ETV Bharat / entertainment

ಸಂಭ್ರಮದ ಕ್ಷಣದಲ್ಲಿ ಡಿಯೋಲ್ ಫ್ಯಾಮಿಲಿ: ಮದುವೆ ಶಾಸ್ತ್ರದಲ್ಲಿ ಕರಣ್ ದ್ರಿಶಾ - ಸನ್ನಿ ಡಿಯೋಲ್ ಮಗ ಕರಣ್​

ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ ಹೋಟೆಲ್​ನಲ್ಲಿ ಕರಣ್ ಡಿಯೋಲ್ ಮತ್ತು ದ್ರಿಶಾ ಆಚಾರ್ಯ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿದೆ.

karan deol marriage pics
ಕರಣ್ ಡಿಯೋಲ್ ಮದುವೆ ಕಾರ್ಯಕ್ರಮ
author img

By

Published : Jun 18, 2023, 1:10 PM IST

ಬಾಲಿವುಡ್‌ನ ಜನಪ್ರಿಯ ಡಿಯೋಲ್ ಫ್ಯಾಮಿಲಿಗೆ ಇಂದು ವಿಶೇಷ ದಿನ. ಫೇಮಸ್​​ ನಟ ಸನ್ನಿ ಡಿಯೋಲ್ ಅವರ ಹಿರಿಮಗ ಕರಣ್ ಡಿಯೋಲ್ (Karan Deol) ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿದೆ. ಕೆಲವೇ ಗಂಟೆಗಳಲ್ಲಿ ತಮ್ಮ ಬಹುಕಾಲದ ಗೆಳತಿ ದ್ರಿಶಾ ಆಚಾರ್ಯ (Drisha Acharya) ಅವರ ಕೈ ಹಿಡಿಯಲಿದ್ದಾರೆ. ಇದೀಗ ಶಾಸ್ತ್ರಗಳು ಜರುಗುತ್ತಿವೆ. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ಗೆ ವರ ಮತ್ತು ಅವರ ಕುಟುಂಬಸ್ಥರು ಈಗಾಗಲೇ ಆಗಮಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪಾಪರಾಜಿಗಳ ಖಾತೆಯಿಂದ ಮದುವೆ ಕಾರ್ಯಕ್ರಮದ ಫೋಟೋ, ವಿಡಿಯೋ ಶೇರ್ ಆಗುತ್ತಿವೆ. ಪ್ರತಿ ಫೋಟೋಗಳು ಸದ್ಯ ಟ್ರೆಂಡ್​ ಆಗಿವೆ. ಇಡೀ ಡಿಯೋಲ್​ ಕುಟುಂಬ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಕುದುರೆ ಏರಿ ಬಂದ ವರನ ಮೊಗ ಬಹಳ ಸಂತೋಷದಿಂದ ಹೊಳೆಯುತ್ತಿತ್ತು. ಮದುವೆಗೆ ಅತಿಥಿಗಳು ಆಗಮಿಸುತ್ತಿದ್ದಾರೆ. ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ.

ವರನ ತಂದೆ ಸನ್ನಿ ಡಿಯೋಲ್ ಹಸಿರು ಬಣ್ಣದ ಕುರ್ತಾ ಮತ್ತು ಕೆಂಪು ಪೇಟದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ ಡಿಯೋಲ್​ ಸಹೋದರ ಬಾಬಿ ಡಿಯೋಲ್ ಕೂಡ ವೈರಲ್​ ಆಗುತ್ತಿರುವ ಫೋಟೋ, ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಕೆಂಪು ಪೇಟ, ನೀಲಿ ಶೆರ್ವಾನಿಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರ ಪತ್ನಿ ತಾನ್ಯಾ ಡಿಯೋಲ್ ಸೂಟ್‌ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ವರನ ಅಜ್ಜ ಹಾಗೂ ಹಿರಿಯ ನಟ ಧರ್ಮೇಂದ್ರ ಕೂಡ ಸ್ಥಳಕ್ಕೆ ಆಗಮಿಸಿ ನವ ಜೋಡಿಗೆ ಆಶೀರ್ವಾದ ನೀಡಿದರು. ಅವರು ಅತ್ಯಂತ ಸಂತೋಷದಿಂದಿರುವಂತೆ ಕಾಣುತ್ತಿದ್ದರು.

ಸನ್ನಿ ಡಿಯೋಲ್​ ಮತ್ತು ಬಾಬಿ ಡಿಯೋಲ್​ ಅವರ ಸೋದರ ಸಂಬಂಧಿ ಅಭಯ್ ಡಿಯೋಲ್ ಕೂಡ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕರಣ್ ಮತ್ತು ದ್ರಿಶಾ ಅವರ ಪೂರ್ವ ವಿವಾಹದ ಶಾಸ್ತ್ರಗಳಲ್ಲಿಯೂ ಇವರುಗಳು ಭಾಗಿ ಆಗಿದ್ದರು. ಸೋಮವಾರ ರಾತ್ರಿ ರೋಕಾ ಸಮಾರಂಭದೊಂದಿಗೆ ಮದುವೆ ಮುನ್ನದ ಶಾಸ್ತ್ರಗಳು ಪ್ರಾರಂಭವಾಯಿತು. ಸಂಗೀತ್​, ಮೆಹೆಂದಿ, ಹಳದಿ ಹೀಗೆ ಎಲ್ಲಾ ಶಾಸ್ತ್ರಗಳು ನಡೆದಿವೆ. ಪಾರ್ಟಿಯ ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿವೆ. 2018ರ 'ಬಧಾಯಿ ಹೋ' ಚಿತ್ರದ ಮೋರ್ನಿ ಬಂಕೆ ಹಾಡಿಗೆ ಸನ್ನಿ ಡಿಯೋಲ್ ನೃತ್ಯ ಮಾಡಿದ ವಿಡಿಯೋ ಆನ್​ಲೈನ್​ನಲ್ಲಿ ಸಖತ್​ ಸದ್ದು ಮಾಡಿದೆ.

ಇದನ್ನೂ ಓದಿ: Adipurush Collection: ವಿವಾದಗಳ ಹೊರತಾಗಿಯೂ 2 ದಿನದಲ್ಲಿ ₹200 ಕೋಟಿ ಬಾಚಿದ ಆದಿಪುರುಷ್​

ಕರಣ್ ಡಿಯೋಲ್​ ಮತ್ತು ದ್ರಿಶಾ ಆಚಾರ್ಯ ಬಹಳ ದಿನಗಳಿಂದ ಡೇಟಿಂಗ್‌ನಲ್ಲಿದ್ದರು ಎಂದು ಹೇಳಲಾಗಿದೆ. ವಧು ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕರಣ್ ತಮ್ಮ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ. ನಟನಾ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. 2019ರಲ್ಲಿ ಸನ್ನಿ ಡಿಯೋಲ್ ನಿರ್ದೇಶನದ ಪಲ್ ಪಲ್ ದಿಲ್ ಕೆ ಪಾಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: Animal: ಅನಿಮಲ್‌ ಚಿತ್ರದಲ್ಲಿ ರಣ್​ಬೀರ್ ಕಪೂರ್​-​ ರಶ್ಮಿಕಾ ಮಂದಣ್ಣ: ಸಿನಿಮಾ ಸೆಟ್‌ ಫೋಟೋ ವೈರಲ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.