ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಬಹುಭಾಷಾ ಚಿತ್ರಗಳಲ್ಲಿ ಒಂದಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಕೆಡಿ-ದಿ ಡೆವಿಲ್' ಚಿತ್ರಕ್ಕೆ ಈಗಾಗಲೇ ದೊಡ್ಡ ತಾರಾಗಣವನ್ನು ನಿರ್ದೇಶಕ ಜೋಗಿ ಪ್ರೇಮ್ ಸೆಟ್ ಮಾಡಿದ್ದಾರೆ. ಆದರೆ ಧ್ರುವ ಸರ್ಜಾ ಜೊತೆ ರೊಮ್ಯಾನ್ಸ್ ಮಾಡುವ ನಟಿ ಯಾರು ಎಂಬುದು ಇನ್ನೂ ರಿವಿಲ್ ಆಗಿಲ್ಲ. ಇದೇ 28 ರಂದು ಬೆಳಗ್ಗೆ 10:30ಕ್ಕೆ ನಾಯಕಿ ಯಾರೆಂದು ಚಿತ್ರ ತಂಡ ನಾಯಕ ನಟಿಯ ಪರಿಚಯ ಮಾಡಲಿದೆ. ಈ ಬಗ್ಗೆ ಚಿತ್ರ ತಂಡ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟರ್ ಹಂಚಿಕೊಂಡಿದೆ.
ಪಕ್ಕಾ ಹಳ್ಳಿಗಾಡಿನ ಕ್ಯಾರೆಕ್ಟರ್ ಪರಿಚಯ ಮಾಡುವ ರೀತಿಯಲ್ಲಿ ಪೋಸ್ಟರ್ ಡಿಸೈನ್ ಇದೆ. ನಾಯಕಿಯ ಹೆಸರನ್ನು ಮಚ್ಚಲಕ್ಷ್ಮಿ ಎಂದು ಕರೆಯಲಾಗಿದೆ. "ರಾಜನು ಯುದ್ಧದಲ್ಲಿ ಗಾಯಗೊಂಡಾಗ, ರಾಣಿ ಅವನ ನೋವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತಾಳೆ" ಎಂಬ ಸಾಲು ನಾಯಕಿಯ ಪಾತ್ರಕ್ಕೆ ಹಿಂಟ್ ಆಗಿದೆ. ಹುಂಜ ಫೋಟೋವನ್ನು ಪೋಸ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
-
When the king is hurt in battle, the queen converts his pain into power. Introducing #KD's queen - #MachhLakshmi on the 28th of April at 10:05 AM.#KDTheDevil @DhruvaSarja @KvnProductions @TheShilpaShetty @ArjunJanyaMusic @duttsanjay @SUPRITH_87 #prems #vravichandran pic.twitter.com/7gn9Nqa0Kv
— PREM❣️S (@directorprems) April 25, 2023 " class="align-text-top noRightClick twitterSection" data="
">When the king is hurt in battle, the queen converts his pain into power. Introducing #KD's queen - #MachhLakshmi on the 28th of April at 10:05 AM.#KDTheDevil @DhruvaSarja @KvnProductions @TheShilpaShetty @ArjunJanyaMusic @duttsanjay @SUPRITH_87 #prems #vravichandran pic.twitter.com/7gn9Nqa0Kv
— PREM❣️S (@directorprems) April 25, 2023When the king is hurt in battle, the queen converts his pain into power. Introducing #KD's queen - #MachhLakshmi on the 28th of April at 10:05 AM.#KDTheDevil @DhruvaSarja @KvnProductions @TheShilpaShetty @ArjunJanyaMusic @duttsanjay @SUPRITH_87 #prems #vravichandran pic.twitter.com/7gn9Nqa0Kv
— PREM❣️S (@directorprems) April 25, 2023
ತಾಯಿ ಸೆಂಟಿಮೆಂಟ್ನ ಚಿತ್ರಗಳನ್ನು ಮತ್ತು ರೌಡಿಸಂ ವಿಚಾರವನ್ನು ಸುಂದರವಾಗಿ ಹೆಣೆಯುವುದರಲ್ಲಿ ಜೋಗಿ ಪ್ರೇಮ್ ನಿಸ್ಸೀಮರು. ಈಗ ಪ್ಯಾನ್ ಇಂಡಿಯಾ ಕಥೆ ಮಾಡಿರುವ ಪ್ರೇಮ್ ಸಿನಿಮಾಕ್ಕೆ ಕೆಡಿ (ಕಾಳಿದಾಸ) ಎಂದು ಹೆಸರಿಟ್ಟಿದ್ದಾರೆ. ಜೋಗಿ, ಎಕ್ಸ್ ಕ್ಯೂಸ್ ಮಿ, ದ ವಿಲನ್ ರೀತಿಯ ಮಾತೃ ಪ್ರೇಮದ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.
ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯಾವತಿ ಪಾತ್ರ ಮಾಡುತ್ತಿದ್ದಾರೆ. ರವಿಚಂದ್ರನ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಕೆಜಿಎಫ್ ನಂತರ ಸಂಜಯ್ ದತ್ ಕೂಡಾ ಕೆಡಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಇಷ್ಟು ದೊಡ್ಡ ತಾರಾಬಳಗ ಇರುವ ಚಿತ್ರಕ್ಕೆ ನಾಯಕಿ ಯಾರು ಎಂಬುದು ಕುತೂಹಲವಾಗಿದೆ. ಜೋಗಿಯಲ್ಲಿ ಜೆನಿಫರ್ ಕೋತ್ವಾಲ್, ಕರಿಯಾದಲ್ಲಿ ಅಭಿನಯಶ್ರೀ, ದಿ ವಿಲನ್ಗೆ ಆ್ಯಮಿ ಜಾಕ್ಸನ್ ಅವರಂತ ಪರ ಭಾಷಾ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದ ಪ್ರೇಮ್ ಈ ಚಿತ್ರಕ್ಕೆ ಯಾವ ಹಿರೋಯಿನ್ ಮಣೆ ಹಾಕಿದ್ದಾರೆ ಎಂಬುದೇ ಕುತೂಹಲ.
ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಅಖಾಡದಲ್ಲಿ ಬಾಲಿವುಡ್ ಖಳನಾಯಕ
ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟರನ್ನು ಹಂಚಿಕೊಂಡು, "ರಾಜನು ಯುದ್ಧದಲ್ಲಿ ಗಾಯಗೊಂಡಾಗ, ರಾಣಿ ಅವನ ನೋವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತಾಳೆ. #KD ಯ ರಾಣಿ - #MachhLakshmi ಅನ್ನು ಏಪ್ರಿಲ್ 28 ರಂದು 10:05 AM ಕ್ಕೆ ಪರಿಚಯಿವಾಗಲಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.
ಅವರ ಕೆಡಿ ಸಿನಿಮಾದ ಪಾತ್ರ ಬಿಡುಗಡೆ ಆದ ಸಂದರ್ಭದಲ್ಲಿ "ರಾಜ್ಯಗಳ ನಡುವೆ ಯುದ್ಧ ನಡೆಯುತ್ತವೆ ಮತ್ತು ಪ್ರತಿ ರಾಜ್ಯಕ್ಕೂ 'ಸತ್ಯಾವತಿ' ಬೇಕು. ನಾನು 'ಕೆಡಿ' ಯುದ್ಧಭೂಮಿಗೆ ಸೇರಲು ಮತ್ತು ಈ ಶಕ್ತಿಯುತ ಪಾತ್ರಕ್ಕೆ ನಿರ್ವಹಿಸಲು ತುಂಬಾ ಉತ್ಸುಕಳಾಗಿದ್ದೇನೆ," ಎಂದಿದ್ದರು. ಕೆಡಿ ದಿ ಡೆವಿಲ್ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಕೆಡಿ' ಸಿನಿಮಾಗೆ 'ಸತ್ಯವತಿ'ಯಾಗಿ ಶಿಲ್ಪಾ ಶೆಟ್ಟಿ ಎಂಟ್ರಿ..!