ETV Bharat / entertainment

ಬಿಗ್​​ ಬಾಸ್​​ ಮನೆಗೆ ವಾಪಸ್​​ ಬರುತ್ತಿದ್ದಂತೆ ವರ್ತೂರು ಸಂತೋಷ್​ರನ್ನು ಹೊರ ಕಳುಹಿಸಲಿಚ್ಛಿಸಿದ ಸ್ಪರ್ಧಿಗಳು! - ಬಿಗ್​ ಬಾಸ್

Kannada Bigg Boss: ಕನ್ನಡ ಬಿಗ್​ ಬಾಸ್ 10ರ ಹೊಸ ಪ್ರೋಮೋ ಅನಾವರಣಗೊಂಡಿದೆ.

ವರ್ತೂರು ಸಂತೋಷ್
Varthuru Santhosh
author img

By ETV Bharat Karnataka Team

Published : Oct 31, 2023, 11:57 AM IST

'ಬಿಗ್​ ಬಾಸ್​' ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಅಭಿನಯ ಚಕ್ರವರ್ತಿ ಸುದೀಪ್​​ ನಿರೂಪಣೆಯಲ್ಲಿ ಮೂಡಿಬರುವ ಕನ್ನಡ ಬಿಗ್​ ಬಾಸ್​​​ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ''ಬಿಗ್‌ ಬಾಸ್‌'' ಸೀಸನ್ 10ರ ಮೂರು ವಾರಗಳು ಪೂರ್ಣಗೊಂಡಿದ್ದು, ನಾಲ್ಕನೇ ವಾರ ಈಗಾಗಲೇ ಆರಂಭಗೊಂಡಿದೆ. ಹುಲಿ ಉಗುರಿನ ಡಾಲರ್​ ಧರಿಸಿದ ಆರೋಪದ ಮೇಲೆ ದೊಡ್ಮನೆಯಿಂದ ಹೊರ ಬಂದಿದ್ದ ಸ್ಪರ್ಧಿ ಹಳ್ಳಿಕಾರ್​ ಖ್ಯಾತಿಯ ವರ್ತೂರು​ ಸಂತೋಷ್​ ಅವರನ್ನು ಮತ್ತೆ ಬಿಗ್​ ಬಾಸ್​ ಮನೆಗೆ ಕರೆಸಿಕೊಳ್ಳಲಾಗಿದೆ.

ಬಿಗ್​ ಬಾಸ್ ಪ್ರೋಮೋ: ಹೌದು, ವರ್ತೂರ್ ಸಂತೋಷ್‌ ಬಿಗ್‌ ಬಾಸ್ ಮನೆಗೆ ಮರಳಿದ್ದಾರೆ. ಮನೆ ಸದಸ್ಯರೂ ಸಹ ಅವರನ್ನು ಕಂಡು ಸಂತೋಷಪಟ್ಟಿದ್ದಾರೆ. ಆದರೆ ಆ ಸಂತೋಷ ಎಷ್ಟು ಹೊತ್ತು? ಸಂತೋಷ್ ಮುಖದಲ್ಲಿ ಸಂತೋಷ ಮಾಯವಾಗುವಂತೆ ಬಂದೆರಗಿದೆ ಎಲಿಮಿನೇಷನ್‌ನ ನಾಮಿನೇಷನ್‌ ಸೆಷನ್!. ಹೌದು, ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ 'ಬಿಗ್​ ಬಾಸ್​' ಮನೆಗೆ ರೀ ಎಂಟ್ರಿ ಕೊಟ್ಟಿರುವ ವರ್ತೂರು​ ಸಂತೋಷ್ ಅವರಿಗೆ ಎದುರಾದ ಅಗ್ನಿಪರೀಕ್ಷೆ ಘಳಿಗೆಗಳನ್ನು ಕಾಣಬಹುದಾಗಿದೆ.

