ETV Bharat / entertainment

ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಬರೆದ 'ಕೆಜಿಎಫ್ ಚಾಪ್ಟರ್ 2'.. ಫಸ್ಟ್ ಡೇ ಕಲೆಕ್ಷನ್‌ ಇಷ್ಟು ₹___ ಕೋಟಿ

author img

By

Published : Apr 15, 2022, 10:32 AM IST

Updated : Apr 15, 2022, 12:27 PM IST

ಗುರುವಾರ ಬಿಡುಗಡೆಯಾದ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಇತಿಹಾಸ ಸೃಷ್ಟಿಸಿದೆ. ಯಶ್‌ ನಟನೆಯ ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ರೂ.185 ಕೋಟಿಗೂ ಅಧಿಕ ಕಲೆಕ್ಷನ್‌ ದಾಖಲಿಸಿದೆ..

KGF Chapter 2
ಕೆಜಿಎಫ್ ಚಾಪ್ಟರ್ 2

ಕನ್ನಡ ಚಿತ್ರರಂಗವಲ್ಲದೇ ಇಡೀ ವಿಶ್ವಾದ್ಯಂತ ಕ್ರೇಜ್ ಹುಟ್ಟಿಸಿದ 'ಕೆಜಿಎಫ್ ಚಾಪ್ಟರ್ 2' ಸಿನಿಮಾ,‌ ನಿನ್ನೆ (ಗುರುವಾರ) 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆದಿದೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ವಿದೇಶಿ ಪ್ರೇಕ್ಷಕರಿಂದ ಕೂಡ ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಹೊಂದಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ದಿನದ, ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಅನ್ನೋದು ಅಭಿಮಾನಿಗಳು ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಕೂತೂಹಲ ಕೆರಳಿಸಿದೆ.

ಸಿನಿಮಾದ ಫಸ್ಟ್ ಡೇ ಕಲೆಕ್ಷನ್‌ ಕೇಳಿದ್ರೆ, ನಿಜಕ್ಕೂ ದಾಖಲೆಯೇ ಸರಿ. ಸಿನಿಮಾ‌ ಪಂಡಿತರ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ತನ್ನ ಹಿಂದಿನ ಕೆಜಿಎಫ್ ಕಲೆಕ್ಷನ್‌ ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಕೆಜಿಎಫ್ ಸಿನಿಮಾ ಬಿಡುಗಡೆ ಆದಾಗ ವಿಶ್ವಾದ್ಯಂತ 100 ಕೋಟಿ ಕಲೆಕ್ಷನ್‌ ಮಾಡಿತ್ತು. ಆದರೆ, ಕೆಜಿಎಫ್ ಚಾಪ್ಟರ್ 2 ಈ ದಾಖಲೆಯನ್ನು ತಾನೇ ಮುರಿದು ವಿಶ್ವಾದ್ಯಂತ ಬರೋಬ್ಬರಿ ರೂ.185 ಕೋಟಿ ಕಲೆಕ್ಷನ್‌ ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ ಎಂಬುದು ಸಿನಿಮಾ ಪಂಡಿತರು ಹೇಳುವ ಮಾತು.

ಇದನ್ನೂ ಓದಿ: ಗಾಂಧಿನಗರದ 4 ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ- ದಾಖಲೆಗೆ ಫ್ಯಾನ್ಸ್​ ಖುಷ್​

185 ಕೋಟಿ ಕಲೆಕ್ಷನ್‌ : ಕೆಜಿಎಫ್ ಚಾಪ್ಟರ್ 2 ಸಿನಿಮಾ, ಫಸ್ಟ್ ಡೇ 185 ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ಮೂಲಕ ಮೈಲಿಗಲ್ಲು ಸಾಧಿಸಿದೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ 4 ರಿಂದ 5 ಶೋ ಪ್ರದರ್ಶನಗೊಳ್ಳುವ ಮೂಲಕ ಹೌಸ್‌ಪುಲ್ ಆಗಿದೆ.

