ಮುಂಬೈ: ಬಾಲಿವುಡ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ಆರು ತಿಂಗಳು ಕಳೆದಿದೆ. ಇದರ ಮಧ್ಯೆ ಕತ್ರಿನಾ ಕೈಫ್ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಗಾಸಿಪ್ ಸುದ್ದಿ ಎಲ್ಲೆಡೆ ಹರಿದಾಡ್ತಿತ್ತು. ಈ ಸುದ್ದಿಗೆ ಕೊನೆಗೂ ಉತ್ತರ ಸಿಕ್ಕಿದೆ.
2021ರ ಡಿಸೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ತಾರಾ ಜೋಡಿ, ಸುಖ ಜೀವನ ನಡೆಸುತ್ತಿದ್ದಾರೆ. ಇದರ ಮಧ್ಯೆ ಇಂತಹದೊಂದು ಸುದ್ದಿ ಹರಿದಾಡಲು ಶುರುವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕತ್ರಿನಾ ನಟನೆ ಮಾಡ್ತಿರುವ ಚಿತ್ರತಂಡದಿಂದ ಸ್ಪಷ್ಟನೆ ನೀಡಲಾಗಿದೆ.
![katrina kaif pregnant](https://etvbharatimages.akamaized.net/etvbharat/prod-images/15275052_twdfdfd.jpg)
ಕತ್ರಿನಾ ಕೈಫ್ ಪ್ರೆಗ್ನೆಂಟ್ ಆಗಿಲ್ಲ. ಸದ್ಯ ಅವರು ಕೆಲಸದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡಲಾಗಿದೆ. ಸದ್ಯ ಕತ್ರಿನಾ ಅನೇಕ ಚಿತ್ರಗಳಲ್ಲಿ ನಟನೆ ಮಾಡ್ತಿರುವ ಕಾರಣ ಫುಲ್ ಬ್ಯುಸಿಯಾಗಿದ್ದು, ಅವರ ಬಗ್ಗೆ ಹರಿದಾಡ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ಇತ್ತೀಚೆಗೆ ಸಲ್ವಾರ್ ಕುರ್ತಾದಲ್ಲಿ ಕತ್ರಿನಾ ಕೈಫ್ ಮುಂಬೈ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಆ ವೇಳೆ, ಹೊಟ್ಟೆ ಕಾಣದ ರೀತಿಯಲ್ಲಿ ದುಪ್ಪಟ್ಟಾ ಹಾಕಿಕೊಂಡಿದ್ದರು. ಇದನ್ನು ನೋಡಿ ಕೆಲವರಿಗೆ ಕತ್ರಿನಾ ಗರ್ಭಿಣಿಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕೇರಳದ ರೂಪದರ್ಶಿ ಶಹನಾ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಧ್ಯ ನ್ಯೂಯಾರ್ಕ್ನಲ್ಲಿ ಕಾಲ ಕಳೆಯುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಇದರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.