ETV Bharat / entertainment

Love: 'ಒಂಟಿ‌ ಅಲ್ಲ ನಾನೀಗ' ಅಂತಿದ್ದಾರೆ ಯುವ ಪ್ರತಿಭೆ ಪ್ರಜಯ್ - prajay jayaram

Love Kannada movie: ಲವ್​ ಸಿನಿಮಾದ 'ಒಂಟಿ ಅಲ್ಲ ನಾನೀಗ' ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು ಉತ್ತಮ ವೀಕ್ಷಣೆ ಪಡೆಯುತ್ತಿದೆ.

Love movie ready to release
'ಒಂಟಿ ಅಲ್ಲ ನಾನೀಗ' ಹಾಡು ಅನಾವರಣ
author img

By

Published : Jul 27, 2023, 11:47 AM IST

ಕನ್ನಡ ಚಿತ್ರರಂಗದಲ್ಲಿ ಓ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ. ಅಮ್ಮಳ್ಳಿದೊಡ್ಡಿ ಇದೀಗ ಮತ್ತೊಂದು ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಪ್ರೇಮಕಥೆಯನ್ನು ಆರಿಸಿಕೊಂಡಿದ್ದಾರೆ. ಹೊಸ ಸಿನಿಮಾಗೆ 'ಲವ್' ಎಂಬ ಶೀರ್ಷಿಕೆ ಇಡಲಾಗಿದೆ. ಟೈಟಲ್ ಹೇಳುವಂತೆ ಇದೊಂದು ವಿಭಿನ್ನ ಪ್ರೇಮ ಕಥಾಹಂದರ ಒಳಗೊಂಡ ಸಿನಿಮಾ.

  • " class="align-text-top noRightClick twitterSection" data="">

'ಒಂಟಿ ಅಲ್ಲ ನಾನೀಗ' ಹಾಡು ರಿಲೀಸ್ : ಇತ್ತೀಚೆಗೆ​ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಈ ಹಿಂದೆ ರಿಲೀಸ್ ಆಗಿದ್ದ 'ಕಣ್ಮಣಿ' ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈ ಬೆನ್ನಲ್ಲೇ 'ಒಂಟಿ ಅಲ್ಲ ನಾನೀಗ' ಎಂಬ ಮಲೋಡಿ ಗಾನಲಹರಿ ಅನಾವರಣಗೊಂಡಿದೆ. ಹೃದಯ ಶಿವ ಸಾಹಿತ್ಯ ಬರೆದಿರುವ ಹಾಡಿಗೆ ಕೀರ್ತಿ ಮಾರಾತೆ ಧ್ವನಿಯಾಗಿದ್ದು, ಸಾಯಿಶ್ರೀ ಕಿರಣ್ ಟ್ಯೂನ್ ಹಾಕಿದ್ದಾರೆ. ಪ್ರೇಮಿಗಳ ನಡುವಿನ ಮಧುರ ಪ್ರೇಮಗೀತೆಯಾಗಿರುವ ಈ ಹಾಡಿನಲ್ಲಿ ಯುವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಅಭಿನಯಿಸಿದ್ದಾರೆ.

ಸ್ಯಾಂಡಲ್​​ವುಡ್​ಗೆ ಹೊಸ ಪ್ರತಿಭೆಗಳ ಪ್ರವೇಶ : ಲವ್​ ಚಿತ್ರದ ಮೂಲಕ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ, ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರಿ, ರಜತ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: HBD Kriti Sanon: ಜನ್ಮದಿನದ ಸಂಭ್ರಮದಲ್ಲಿ ಕೃತಿ ಸನೋನ್​ - 'ಆದಿಪುರುಷ'ನ ಸೀತೆಗೆ ಶುಭಾಶಯಗಳ ಸುರಿಮಳೆ

'ಲವ್​ ' ಚಿತ್ರತಂಡ : ಸಿದ್ದಾರ್ಥ್ ಹೆಚ್.ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀಸಾಯಿ ಕಿರಣ್ ಸಂಗೀತ, ಕಂಬಳಿಹುಳ ಖ್ಯಾತಿಯ ಶಿವ ಪ್ರಸಾದ್ ಅವರ ಹಿನ್ನೆಲೆ ಸಂಗೀತ, ಲೋಕೇಶ್ ಪುಟ್ಟೇಗೌಡರ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ನೈಜ ಘಟನೆಗಳಿಂದ ಪ್ರೇರಿತ ಕಥೆ ಹೊಂದಿರುವ ಸಿನಿಮಾವನ್ನು ಉಡುಪಿ,‌ ಕೋಟ, ಕುಂದಾಪುರ, ಬೈಂದೂರು, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಶ್ರೀಕಾಲ ಭೈರವೇಶ್ವರ ಮೂವೀ‌ ಮೇಕರ್ಸ್ ಅಡಿ ದಿವಾಕರ್ ಎಸ್ ಚಿತ್ರ ನಿರ್ಮಿಸಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ. ಬಿಡುಗಡೆಗೆ ಸಿದ್ಧವಾಗಿರುವ ಲವ್ ಹಾಡುಗಳ ಮೂಲಕ ಜನಪ್ರಿಯತೆ ಗಳಿಸುತ್ತಿದೆ.

ಇದನ್ನೂ ಓದಿ: Karnataka Rains: ರಾಜ್ಯಾದ್ಯಂತ ಮುಂಗಾರು ಮಳೆ ಹನಿಗಳ ಲೀಲೆ! PHOTOಗಳಲ್ಲಿ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.