದರ್ಯವನ್ನು ಮೆಚ್ಚಿ ಕಮೆಂಟ್​ ಮಾಡಿದ್ದಾರೆ.

ತನ್ನ ಕೂದಲುಗಳನ್ನು ಅಚ್ಚುಕಟ್ಟಾಗಿ ಹೆಣೆದುಕೊಂಡಿರುವ ಕಿಯಾರಾ, ಬಗೆ ಬಗೆಯ ಫೋಟೋಗಳಿಗೆ ಪೋಸ್​ ನೀಡಿದ್ದಾರೆ. ನಟಿಯು ಯಾವುದೇ ಆಭರಣ ಧರಿಸದಿರುವುದನ್ನು ಫೋಟೋಗಳಲ್ಲಿ ಗಮನಿಸಬಹುದು. ಅಭಿಮಾನಿಗಳು, ನೆಟಿಜನ್​ಗಳು, ಸಿನಿ ಸ್ನೇಹಿತರು ಕಿಯಾರಾ ಅವರ ಕೆಂಪು ಮಸಾಲೆಯುಕ್ತ ನೋಟವನ್ನು ಹಾಡಿ ಹೊಗಳಲಾರಂಭಿಸಿದ್ದಾರೆ. ಅವರ ಮಾದಕ ನೋಟಕ್ಕೆ ಪ್ರತಿಕ್ರಿಯಿಸಿದ ನೆಟಿಜನ್​​ ಬಳಕೆದಾರರೊಬ್ಬರು "ಅದ್ಭುತ" ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು 'ನೀವೊಬ್ಬ ಬಾಲಿವುಡ್​ನ ಸುಂದರ ಗಣಿ' ಎಂದು ಬಣ್ಣಿಸಿದ್ದಾರೆ. "ಉಫ್ ... ತುಂಬಾ ಬಿಸಿ" ಅಂತ ಮಗದೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ನಟಿಯ ಸೌಂದರ್ಯವನ್ನು ಬಗೆ ಬಗೆಯಾಗಿ ವರ್ಣಿಸಿ ಕಾಮೆಂಟ್​ ಬಾಕ್ಸ್​ನಲ್ಲಿ ಕಾಮೆಂಟ್​ ಮಾಡಿದ್ದಾರೆ. ಹಾಗಾಗಿ ಸದ್ಯ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆಗಿವೆ.

ಸಿನಿಮಾ ವಿಷಯಕ್ಕೆ ಬಂದರೆ ತಾರೆಯು ಸದ್ಯ ಕಾರ್ತಿಕ್ ಆರ್ಯನ್ ಅವರೊಂದಿಗೆ 'ಸತ್ಯಪ್ರೇಮ್ ಕಿ ಕಥಾ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇದೊಂದು ಪಕ್ಕಾ ಪ್ರೇಮ ಕಥೆಯಾಧಾರಿತ ಹಾಗೂ ಮನರಂಜನಾತ್ಮಕ ಚಿತ್ರವಾಗಿದ್ದು ಜೂನ್ 29, 2023 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಸಮೀರ್ ವಿಧ್ವಾನ್ಸ್ ಹೆಲ್ಮ್ ನಿರ್ದೇಶ ಹೇಳಿದ್ದು, ಸಾಜಿದ್ ನಾಡಿಯಾಡ್ವಾಲಾ ಎಂಬುವರು ಈ ಚಿತ್ರಕ್ಕೆ ಆರ್ಥಿಕ ಇಂದನ ತುಂಬಿದ್ದಾರೆ. ತೆರೆಯಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಪ್ರೇಮಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. 2022 ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ 'ಭೂಲ್ ಭುಲೈಯಾ 2' ಚಿತ್ರದಲ್ಲಿ ಇದೇ ಜೋಡಿ ನಟಿಸಿತ್ತು. ಅದಾದ ಬಳಿಕ 'ಸತ್ಯಪ್ರೇಮ್ ಕಿ ಕಥಾ' ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಹಾಗಾಗಿ ಚಿತ್ರತಂಡ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ.

'ಸತ್ಯಪ್ರೇಮ್ ಕಿ ಕಥಾ' ಚಿತ್ರವು ತನ್ನ ಶೀರ್ಷಿಕೆಯಿಂದ ಸಿನಿ ಪ್ರಪಂಚದಲ್ಲಿ ಇತ್ತೀಚೆಗೆ ಸಖತ್​ ಸದ್ದು ಮಾಡಿತ್ತು. ಈ ಚಿತ್ರವು ಸತ್ಯನಾರಾಯಣನ ಕಥೆಯನ್ನು ಅನುವಾದಿಸುತ್ತದೆ. ಹಾಗಾಗಿ ಈ ಚಿತ್ರವನ್ನು ಇದೇ ಹೆಸರಿನ ಮೂಲಕ ತೆರೆಯ ಮೇಲೆ ತರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತವಾಗಿದ್ದರಿಂದ ಸತ್ಯನಾರಾಯಣ್ ಕಿ ಕಥಾ ಇದ್ದ ಹೆಸರನ್ನು ನಿರ್ದೇಶಕ ಸಮೀರ್ ವಿದ್ವಾನ್ಸ್ ಬದಲಾವಣೆ ಮಾಡುವುದಾಗಿ ಹೇಳಿದ್ದರು.

ನಟ ಕಾರ್ತಿಕ್ ಆರ್ಯನ್ ಕೂಡ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಅದು ಸಂಪೂರ್ಣವಾಗಿ ಉದ್ದೇಶಪೂರ್ವಕವಲ್ಲದಿದ್ದರೂ ಸಹ ಕೆಲವರ ಭಾವನೆಗಳಿಗೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ಶೀರ್ಷಿಕೆಯನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಚಿತ್ರವು ಜೂನ್ 29, 2023 ರಂದು 'ಸತ್ಯಪ್ರೇಮ್ ಕಿ ಕಥಾ' ಚಿತ್ರ ಬಿಡುಗಡೆಯಾಗಲು ಸಿದ್ಧಗೊಂಡಿದೆ. 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್ ಚರಣ್ ಜೊತೆಗೂ ಕಿಯಾರಾ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸ್ಟೈಲಿಶ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಟೀಸರ್​ ಜೊತೆ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​.. ಹೊಸ ಅವತಾರದಲ್ಲಿ ಅಲ್ಲು ಅರ್ಜುನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.