ETV Bharat / entertainment

ಕಾಂತಾರ 2 ಸಿನಿಮಾ ಸ್ಕ್ರಿಪ್ಟ್​ ಬಹುತೇಕ ರೆಡಿ; ಶೀಘ್ರದಲ್ಲೇ ಶೂಟಿಂಗ್‌ಗೆ ತಯಾರಿ - rishab shetty

ಕಾಂತಾರ 2 ಸ್ಕ್ರಿಪ್ಟ್​ ಕೆಲಸ ಬಹುತೇಕ ಪೂರ್ಣಗೊಂಡಿದೆ. ಮಳೆಗಾಲದ ಆರಂಭದಲ್ಲಿ ಸಿನಿಮಾ ಶೂಟಿಂಗ್​ ಆರಂಭಿಸುವ ಯೋಜನೆ ಇದೆ.

Kantara 2 script work
ಕಾಂತಾರ 2 ಸ್ಕ್ರಿಪ್ಟ್
author img

By

Published : May 9, 2023, 12:43 PM IST

Updated : May 9, 2023, 1:47 PM IST

'ಕಾಂತಾರ'. ಸೌತ್ ಸಿನಿಮಾ ಇಂಡಸ್ಟ್ರಿ ರೇಂಜ್ ಅನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ಅದ್ಭುತ ಚಿತ್ರ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸ್ವಯಂ ನಿರ್ದೇಶಿಸಿ, ನಟಿಸಿ ಸೈ ಎನಿಸಿಕೊಂಡ ಸಿನಿಮಾವಿದು. ಅದ್ಭುತ ಕಥೆಯೊಂದಿಗೆ ಪ್ರತಿ ಪಾತ್ರವನ್ನೂ ಸುಂದರವಾಗಿ, ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಂಶಗಳು ಚಿತ್ರಕ್ಕೆ ದೊಡ್ಡ ಪ್ಲಸ್​ ಪಾಯಿಂಟ್​ ಆದವು.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಕನ್ನಡ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೇ ಉತ್ಸಾಹದಿಂದ ಚಿತ್ರದ 100 ದಿನಗಳ ಕಾರ್ಯಕ್ರಮವನ್ನೂ ಕೂಡ ಅದ್ಧೂರಿಯಾಗಿ ಮಾಡಲಾಗಿತ್ತು. ಸಮಾರಂಭದಲ್ಲಿ ಸೀಕ್ವೆಲ್ ಬದಲಿಗೆ ಪ್ರೀಕ್ವೆಲ್ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಮಾರ್ಚ್​ನಲ್ಲಿ ಕಥೆ ಕೆಲಸ ಚುರುಕಾಯಿತು.

ಕಾಂತಾರ 2 ಕುರಿತ ಅಪ್‌ಡೇಟ್​ಗೆ ಅಭಿಮಾನಿಗಳು ಕಾತರರಾಗಿದ್ದರು. ಇದೀಗ ಸಿನಿಪ್ರಿಯರಿಗೊಂದು ಗುಡ್​ನ್ಯೂಸ್​ ಸಿಕ್ಕಿದೆ. ಪ್ರೀಕ್ವೆಲ್ ತಯಾರಿ ಆರಂಭಿಸಿರುವ ಚಿತ್ರತಂಡ ಸಿನಿಮಾದ ಸ್ಕ್ರಿಪ್ಟ್​​​​​ನ ಫೈನಲ್​ ಡ್ರಾಫ್ಟ್​​ ರೆಡಿ ಮಾಡಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆಟಿಜನ್‌ಗಳು ಪ್ರೀಕ್ವೆಲ್ ಕಥೆಯನ್ನು ಊಹಿಸಿ ಪೋಸ್ಟ್ ಮಾಡುತ್ತಿದ್ದಾರೆ. ರಿಷಬ್ ಮತ್ತು ಚಿತ್ರತಂಡ ಅಂತಿಮ ಡ್ರಾಫ್ಟ್‌ನಿಂದ ತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. ಮತ್ತೊಮ್ಮೆ ಈ ಕಥೆ ಕಡೆಗೆ ಕಣ್ಣು ಹಾಯಿಸಿ, ಫೈನಲ್​ ಮಾಡಲಿದ್ದಾರೆ.

ಲೊಕೇಶನ್​ ಹುಡುಕಾಟ, ಮಳೆಗಾಲದಲ್ಲಿ ಶೂಟಿಂಗ್​: ಚಿತ್ರತಂಡ ಈಗಾಗಲೇ ಶೂಟಿಂಗ್​​ಗೆ ಸೂಕ್ತ ಲೊಕೇಶನ್ ಹುಡುಕಾಟದಲ್ಲಿ ತೊಡಗಿದೆ. ಕರಾವಳಿಯ ಕೆಲವು ಪ್ರದೇಶಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಳೆಗಾಲದ ಆರಂಭದಲ್ಲಿ ಕಾಂತಾರ ಭಾಗ-2 (ಪ್ರೀಕ್ವೆಲ್​) ಚಿತ್ರೀಕರಣ ಆರಂಭವಾಗಲಿದೆ.

ಕಾಂತಾರ ಭಾಗ 1 ಬ್ಲಾಕ್ ಬಸ್ಟರ್ ಹಿಟ್ ಆಗಿರುವುದರಿಂದ ನಿರ್ದೇಶಕ, ನಿರ್ಮಾಪಕರು ಎರಡನೇ ಭಾಗದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯವಾಗಿ, 'ಭೂತಕೋಲ'ದ ಆಚರಣೆಯನ್ನು ತೋರಿಸುವ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಅಂಶವನ್ನು ಚಿತ್ರತಂಡ ತಲೆಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಬೆದರಿಕೆ ಆರೋಪ: ಮುಂಬೈ ಪೊಲೀಸರಿಂದ ಲುಕ್‌ಔಟ್ ನೋಟಿಸ್​

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ತೆರೆಕಂಡ ಕಾಂತಾರ ಕೇವಲ 15 ಕೋಟಿ ರೂ. ಬಜೆಟ್​ನಲ್ಲಿ ತಯಾರಾಗಿತ್ತು. ಬಿಡುಗಡೆಯಾದ ನಂತರ ಸುಮಾರು 450 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. 'ವರಾಹ ರೂಪಂ' ಹಾಡು ಪ್ರೇಕ್ಷಕರನ್ನು ಸೆಳೆಯಿತು. ಇದೀಗ ಮುಂದಿನ ಭಾಗದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ.

ಇದನ್ನೂ ಓದಿ: ಶಿವಣ್ಣನ ಕುರಿತು ವ್ಯಂಗ್ಯ ಪೋಸ್ಟ್​: ಯೂಟರ್ನ್​ ಹೊಡೆದ ಪ್ರಶಾಂತ್ ಸಂಬರಗಿ

Last Updated : May 9, 2023, 1:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.