ಬಾಲಿವುಡ್ ಸ್ಟಾರ್ ಕಿಡ್ಗಳು ಮುಂಬೈನ ರೆಸ್ಟೋರೆಂಟ್ನಲ್ಲಿ ಶುಕ್ರವಾರ ರಾತ್ರಿ ಒಟ್ಟಿಗೆ ಸೇರಿದ್ದರು. ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಮಗಳು ಖುಷಿ ಕಪೂರ್ ಅವರಿಂದ ಹಿಡಿದು ಸೈಫ್ ಅಲಿ ಖಾನ್ ಮತ್ತು ಅಮೃತ ಸಿಂಗ್ ಮಗ ಇಬ್ರಾಹಿಂ ಅಲಿ ಖಾನ್, ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್ ಸೇರಿದಂತೆ ಅನೇಕ ತಾರೆಯರ ಮಕ್ಕಳು ಒಟ್ಟಿಗೆ ಸುತ್ತಾಡುತ್ತಿರುವುದು ಕಂಡುಬಂದಿದೆ. ಅದರಲ್ಲೂ ಖುಷಿ ಕಪೂರ್ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮುಂದಿನ 'ಸ್ಟಾರ್'ಕಿಡ್ಗಳು ಬೆಲೆ ಬಾಳುವ ಮುಂಬೈ ಪಾರ್ಟಿ ಸ್ಪಾಟ್‌ನ ಹೊರಗೆ ಗುರುತಿಸಲ್ಪಟ್ಟರು. ಬ್ಲ್ಯಾಕ್ ಡ್ರೆಸ್ನಲ್ಲಿ ಖುಷಿ ಪಾರ್ಟಿ ಲುಕ್ನಲ್ಲಿ ಕಾಣಿಸಿಕೊಂಡರೆ, ಇಬ್ರಾಹಿಂ ಅವರು ತಮ್ಮ ಕ್ಯಾಶುವಲ್ ಡ್ರೆಸ್ಸಿಂಗ್ನಲ್ಲೇ ಕೂಲ್ ಆಗಿ ಕಾಣುತ್ತಿದ್ದರು. ಪಾರ್ಟಿಯ ನಂತರ ವರುಣ್ ಧವನ್ ಅವರ ಸೊಸೆ ಅಂಜಿನಿ ಧವನ್, ಓರ್ಹಾನ್ ಅವತ್ರಾಮಣಿ ಅಕಾ ಓರಿ ಮತ್ತು ನಟಿ ಸೃಷ್ಟಿ ಪೋರೆ ಕೂಡ ಕಾಣಿಸಿಕೊಂಡರು. ಅಂಜಿನಿ ತನ್ನ ಲಿಲಾಕ್ ಕಲರ್ ಬಾಡಿಕಾನ್ ಡ್ರೆಸ್ನಲ್ಲಿ ಮುದ್ದಾಗಿ ಕಂಡರು. ಆಲಿಯಾ ಕ್ರಾಪ್ ಟಾಪ್ ಅನ್ನು ಆರಿಸಿಕೊಂಡರು ಮತ್ತು ಅದಕ್ಕೆ ಮ್ಯಾಚಿಂಗ್ ಆಗುವಂತೆ ಡೆನಿಮ್ ಪ್ಯಾಂಟ್ ಅನ್ನು ತೊಟ್ಟಿದ್ದರು.
- " class="align-text-top noRightClick twitterSection" data="
">
ಈ ಮಧ್ಯೆ ಜೋಯಾ ಅಖ್ತರ್ ಅವರ ದಿ ಆರ್ಚೀಸ್‌ನೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಖುಷಿ ತನ್ನ ಮುಂದಿನ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಜೊತೆಗೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರವಾಗಿದೆ. ಇನ್ನು ಇಬ್ರಾಹಿಂ ಅಲಿ ಖಾನ್ ಅವರು ಕರಣ್ ಜೋಹರ್ ನಿರ್ಮಾಣದ ಸರ್ಜಮೀನ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಕಾಜೋಲ್ ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಪತಿಗೆ ಮುತ್ತು ಕೊಟ್ಟು ನಾಚಿದ ಆಲಿಯಾ: ಪಾಪರಾಜಿಗಳ ಕಣ್ಣಿಗೆ ಬಿದ್ದ ದೃಶ್ಯ
ದಿ ಆರ್ಚೀಸ್ನಲ್ಲಿ ಬಾಲಿವುಡ್ ದಿಗ್ಗಜರ ಮಕ್ಕಳು: ಲವ್ ಆ್ಯಕ್ಷನ್ ಮ್ಯೂಸಿಕಲ್ ಚಿತ್ರ ದಿ ಆರ್ಚೀಸ್ನಲ್ಲಿ ಬಾಲಿವುಡ್ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಈ ಕಥೆಯು 1960 ರ ಜನಪ್ರಿಯ ಅಮೆರಿಕನ್ ಆರ್ಚೀಸ್ ಕಾಮಿಕ್ಸ್ ಆಧರಿಸಿದೆ. ಇನ್ನೂ ಈ ವೆಬ್ ಸಿರೀಸ್ ಆರ್ಚಿ, ಬೆಟ್ಟಿ, ಡಿಲ್ವನ್, ಈಥರ್, ಜಗ್ಹೆಡ್, ರೆಗ್ಗೀ ಮತ್ತು ವೆರೋನಿಕಾ ಎಂಬ ಏಳು ಪಾತ್ರಗಳ ಗ್ಯಾಂಗ್ ಕಥೆಯನ್ನು ಹೇಳುತ್ತದೆ.
ಅಲ್ಲದೇ ದಿ ಆರ್ಚೀಸ್ ಭಾರತದ ಆಂಗ್ಲೋ ಇಂಡಿಯನ್ ಕಥೆಯನ್ನು ಆಧರಿಸಿದೆ. ಜೋಯಾ ಅಖ್ತರ್ ಅವರ ಸಿರೀಸ್ ಇದಾಗಿದ್ದು, ಟೈಗರ್ ಬೇಬಿ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ನಿರ್ಮಾಪಕ ಬೋನಿ ಕಪೂರ್ ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್, ಅಮಿತಾ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಾಂಗ್ ರೈನಾ ವೆಬ್ ಸಿರೀಸ್ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಸಮಯ ಕೊಟ್ಟ ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ದಂಪತಿ