ಮತ್ತೊಂದೆಡೆ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ ಜಾಸ್ತಿ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆ ಸೇರಿದಂತೆ ಭಾರತ ಅಲ್ಲದೆ ಅಮೆರಿಕಾ, ಕೆನಡಾ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾಗಿತ್ತು. ಇದೆನ್ನೆಲ್ಲಾ ಲೆಕ್ಕ ಹಾಕಿದರೆ, ವಿಶ್ವಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಒಟ್ಟು ಕಲೆಕ್ಷನ್‌ 185 ಕೋಟಿ, ಇದರಲ್ಲಿ 35 ಕೋಟಿ ಚಿತ್ರಮಂದಿರಗಳ ಬಾಡಿಗೆ ತೆಗೆದರೆ, 150 ಕೋಟಿ ನೆಟ್ ಪ್ರಾಫಿಟ್​ ಎನ್ನಲಾಗುತ್ತಿದೆ.

ಹೊಸ ದಾಖಲೆ : ಕರ್ನಾಟಕದಲ್ಲಿಯೇ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಫಸ್ಟ್ ಡೇ, ಬರೋಬ್ಬರಿ 35 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಸೇರಿದರೆ 3000ಕ್ಕೂ ಸ್ಕ್ರೀನ್​​ಗಳಲ್ಲಿ ಶೋ ಪ್ರದರ್ಶನ ಆಗಿದೆ. ಇದು ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಬಹುದು. ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಕೆಜಿಎಫ್​​-2 ಬರೋಬ್ಬರಿ 150 ಕೋಟಿ ರೂ. ಸಂಗ್ರಹಿಸಿದೆ.

ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ಹಿಂದಿ ಅವತರಣಿಕೆ, ತೆಲುಗು, ತಮಿಳು, ಮಲೆಯಾಳಂನಲ್ಲಿ 1500 ಥಿಯೇಟರ್​ಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಿತ್ತು. ಈ‌‌ ಲೆಕ್ಕಾಚಾರದ ಮೇಲೆ ಈ ನಾಲ್ಕು ಭಾಷೆಗಳಲ್ಲಿ 150 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಭಾರತ ಮಾತ್ರವಲ್ಲದೆ, ಅಮೆರಿಕಾ, ಕೆನಡಾ, ರಷ್ಯಾ, ಸೇರಿದಂತೆ ಹಲವು ದೇಶಗಳಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್​ ಆಗಿತ್ತು.

ಅಲ್ಲಿ ಕೂಡ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳುವ ಮೂಲಕ 30 ಲಕ್ಷ ರೂಪಾಯಿ ಕಲೆಕ್ಷನ್‌ ಮಾಡಿದೆ ಅಂತಾ ಹೇಳಲಾಗುತ್ತಿದೆ. ಈ ಮೂಲಕ ವಿಶ್ವಾದ್ಯಂತ, ಕೆಜಿಎಫ್ ಚಾಪ್ಟರ್ 2 ಸಿನಿಮಾ, ಮೊದಲ ದಿನ 185 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ.

ಆದರೆ, ಕೆಜಿಎಫ್ ಚಾಪ್ಟರ್ 2 ಸಿನಿಮಾದ, ಮೊದಲ ದಿನದ ಕಲೆಕ್ಷನ್‌ ಎಷ್ಟು ಎಂಬುವುದನ್ನು 'ಹೊಂಬಾಳೆ ಫಿಲ್ಮ್ಸ್' ಅಧಿಕೃತವಾಗಿ ಹೇಳಿಲ್ಲ. ಯಾಕೆಂದರೆ, ಈವರೆಗೂ ಹೊಂಬಾಳೆ ಫಿಲ್ಮ್ಸ್‌ನಲ್ಲಿ ನಿರ್ಮಾಣ ಆದ ಸಿನಿಮಾಗಳ ಕಲೆಕ್ಷನ್‌ ಎಷ್ಟು ಅನ್ನೋದನ್ನ ಬಿಟ್ಟುಕೊಟ್ಟಿಲ್ಲ. ಇನ್ನು ಮೂರು ದಿನ ರಜೆ ಇರುವ ಕಾರಣ, ಮೂರು ದಿನದಲ್ಲಿ 150 ರಿಂದ 200 ಕೋಟಿ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಥ್ರಿಲ್ಲಿಂಗ್ ಆ್ಯಕ್ಷನ್ ಜೊತೆಗೆ ತಾಯಿಕಂಡ‌ ಆಸೆಯಂತೆ ಬದುಕಿದ 'ಕೆಜಿಎಫ್ ಸುಲ್ತಾನ'!

Last Updated : Apr 15, 2022, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.