ಕೆಜಿಎಫ್-2 ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಅಲ್ಲದೇ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಟಾಲಿವುಡ್ ಟು ಬಾಲಿವುಡ್ 'ಕೆಜಿಎಫ್ 2' ರಾಖಿಭಾಯ್ ದೇ ಹವಾ ಈಗ ಮುಂದುವರೆದಿದೆ. 'RRR' ಸಿನಿಮಾಗೂ ಮೀರಿ ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಆದಾಯವನ್ನು ಈ ಸಿನಿಮಾ ಪಡೆಯುತ್ತಿದೆ.
ಈ ಚಿತ್ರವು 'ಕೆಜಿಎಫ್ 1'ರ ಮುಂದುವರಿದ ಭಾಗವಾಗಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಏಪ್ರಿಲ್ 14ರಂದು ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಇದು ದಾಖಲೆಗಳನ್ನು ನಿರ್ಮಿಸಿದೆ.
ಇದನ್ನೂ ಓದಿ: 2 ದಿನದಲ್ಲಿ ₹300 ಕೋಟಿ ಗಡಿ ದಾಟಿದ ಕೆಜಿಎಫ್-2... ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ
'ಕೆಜಿಎಫ್ 2' ದೇಶಾದ್ಯಂತ ಒಂದು ವಾರದಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸಿದ ಮೊದಲ ಚಿತ್ರವಾಗಿದೆ. ಕಾಮ್‌ಸ್ಕೋರ್ ವರದಿಯ ಪ್ರಕಾರ, 'ಕೆಜಿಎಫ್' ಏಪ್ರಿಲ್ 15 ರಿಂದ 17ರ ನಡುವೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮವಾಗಿದೆ. ಬಿಡುಗಡೆಯಾದ ನಾಲ್ಕೇ ದಿನದಲ್ಲಿ ವಿಶ್ವದಾದ್ಯಂತ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟ್ರೇಡ್ ಮೂಲಗಳ ಪ್ರಕಾರ ಮೊದಲ ದಿನ 165.37 ರೂ. ಕೋಟಿ, ಎರಡನೇ ದಿನ ರೂ.139.25, ಮೂರನೇ ದಿನ ರೂ.115.08 ಮತ್ತು ನಾಲ್ಕನೇ ದಿನ ರೂ. 132.13 ಕೋಟಿ ಗಳಿಸಿದೆ.
ಬಾಲಿವುಡ್‌ನಲ್ಲಿ ಕೆಜಿಎಫ್ 2 ಕಲೆಕ್ಷನ್ನಲ್ಲಿ ದಾಖಲೆ : ಬಾಲಿವುಡ್‌ನಲ್ಲಿ ಇತಿಹಾಸ ನಿರ್ಮಿಸಿರುವ 'ಕೆಜಿಎಫ್ 2' ಮತ್ತೊಂದು ಸಾಧನೆ ಮಾಡಿದೆ. ಅತಿ ವೇಗದಲ್ಲಿ 200 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಲ್ಕು ದಿನಗಳ ಅಂತ್ಯಕ್ಕೆ 193.99 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ ರೂ. 53.95, ಎರಡನೇ ದಿನ ರೂ. 46.79, ಮೂರನೇ ದಿನ ರೂ. 42.90 ಮತ್ತು ನಾಲ್ಕನೇ ದಿನ ರೂ. 50.35, ಐದನೇ ದಿನ ಅಂದರೆ ಸೋಮವಾರ ಇದು 200 ಕೋಟಿ ದಾಟಿದೆ ಎಂದೇ ಹೇಳಬಹುದು.