ETV Bharat / entertainment

ಪ್ರವೀಣರು ಮತ್ತು ನವೀನರ ಹಣಾಹಣಿ: ಬಿಗ್​ ಬಾಸ್​ ಮನೆ ಸೇರಲಿರೋ ಸ್ಪರ್ಧಿಗಳು ಇವರು - sudeep in bigg boss

ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಆರಂಭವಾಗಲಿದೆ.

kannada bigg boss show begins from today
ಬಿಗ್​ ಬಾಸ್ ಟಿವಿ ಶೋ ಆರಂಭ
author img

By

Published : Sep 24, 2022, 3:20 PM IST

ಒಟಿಟಿ ಸೀಸನ್ ಮುಗಿದ ಬೆನ್ನಲ್ಲೇ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನ ಟಿವಿ ಸೀಸನ್ ಆರಂಭಗೊಳ್ಳುತ್ತಿದೆ. ಇಂದು ಸಂಜೆ ಬಿಗ್ ಬಾಸ್ ಸೀಸನ್ 9ರ ಮನೆಗೆ ಸದಸ್ಯರನ್ನು ಕಳುಹಿಸಲು ಕಲರ್ಸ್ ಕನ್ನಡ ಚಾನೆಲ್ ಸಜ್ಜಾಗಿದೆ.

ಇಂದು ಸಂಜೆ 6 ಗಂಟೆಗೆ ಆರಂಭವಾಗುವ ವರ್ಣರಂಜಿತ ಕಾರ್ಯಕ್ರಮದಲ್ಲಿ ನಟ, ನಿರೂಪಕ ಕಿಚ್ಚ ಸುದೀಪ್ ಒಟ್ಟು 18 ಜನರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಡಲಿದ್ದಾರೆ. ನೂರು ದಿನಗಳ ಬಿಗ್ ಬಾಸ್ ಕನ್ನಡ ಸೀಸನ್ 9 ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿತ್ಯ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. 9ನೇ ಸೀಸನ್‌ನ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆ 9 ಅನುಭವಿ ಸ್ಪರ್ಧಿಗಳೂ ಕಣದಲ್ಲಿರುತ್ತಾರೆ. ಇದನ್ನು 'ಪ್ರವೀಣರು ಮತ್ತು ನವೀನರ ಹಣಾಹಣಿ' ಎಂದು ಚಾನೆಲ್ ಬಣ್ಣಿಸಿದೆ.

ಅರ್ಹತೆ: ಬಿಗ್ ಬಾಸ್ ಮನೆ ಪ್ರವೇಶಿಸಲು ಅರ್ಹತೆ ಏನಿರಬೇಕು? ಅವರು ಕೇವಲ ಸಿನಿಮಾ ಮತ್ತು ಕಿರುತೆರೆಯ ಸಿಲೆಬ್ರಿಟಿಗಳೇ ಆಗಿರಬೇಕಾ? ಆಯ್ಕೆಗೆ ಇಂಥದ್ದೇ ಮಾನದಂಡಗಳು ಇಲ್ಲವಾದ್ದರಿಂದ, ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಜನರಿಗೆ ಗೊತ್ತಿರುವ, ಸೋಷಿಯಲ್ ಮೀಡಿಯಾದಲ್ಲಿ ಆರ್ಭಟಿಸಿದವರಿಗೆ ಅವಕಾಶ ನೀಡಲಾಗುತ್ತಿದೆ. ಅಂತಹ ವಿಚಿತ್ರ, ವಿಶೇಷ ವ್ಯಕ್ತಿಗಳು ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

ಒಟಿಟಿ 1 ಕಾರ್ಯಕ್ರಮದ ನಾಲ್ವರ ಸ್ಪರ್ಧೆ: ಬಿಗ್ ಬಾಸ್ ಕನ್ನಡ ಒಟಿಟಿ 1 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಆ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ನಾಲ್ವರು 'ಬಿಗ್ ಬಾಸ್ ಕನ್ನಡ 9' ಕಾರ್ಯಕ್ರಮಕ್ಕೆ ಕಾಲಿಡಲಿದ್ದಾರೆ. ಒಟಿಟಿ ಶೋನಲ್ಲಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯ ಅಯ್ಯರ್ 'ಬಿಗ್ ಬಾಸ್ ಕನ್ನಡ 9' ಟಿವಿ ಕಾರ್ಯಕ್ರಮದಲ್ಲೂ ಸ್ಪರ್ಧಿಸಲಿದ್ದಾರೆ. ಅಲ್ಲಿಗೆ 18 ಸ್ಪರ್ಧಿಗಳ ಪೈಕಿ 4 ಸ್ಪರ್ಧಿಗಳು ಖಚಿತವಾದಂತಾಗಿದೆ.

ಪ್ರವೀಣರು ಮತ್ತು ನವೀನರ ಹಣಾಹಣಿ: ಈ ಬಾರಿ 'ಬಿಗ್ ಬಾಸ್ ಕನ್ನಡ 9' ಕಾರ್ಯಕ್ರಮದಲ್ಲಿ ಪ್ರವೀಣರು ಮತ್ತು ನವೀನರ ನಡುವೆ ಹಣಾಹಣಿ ನಡೆಯಲಿದೆ. 18 ಸ್ಪರ್ಧಿಗಳ ಪೈಕಿ 9 ಮಂದಿ ಬಿಗ್​ಬಾಸ್ ಸೀನಿಯರ್ಸ್ ಇದ್ದರೆ, 9 ಮಂದಿ ಹೊಸಬರು ಇರಲಿದ್ದಾರೆ.

