ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಮುಂದಾಗಿರುವ 'ಕೆಜಿಎಫ್ ಚಾಪ್ಟರ್-2' ಸಿನಿಮಾ ನಾಳೆ ಪ್ರಪಂಚದಾದ್ಯಂತ ರಿಲೀಸ್ ಆಗಲಿದ್ದು, ಚಿತ್ರದ ವೀಕ್ಷಣೆಗೋಸ್ಕರ ಪ್ರೇಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಚಿತ್ರದ ಶೂಟಿಂಗ್ ನಡೆದಿದ್ದು, ನಾಳೆ ಚಿತ್ರ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ನಟನೆ ಮಾಡಿರುವ ಯಶ್, ಸಂಜಯ್ ದತ್, ನಟಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರೂ ಪಡೆದುಕೊಂಡಿರುವ ಸಂಭಾವನೆಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದಿದ್ದೇ.
ಯಶ್, ಪ್ರಶಾಂತ್ ನೀಲ್, ಅನಂತ್ ನಾಗ್, ಪ್ರಕಾಶ್ ರಾಜ್ ಹಾಗೂ ಇತರರು ಚಿತ್ರದಲ್ಲಿನ ನಟನೆಗಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಂಡಿದ್ದಾರೆ ಅನ್ನೋದು ಗಾಂಧಿನಗರದ ಮಂದಿಯ ಮಾತು. ವರದಿಗಳ ಪ್ರಕಾರ, ರಾಕಿ ಭಾಯ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಸುಮಾರು 25ರಿಂದ 27 ಕೋಟಿ ರೂ ಸಂಭಾವನೆ ಪಡೆದುಕೊಂಡಿದ್ದಾರೆಂದು ಹೇಳಲಾಗ್ತಿದೆ. ಉಳಿದಂತೆ, ಅಧೀರನ ಪಾತ್ರದಲ್ಲಿರುವ ಬಾಲಿವುಡ್ ನಟ ಸಂಜಯ್ ದತ್ 9ರಿಂದ 10 ಕೋಟಿ ರೂ. ಪಡೆದುಕೊಂಡಿದ್ದಾರಂತೆ.
ಇದನ್ನೂ ಓದಿ: ರಣ...ರಣ..ಧೀರ ಎನ್ನುತ್ತಾ ಬಂದ ‘ಸುಲ್ತಾನ್’: ಕೆಜಿಎಫ್-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್
ಭಾರತದ ಪ್ರಧಾನಿಯ ಪಾತ್ರದಲ್ಲಿ ನಟಿಸಿರುವ ರವೀನಾ ಟಂಡನ್ ಈ ಚಿತ್ರಕ್ಕಾಗಿ 1-2 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದಾರೆಂದು ಹೇಳಲಾಗ್ತಿದ್ದು, ನಿರ್ದೇಶಕ ಹಾಗೂ ಬರಹಗಾರ ಪ್ರಶಾಂತ್ ನೀಲ್ 15ರಿಂದ 20 ಕೋಟಿ ರೂ. ಹಣ ಪಡೆದಿದ್ದಾರಂತೆ.
ರೀನಾ ದೇಸಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ 3ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿರುವ ಸಾಧ್ಯತೆ ಇದ್ದು, ಉಳಿದಂತೆ ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಕಾಶ್ ರೈ 80ರಿಂದ 82 ಲಕ್ಷ ರೂ. ಚಾಪ್ಟರ್ 1 ಭಾಗದಲ್ಲಿರುವ ಅನಂತ್ ನಾಗ್ 50ರಿಂದ 52 ಲಕ್ಷ ರೂ.ಪಡೆದುಕೊಂಡಿದ್ದಾರೆ. ಸುದ್ದಿವಾಹಿನಿವೊಂದರ ಮುಖ್ಯ ಸಂಪಾದಕಿ ದೀಪಾ ಪಾತ್ರದಲ್ಲಿ ನಟನೆ ಮಾಡಿರುವ ಮಾಳವಿಕಾ ಅವಿನಾಶ್ 60ರಿಂದ 62 ಲಕ್ಷ ರೂ ಸಂಭಾವನೆ ಪಡೆದುಕೊಂಡಿದ್ದಾರೆಂದು ಹೇಳಲಾಗ್ತಿದೆ.