ETV Bharat / entertainment

ಬಾಲಿವುಡ್​ ಲೈಫ್​ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್​ ಶೆಟ್ಟಿ ಅತ್ಯುತ್ತಮ ನಟ - ಈಟಿವಿ ಭಾರತ ಕನ್ನಡ

ಬಾಲಿವುಡ್​ ಲೈಫ್​ ಅವಾರ್ಡ್ಸ್​​ನಲ್ಲಿ ರಿಷಬ್​ ಶೆಟ್ಟಿ ಅತ್ಯುತ್ತಮ ನಟ ಮತ್ತು 'ಕಾಂತಾರ' ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

bollywood life awards
ಬಾಲಿವುಡ್​ ಲೈಫ್​ ಅವಾರ್ಡ್ಸ್
author img

By

Published : Mar 27, 2023, 1:04 PM IST

ಸ್ಯಾಂಡಲ್​ವುಡ್​ನಲ್ಲಿ ಕಾಂತಾರ ಚಿತ್ರ ದಂತಕಥೆಯಾಗಿಯೇ ಉಳಿಯಲಿದೆ. ಈ ಚಿತ್ರವು ರಿಷಬ್​ ಶೆಟ್ಟಿ ಅವರಿಗೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಲ್ಲದೇ, ಸಾಕಷ್ಟು ದಾಖಲೆಗಳನ್ನೂ ಬರೆದಿದೆ. ಸುಮಾರು ಏಳು ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾ ಇದೀಗ ಬಾಲಿವುಡ್​ ಲೈಫ್​ ಅವಾರ್ಡ್ಸ್​ನ ದಕ್ಷಿಣ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ರಿಷಬ್​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟಿದೆ.

ರಿಷಬ್​ ಶೆಟ್ಟಿ ಅವರು ದಾದಾ ಸಾಹೇಬ್​ ಪಾಲ್ಕೆ ಪ್ರಶಸ್ತಿ ಪಡೆದುಕೊಂಡ ಬೆನ್ನಲ್ಲೇ ಬಾಲಿವುಡ್​ ಲೈಫ್​ ಅವಾರ್ಡ್ಸ್​​ನ (BLAwards2023) ದಕ್ಷಿಣ ಸಿನಿಮಾ ವಿಭಾಗದಲ್ಲಿ ಕಾಂತಾರ ಸಿನಿಮಾಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಕಾಂತಾರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರಕಿದೆ. ಈಗಾಗಲೇ ರಿಷಬ್​ ಕಾಂತಾರ-2 ಗೆ ಭರ್ಜರಿ ತಯಾರಿ ನಡೆಸುತ್ತಿದ್ದು, ಇದೀಗ ಸಿನಿಮಾಗೆ ಸಂದಿರುವ ಪ್ರಶಸ್ತಿಗಳು ರಿಷಬ್​ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಕಾಡಿನಂಚಿನ ಜನರ ಸಮಸ್ಯೆ ಪರಿಹರಿಸುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್​ ಶೆಟ್ಟಿ

ಕಾಂತಾರ 2 ಬರವಣಿಗೆ ಪ್ರಾರಂಭ: ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದಾಗಿದೆ. ಸೂಪರ್​ ಹಿಟ್​ ಆಗಿದ್ದ ಸಿನಿಮಾದ ಸೀಕ್ವೆಲ್​ ಮಾಡುವಂತೆ ಪ್ರೇಕ್ಷಕರು ರಿಷಬ್​ ಜೊತೆ ಕೇಳಿಕೊಂಡಿದ್ದರು. ಅದರಂತೆ ಶೆಟ್ರು ಕಾಂತಾರ 2 ಸಿನಿಮಾದ ಬರವಣಿಗೆಯನ್ನು ಪ್ರಾರಂಭಿಸಿದ್ದಾರೆ. ಯುಗಾದಿ ಹಬ್ಬದ ದಿನದಂದು ಈ ಶುಭ ಸುದ್ದಿಯನ್ನು ಕನ್ನಡಿಗರಲ್ಲಿ ಸ್ವತಃ ನಟನೇ ಹಂಚಿಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್​​ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಸಿನಿಮಾ ಪಾತ್ರಧಾರಿಗಳ ಬಗ್ಗೆ ನಟ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: "ದಾದಾ ಸಾಹೇಬ್​ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ"ಯನ್ನು ಮೇರು ನಿರ್ದೇಶಕ ಭಗವಾನ್​ಗೆ ಅರ್ಪಿಸಿದ ರಿಷಬ್​ ಶೆಟ್ಟಿ

ರಿಷಬ್​ ಚಿತ್ರ ಹಿಟ್​: ಕನ್ನಡ ಚಿತ್ರರಂಗದ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಕಾಂತಾರ ಸಿನಿಮಾಗೆ ಸಲ್ಲುತ್ತದೆ. ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾವು ಪ್ರೇಕ್ಷಕರ ಬಹು ಬೇಡಿಕೆಯ ಮೇರೆಗೆ ತೆಲುಗು, ತಮಿಳು, ಹಿಂದಿ, ತುಳು, ಮಲಯಾಳಂ ಭಾಷೆಗೆ ಡಬ್ ಆಗಿ ದೇಶ ವಿದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.

ಹೊಂಬಾಳೆ ಫಿಲ್ಮ್ಸ್​ ಅಡಿಯಲ್ಲಿ ವಿಜಯ್​ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಪ್ತಮಿ ಗೌಡ, ಕಿಶೋರ್​ ಶೆಟ್ಟಿ, ಅಚ್ಯುತ್​ ಕುಮಾರ್​​, ಪ್ರಮೋದ್​ ಶೆಟ್ಟಿ, ಪ್ರಕಾಶ್​ ತೂಮಿನಾಡ್​, ನವೀನ್​ ಡಿ ಪಡೀಲ್​ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಇದೀಗ ಚಿತ್ರದ ಮತ್ತೊಂದು ಭಾಗ ಸಿದ್ಧವಾಗುತ್ತಿದ್ದು, ಸಿನಿ ಪ್ರೇಕ್ಷಕರ ನಿರೀಕ್ಷೆ ಮುಗಿಲೆತ್ತರದಲ್ಲಿದೆ.

ಇದನ್ನೂ ಓದಿ: ಸಿಹಿ ಸುದ್ದಿ ನೀಡಿದ ರಿಷಬ್ ಶೆಟ್ಟಿ: 'ಕಾಂತಾರ 2' ಸಿನಿಮಾದ ಬರವಣಿಗೆ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.