ಸಂಭಾವ್ಯ ಸ್ಪರ್ಧಿಗಳ ಪಟ್ಟಿ: ಪ್ರೀಮಿಯರ್ ಸಂಚಿಕೆ ಪ್ರಸಾರವಾಗುವವರೆಗೂ ಯಾರ್ಯಾರು ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರಬೀಳುವುದಿಲ್ಲ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ..

1.ಅನುಪಮಾ ಗೌಡ, ನಟಿ (ಹಳೆಯ ಸ್ಪರ್ಧಿ)

2.ದೀಪಿಕಾ ದಾಸ್​, ನಟಿ (ಹಳೆಯ ಸ್ಪರ್ಧಿ)

3.ದಿವ್ಯಾ ಉರುಡುಗ, ನಟಿ (ಹಳೆಯ ಸ್ಪರ್ಧಿ)

4.ಪ್ರಶಾಂತ್ ಸಂಬರಗಿ (ಹಳೆಯ ಸ್ಪರ್ಧಿ)

5.ಅರುಣ್ ಸಾಗರ್ (ಹಳೆಯ ಸ್ಪರ್ಧಿ)

6.ರಾಕೇಶ್ ಅಡಿಗ (ಒಟಿಟಿ ಸ್ಪರ್ಧಿ)

7.ಆರ್ಯವರ್ಧನ್ ಗುರೂಜಿ (ಒಟಿಟಿ ಸ್ಪರ್ಧಿ)

8.ರೂಪೇಶ್ ಶೆಟ್ಟಿ (ಒಟಿಟಿ ಸ್ಪರ್ಧಿ)

9.ಸಾನ್ಯಾ ಅಯ್ಯರ್ (ಒಟಿಟಿ ಸ್ಪರ್ಧಿ)

10.ಐಶ್ವರ್ಯಾ, ಆಫ್​ರೋಡ್ ಬೈಕ್ ರೇಸರ್ (ಹೊಸ ಸ್ಪರ್ಧಿ)

11.ಕಾವ್ಯಶ್ರೀ ಗೌಡ. ನಟಿ, (ಹೊಸ ಸ್ಪರ್ಧಿ)

12.ಮಯೂರಿ, ನಟಿ (ಹೊಸ ಸ್ಪರ್ಧಿ)

13.ನವಾಜ್ (ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ವಿಮರ್ಶೆ ಮಾಡಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು)

14.ನೇಹಾ ಗೌಡ, ನಟಿ (ಹೊಸ ಸ್ಪರ್ಧಿ)

15.ಅಮೂಲ್ಯ ಗೌಡ, ನಟಿ (ಹೊಸ ಸ್ಪರ್ಧಿ)

16.ದರ್ಶ್ ಚಂದ್ರಪ್ಪ, ನಟ, ಮಾಡೆಲ್ (ಹೊಸ ಸ್ಪರ್ಧಿ)

17.ರಮೋಲ, ನಟಿ (ಹೊಸ ಸ್ಪರ್ಧಿ)

18ಸಂದೇಶ್​ ಪ್ರಸನ್ನ ಕುಮಾರ್, ಬೈಕ್ ರೇಸರ್

ಮುಗ್ಧತೆ ಮತ್ತು ಅನುಭವ ಎರಡರ ಮುಖಾಮುಖಿ: 'ಬಿಗ್ ಬಾಸ್ ಎನ್ನುವುದು ಮನಸ್ಸಿನ ಆಟ. ಮುಗ್ಧತೆ ಮತ್ತು ಅನುಭವ ಎರಡರ ಮುಖಾಮುಖಿ ಮನುಷ್ಯನೊಳಗಿನ ಇನ್ನಷ್ಟು ಮುಖಗಳನ್ನು ಹೊರತರಲಿದ್ದು, ಆಟಕ್ಕೆ ಹೊಸ ರಂಗು ಬರಲಿದೆ' ಎಂದು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅಭಿಪ್ರಾಯಪಟ್ಟಿದ್ದಾರೆ.

'ಈ ಸೀಸನ್ ಕುರಿತು ನನಗೆ ಕುತೂಹಲ ಹೆಚ್ಚಾಗಿದೆ. ಈ ಹೊಸ ಬಗೆಯ ಆಟದಲ್ಲಿ ಅನುಭವದಿಂದ ಅನುಕೂಲ ಹೆಚ್ಚೋ, ಅನಾನುಕೂಲ ಹೆಚ್ಚೋ ಅಂತ ಹೇಳೋದು ಸುಲಭವಲ್ಲ' ಎಂಬುದು ಶೋನ ರೂವಾರಿ ಕಿಚ್ಚ ಸುದೀಪ್ ಅನಿಸಿಕೆ.

ಇದನ್ನೂ ಓದಿ: ದಾಖಲೆ ಬೆಲೆಗೆ ಹೆಡ್ ಬುಷ್ ಸಿನಿಮಾ ರೈಟ್ಸ್ ಮಾರಾಟ

ಒಟ್ಟಿನಲ್ಲಿ​​ ಒಟಿಟಿ ಸೀಸನ್ ಸಂಭ್ರಮ ಕರಗುವ ಮೊದಲೇ ಟಿವಿ ಸೀಸನ್ ಶುರುವಾಗುತ್ತಿರುವುದು ವೀಕ್ಷಕರಿಗೆ ಸಂಭ್ರಮದ ಸುದ್ದಿ. ಕಲರ್ಸ್ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸಂಚಿಕೆಗಳನ್ನು ವೂಟ್ ಸೆಲೆಕ್ಟ್‌ನಲ್ಲೂ ನೋಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.