ಬೆಂಗಳೂರು: ಸುಪ್ರಸಿದ್ದ ಆಭರಣ ಬ್ರಾಂಡ್ ಕೇರಳದ ತ್ರಿಶೂರ್ನಲ್ಲಿ ಅದ್ದೂರಿ ನವರಾತ್ರಿ ಸಂಭ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನಟ ನಾಗರ್ಜುನ ಮತ್ತು ಚೈತನ್ಯ ಅಕ್ಕಿನೇನಿ, ಕತ್ರಿನಾ ಕೈಫ್, ಅಜಯ್ ದೇವಗನ್, ಜಾಹ್ನವಿ ಕಪೂರ್, ಕೃತಿ ಸನೋನ್, ರಶ್ಮಿಕಾ ಮಂದಣ್ಣ, ಶಿಲ್ಪಾ ಶೆಟ್ಟಿ, ವಾಮಿಗಾ ಗಬ್ಬಿ ಮತ್ತಿತ್ತರು ಭಾಗಿಯಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಭಾಗಿಯಾದ ತಾರೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ ಮಿಂಚಿರುವುದು ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿ ನಟಿ ಕತ್ರಿನಾ ಕೈಫ್ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರು. ಈ ವೇಳೆ, ಅವರ ಹಣೆಯಲ್ಲಿದ್ದ ಬಿಂದಿ ಎಲ್ಲರ ಕಣ್ಣು ಸೆಳೆಯಿತು. ಬಂದಿದ್ದ ಅತಿಥಿಗಳ ಜೊತೆಗೆ ಸ್ನೇಹ ಮಾತುಕತೆ ನಡೆಸಿದ ಅವರು, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ಯಾಪರಜಿಗಳು ನಟಿ ಕತ್ರಿನಾ ಕೈಫ್ ಅವರ ಈ ಕಾರ್ಯಕ್ರಮದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅವರನ್ನು ಕಂಡ ಅಭಿಮಾನಿಗಳು ಶ್ಲಾಘಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಮೆಂಟ್ ಮಾಡಿರುವ ಅನೇಕ ಮಂದಿ, 'ಆಕೆಯ ಸೌಂದರ್ಯ ಮಾತಿಗೆ ಮೀರಿದ್ದು' ಎಂದರೆ, ಮತ್ತೊಬ್ಬರು, 'ನಿಜ ಸೌಂದರ್ಯವತಿ' ಎಂದಿದ್ದಾರೆ. ಮತ್ತೊಬ್ಬರು 'ಆಕೆ ಎಲ್ಲರನ್ನೂ ಹಿಂದಿಕ್ಕಿದ್ದಾರೆ' ಎಂದಿದ್ದು, 'ಸೌಂದರ್ಯ ಮತ್ತು ಸೊಬಗಿನ ರಾಣಿ' ಎಂದು ಉದ್ಘರಿಸಿದ್ದಾರೆ.
ನಾಗರ್ಜುನ ಮತ್ತು ಅವರ ಮಗ ಚೈತನ್ಯ ಅಕ್ಕಿನೇನಿ ಕೂಡ ಈ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಈ ವೇಳೆ ನಾಗಾರ್ಜುನ ಹೂವಿನ ಚಿತ್ತಾರದ ಕುರ್ತಾ ಪೈಜಾಮದಲ್ಲಿ ಮಿಂಚಿದರೆ, ಚೈತನ್ಯ ಬಿಳಿ ಬಣ್ಣದ ಸರಳ ಪೈಜಾಮದಲ್ಲಿ ಕಂಗೊಳಿಸಿದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್, ಸೌಂದರ್ಯಕ್ಕೆ ಮತ್ತೊಂದು ರೂಪದಂತೆ ಕಂಡರು. ಗುಲಾಬಿ ಬಣ್ಣದ ಸೀರೆಯಲ್ಲಿ ಅವರು ಮಿಂಚಿದರು. ನಟಿ ಶಿಲ್ಪ ಶೆಟ್ಟಿ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸಿದರೆ, ನಟಿ ರಶ್ಮಿಕಾ ಮಂದಣ್ಣ ಹಳದಿ ಬಣ್ಣದ ಅನಾರ್ಕಲಿ ಧಿರಿಸಿನಲ್ಲಿ ಕಂಡರು. ಜಾಹ್ನವಿ ಕಪೂರ್ ಲ್ಯಾವೆಂಡರ್ ಬಣ್ಣದ ಟಿಶ್ಯೂ ಸಿಲ್ಕ್ ಸೀರೆಯಲ್ಲಿ ಗಮನಸೆಳೆದರು.
ನಟಿ ಸೋನಾಕ್ಷಿ ಸಿನ್ಹಾ ಅವರ ಗೆಳೆಯ ಎನ್ನಲಾದ ಜಾಹೀರ್ ಇಕ್ಬಾಲ್ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ, ಅವರು ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದು, ಟೆಂಪಲ್ ಆಭರಣ ಗಮನ ಸೆಳೆಯಿತು. ಅಜಯ್ ದೇವಗನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದರು. ಅವರು ಲ್ಯಾವೆಂಡರ್ ಬಣ್ಣದ ಕುರ್ತಾ ಜೊತೆಗೆ ಕಪ್ಪು ಬಣ್ಣದ ಪೈಜಾಮ ಧರಿಸಿದರು. ಇನ್ನು ನಟಿ ಕಾಜೋಲ್ ಮುಂಬೈನ ದುರ್ಗಾ ಪೂಜೆಯಲ್ಲಿ ಭಾಗಿಯಾದರು.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ದ ಕೊಹ್ಲಿ ಅಬ್ಬರ: ಪತಿಯ ಆಟಕ್ಕೆ ಮನಸೋತ ಪತ್ನಿ ಅನುಷ್ಕಾ ಇನ್ಸ್ಟಾದಲ್ಲಿ ಮೆಚ್ಚುಗೆ