ETV Bharat / entertainment

ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸನ್ನು ಸಾಕಾರಗೊಳಿಸಬಲ್ಲದು; ಹೊಸ ವರ್ಷಕ್ಕೆ ಯಶ್ ಶುಭಾಶಯ - ಟಾಕ್ಸಿಕ್ ಚಿತ್ರದ ಬಿಡುಗಡೆ

ನಟ ಯಶ್ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಅವರೊಂದಿಗೆ ಫೋಟೋಗೆ ಪೋಸ್​ ನೀಡುವ ಮೂಲಕ ಅವರು ಹೊಸ ವರ್ಷವನ್ನು ಬರಮಾಡಿಕೊಂಡರು.

KGF star Yash wishes 'unconditional love and unfiltered laughter' to fans on New Year
ನಟ ಯಶ್ ಕುಟುಂಬ
author img

By ETV Bharat Karnataka Team

Published : Jan 1, 2024, 5:46 PM IST

ಸ್ಯಾಂಡಲ್‌ವುಡ್‌ ನಟ ಯಶ್‌ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಮುದ್ದಾದ ಫೋಟೋ ಹಂಚಿಕೊಂಡಿರುವ ಅವರು, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅವರ ಈ ಶುಭಾಶಯದ ಪ್ರತಿಯಾಗಿ ಅಭಿಮಾನಿಗಳು ಕೂಡ ವಿಶ್​ ಮಾಡಿದ್ದಾರೆ. ಯಶ್​ ಅವರ ಬಗ್ಗೆ ಹೆಚ್ಚು ವಿವರಣೆ ಬೇಕಿಲ್ಲ. ಕೆಜಿಎಫ್‌ ಸಿನಿಮಾದ ಮೂಲಕ ಭಾರತ ಮತ್ತು ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಅವರು, ಸದ್ಯ ಟಾಕ್ಸಿಕ್​ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬ್ಯುಸಿ ನಡುವೆಯೇ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ನೂತನ ವರ್ಷದ ಹಿನ್ನೆಲೆ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ ರಾಧಿಕಾ ಪಂಡಿತ್ ಮತ್ತು ಅವರ ಮಕ್ಕಳಾದ ಐರಾ ಮತ್ತು ಯಥರ್ವ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ಯಶ್​, "ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನ ಸಾಕಾರಗೊಳಿಸಬಲ್ಲದು. ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.." ಎಂದು ಸಂದೇಶ ಬರೆದುಕೊಂಡಿದ್ದಾರೆ. ನೆಟಿಜನ್ಸ್​ ಕೂಡ ಪ್ರತಿಯಾಗಿ ವಿಶ್​ ಮಾಡಿದ್ದಾರೆ. "ನಿಮ್ಮನ್ನು ಮತ್ತೆ ಹಿರಿತೆರೆ ಮೇಲೆ ನೋಡಲು ಕಾಯುತ್ತಿದ್ದೇವೆ" ಎಂದಿದ್ದಾರೆ. ಹೊಸ ವರ್ಷದ ನಿಮಿತ್ತ ಈ ಫೋಟೋಶೂಟ್​ ಮಾಡಿಸಿಕೊಂಡಿದ್ದು ಕುಟುಂಬದ ನಾಲ್ವರು ಫೋಟೋಗೆ ಪೋಸ್​ ನೀಡಿದ್ದನ್ನು ಕಾಣಬಹುದು. ಒಟ್ಟು ಐದು ಫೋಟೋಗಳನ್ನು ಇನ್ಸ್​ಟಾಗ್ರಾಮ್​​ನಲ್ಲಿ ಅವರು ಪೋಸ್ಟ್​ ಮಾಡಿದ್ದಾರೆ. ಕೆಲವು ಫೋಟೋಗಳಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡರೆ, ಇನ್ನೂ ಕೆಲವು ಫೋಟೋಗಳಲ್ಲಿ ದಂಪತಿ ಮಾತ್ರ ಪೋಸ್​ ನೀಡಿದ್ದಾರೆ.

