ETV Bharat / entertainment

ಕೆಸಿಸಿ ಕ್ರಿಕೆಟ್ ಟೂರ್ನಿ ಆರಂಭ: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಾಥ್ - KCC 3

ನಟ ಸುದೀಪ್‌ ನೇತೃತ್ವದಲ್ಲಿ ಇಂದು ಕೆಸಿಸಿ ಸೀಸನ್ 3 ಪ್ರಾರಂಭವಾಗಿದೆ.

KCC Season 3
ಕೆಸಿಸಿ ಸೀಸನ್ 3
author img

By

Published : Feb 24, 2023, 8:13 PM IST

ಕೆಸಿಸಿ ಸೀಸನ್ 3

ಸಿಸಿಎಲ್ ಕ್ರಿಕೆಟ್ ಲೀಗ್ ಬಳಿಕ ಸೌತ್​ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರಿಕೆಟ್ ಟೂರ್ನಿ ಅಂದ್ರೆ ಅದು ಕೆಸಿಸಿ. 'ಕರ್ನಾಟಕ ಚಲನಚಿತ್ರ ಕಪ್' ಹೆಸರಿನಲ್ಲಿ ಸ್ಯಾಂಡಲ್​ವುಡ್​​ ಕಲಾವಿದರೆಲ್ಲರೂ ಒಂದೆಡೆ ಸೇರಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆ. ಈಗಾಗಲೇ ಕೆಸಿಸಿ ಸೀಸನ್‌ 1 ಮತ್ತು 2 ಯಶಸ್ವಿಯಾಗಿದ್ದು, ನಟ ಸುದೀಪ್‌ ನೇತೃತ್ವದಲ್ಲಿ ಇಂದು ಕೆಸಿಸಿ ಸೀಸನ್ 3 ಆರಂಭವಾಗಿದೆ.

KCC Season 3
ಕೆಸಿಸಿ ಸೀಸನ್ 3

ಕನ್ನಡ ಚಲನಚಿತ್ರ ಕಪ್​ ಹಿನ್ನೆಲೆಯಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚುವ ತಾರೆಗಳೆಲ್ಲ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟುಗೂಡಿದ್ದಾರೆ. ನಮ್ಮ ತಾರೆಯಗಳ ಜೊತೆಗೆ ಇಂಟರ್​ನ್ಯಾಷನಲ್ ತಾರೆಯರು ಸಹ ಫೀಲ್ಡ್​​​ಗಿಳಿದ್ದಿದ್ದು ಮತ್ತೊಂದು ವಿಶೇಷ. ತಾರೆಯರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಉಪಸ್ಥಿತರಾಗಿದ್ದರು.

ಎರಡು ಕೆಸಿಸಿ ಟೂರ್ನಿಮೆಂಟ್​​ ಯಶಸ್ವಿಯಾಗಿ ಆಯೋಜನೆ ಮಾಡಿದ್ದ ಕಿಚ್ಚ ಈ ಬಾರಿ ಇನಷ್ಟು ರಂಗು ರಂಗಾಗಿ ಕನ್ನಡ ಚಲನಚಿತ್ರ ಕಪ್​ ಆಯೋಜನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಇಷ್ಟು ದಿನ ಅಭ್ಯಾಸ ಮಾಡಿ ಇಂದು ಗ್ರೌಂಡ್​ಗೆ ಇಳಿದ್ದಾರೆ.

KCC Season 3
ಕೆಸಿಸಿ ಸೀಸನ್ 3

ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡೋ ಮೂಲಕ ಚಾಲನೆ ನೀಡಿದರು. ಆರೋಗ್ಯ ಸಚಿವ ಡಾ.ಸುಧಾಕರ್ ಇದ್ದರು. 80 ಅಡಿ ಉದ್ದ 140 ಅಡಿ ಅಗಲವಿರೋ ಕನ್ನಡ ಧ್ವಜವನ್ನು ತಾರೆಯರು ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಸೋಶಿಯಲ್ ಮೀಡಿಯಾ ತ್ಯಜಿಸಿದ ಸೆಲೆನಾ ಗೊಮೆಜ್: ಇವರಿಗಿದ್ದ ಫಾಲೋವರ್ಸ್‌ ಎಷ್ಟು ಗೊತ್ತೇ?

ನಟರಾದ ಶಿವರಾಜ್ ​​ಕುಮಾರ್, ರವಿಚಂದ್ರನ್, ಡಾಲಿ ಧನಂಜಯ್, ಧ್ರುವ ಸರ್ಜಾ, ಉಪೇಂದ್ರ, ಗಣೇಶ್ ಸೇರಿದಂತೆ ಕನ್ನಡದ ಅನೇಕ ತಾರೆಯರು ಚಿನ್ನಸ್ವಾಮಿ ಗ್ರೌಂಡ್​ನಲ್ಲಿ ಕಾಣಿಸಿಕೊಂಡರು. ​​ಇವರಲ್ಲದೇ ಮೈಸೂರು ರಾಜ ಪರಿವಾರದ ಯದುವೀರ್​ ಒಡೆಯರ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಾಕಿಸ್ತಾನದಲ್ಲೂ RRR​ ಕ್ರೇಜ್: ನಾಟು ನಾಟು ಹಾಡಿಗೆ ನಟಿಯಿಂದ ಭರ್ಜರಿ ಸ್ಟೆಪ್ಸ್‌- ನೋಡಿ

ಕೆಸಿಸಿ 3ರ ಮತ್ತೊಂದು ವಿಶೇಷ ಅಂದ್ರೆ ಇಂಟರ್‌​ನ್ಯಾಷನಲ್ ಪ್ಲೇಯರ್ಸ್. ಕ್ರಿಸ್ ಗೇಲ್, ಸುರೇಶ್ ರೈನಾ, ಎಸ್. ಬದ್ರಿನಾಥ್, ಬ್ರಯಾನ್ ಲಾರಾ, ತಿಲಕರತ್ನೆ ದಿಲ್‌ಶಾನ್, ಹರ್ಷಲ್ ಗಿಬ್ಸ್ ಈ ಬಾರಿಯ ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಂದು ಮತ್ತು ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ 3 ಮ್ಯಾಚ್​ ನಡೆಯುತ್ತಿದ್ದು, ಭರಪೂರ ಮನರಂಜನೆ ಸಿಗೋದಂತೂ ಪಕ್ಕಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.