KGF star Yash wishes 'unconditional love and unfiltered laughter' to fans on New Year
ನಟ ಯಶ್ ಕುಟುಂಬ

ಕೆಜಿಎಫ್‌ 2 ಬಳಿಕ ಯಶ್ ಆ ಚಿತ್ರದಲ್ಲಿ ನಟಿಸಲಿದ್ದಾರೆ, ಈ ಚಿತ್ರದಲ್ಲಿ ನಟಿಸಲಿದ್ದಾರೆ ಅಂತೆಲ್ಲ ವದಂತಿ ಹಬ್ಬಿತ್ತು. ಇತ್ತೀಚೆಗಷ್ಟೇ ಟಾಕ್ಸಿಕ್​ ಚಿತ್ರದ ಬಗ್ಗೆ ಬಹಿರಂಗಪಡಿಸುವ ಮೂಲಕ ಬಹಳ ದಿನಗಳ ಕುತೂಹಕ್ಕೆ ತೆರೆ ಎಳೆದರು. ಟಾಕ್ಸಿಕ್ ಇದು ಅವರ 19ನೇ ಸಿನಿಮಾ ಆಗಿದ್ದು ದೊಡ್ಡ ಮಟ್ಟದಲ್ಲೇ ತೆರೆ ಕಾಣಲಿದೆ. ಮಲಯಾಳಂನ ಗೀತು ಮೋಹನ್‌ ದಾಸ್‌ ನಿರ್ದೇಶದಲ್ಲಿ ಮೂಡಿ ಬರಲಿದೆ. ಭೂಗತ ಜಗತ್ತಿನ ಜತೆಗೆ ಮಾಫಿಯಾವೊಂದರ ಸುತ್ತ ಹೆಣೆದಿರುವ ಚಿತ್ರ ಇದಾಗಿದ್ದು ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆ ಕಾಣಲಿದೆ. ಇನ್ನು ಇದೇ ಜನವರಿ 8ರಂದು ತಮ್ಮ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳರುವ ಯಶ್‌, ಅಂದು ಟಾಕ್ಸಿಕ್‌ ಚಿತ್ರದ ಬಗ್ಗೆ ಮತ್ತೊಂದು ಅಪ್​ಡೇಟ್​ ನೀಡಲಿದ್ದಾರೆ ಎಂಬ ನಿರೀಕ್ಷೆ ಕೂಡ ಇದೆ.

2022ರ ಏಪ್ರಿಲ್‌ 14ರಂದು ತೆರೆಕಂಡ ಅವರ ನಟನೆಯ ಕೆಜಿಎಫ್‌ ಚಾಪ್ಟರ್‌ 2, ಹಣ ಗಳಿಕೆಯಲ್ಲಿ ಸರ್ವ ದಾಖಲೆ ಬರೆಯಿತು. ಕೆಜಿಎಫ್‌ ಸರಣಿ ಬಳಿಕ ಪ್ರಪಂಚದ ಮೂಲೆ ಮೂಲೆ ತಲುಪಿರುವ ಯಶ್,​ ಸದ್ಯ ದೊಡ್ಡ ಅಭಿಮಾನಿ ಬಗಳ ಹೊಂದಿದ ಪ್ಯಾನ್​ ಇಂಡಿಯಾ ಸ್ಟಾರ್​ಗಳಲ್ಲಿ ಒಬ್ಬರು. ಹಾಗಾಗಿ ಅವರ ನಟನೆಯ ಮುಂಬರುವ ಚಿತ್ರ ಟಾಕ್ಸಿಕ್ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸ್ವತಃ ಯಶ್ ಅವರೇ ಇತ್ತೀಚೆಗೆ ತಮ್ಮ ಜಾಲತಾಣದಲ್ಲಿ ಚಿತ್ರದ ಅನೌನ್ಸ್‌ಮೆಂಟ್ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ "'ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ' - ರೂಮಿ. ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್ , ಟಾಕ್ಸಿಕ್" ಎಂದು ಬರೆದುಕೊಂಡಿದ್ದರು. ಮಾಸ್​ ಆ್ಯಕ್ಷನ್​​ ಸಿನಿಮಾ ಇದಾಗಿದ್ದು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಭಾರಿ ಬಜೆಟ್​ನೊಂದಿಗೆ ಚಿತ್ರ ತೆರೆ ಕಾಣಲಿದ್ದು ಕೆವಿಎನ್ ಪ್ರೊಡಕ್ಷನ್ಸ್ ಆರ್ಥಿಕ ಇಂದನದ ಭರ್ತಿಗೆ ಮುಂದಾಗಿದೆ. ಏಪ್ರಿಲ್ 10, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕೆಜಿಎಫ್ 3 ಸ್ಕ್ರಿಪ್ಟ್ ರೆಡಿ: ಶೂಟಿಂಗ್​ ಯಾವಾಗ? ಅಧಿಕೃತ ಘೋಷಣೆ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.