ಎಲಿಮಿನೇಷನ್‌ನ ನಾಮಿನೇಷನ್‌ ಸೆಷನ್! ಇಂದು ಅನಾವರಣಗೊಂಡಿರುವ ಪ್ರೋಮೋದಲ್ಲಿ, ಮನೆಯ ಸದಸ್ಯರಲ್ಲಿ ಹಲವರು ವರ್ತೂರು ಸಂತೋಷ್‌ ಎಲಿಮಿನೇಷನ್‌ಗೆ ನಾಮಿನೇಟ್ ಆಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ ಸಮರ್ಥನೀಯವೇ. ಕಳೆದ ವಾರ ಬಿಗ್‌ ಬಾಸ್ ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಸ್ಪರ್ಧಿಗಳು ಹಲವು ಜಿದ್ದಾ ಜಿದ್ದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಮ್ಮನ್ನು ತಾವು ಸೇಫ್‌ ಮಾಡಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಆದರೆ, ಈ ಎಲ್ಲ ಸವಾಲುಗಳ ಸಮಯದಲ್ಲಿ ವರ್ತೂರು ಸಂತೋಷ್ ಇರಲಿಲ್ಲ. ಅವರಿಗೆ ಅದೊಂದು ಅಡ್ವಾಂಟೇಜ್. ಹಾಗಾಗಿ ಅವರು ಈಗ ಮನೆಯಲ್ಲಿ ಸೇಫ್‌ ಜೋನ್‌ನಲ್ಲಿ ಇರುವುದು ನ್ಯಾಯವಲ್ಲ ಎನ್ನುವುದು ನಾಮಿನೇಟ್​​ ಮಾಡಿದವರ ವಾದ.

ಸಂತೋಷ್‌ ಮುಖದಲ್ಲಿನ ಸಂತೋಷ ಮಾಯ: ಸಂಗೀತಾ, ವಿನಯ್, ಸ್ನೇಹಿತ್ ಸೇರಿದಂತೆ ಬಹುತೇಕ ಸದಸ್ಯರು ವರ್ತೂರು ಸಂತೋಷ್‌ ಅವರನ್ನು ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆಯೇ ವರ್ತೂರು ಸಂತೋಷ್‌ ಮುಖದಲ್ಲಿನ ಸಂತೋಷ ಮಾಯವಾಗಿದೆ. ಒಂದು ವಾರದಲ್ಲಿ ಮನೆಯೊಳಗಿನ ಲೆಕ್ಕಾಚಾರಗಳೆಲ್ಲ ಬದಲಾಗಿವೆ. ಹಾಗಾಗಿ ಇಲ್ಲಿ ಉಳಿದುಕೊಳ್ಳಲು ತಾವು ನಡೆಸುವ ಸ್ಟ್ರಾಟಜಿ ಕೂಡ ಬದಲಾಗಬೇಕು, ಶ್ರಮ ವಹಿಸಬೇಕು ಎಂಬುದು ಅವರ ಅರಿವಿಗೆ ಬಂದಂತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ವರ್ತೂರು ಸಂತೋಷ್​ ರೀ ಎಂಟ್ರಿ

ಈಗಷ್ಟೇ ಮನೆಯ ಹೊರಗೆ ಒಂದು ಪರೀಕ್ಷೆಯನ್ನು ಎದುರಿಸಿ ಮರಳಿರುವ ವರ್ತೂರು ಸಂತೋಷ್ ಅವರು ಮನೆಯೊಳಗಿನ ಪರೀಕ್ಷೆಗಳನ್ನು ಹೇಗೆ ಎದುರಿಸುತ್ತಾರೆ? ಅದರಲ್ಲಿ ಗೆಲ್ಲುತ್ತಾರಾ? ಅಥವಾ ಸೋತು ಮರಳುತ್ತಾರಾ? ಎಂಬುದನ್ನು ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ 'ಬಿಗ್‌ ಬಾಸ್‌ ಕನ್ನಡ' ಕಾರ್ಯಕ್ರಮ ನೋಡಬಹುದಾಗಿದೆ . ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರ ಕೂಡಾ ನೋಡಬ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ರೆಡ್ ಡ್ರೆಸ್ ತೊಟ್ಟು ಕೊಲ್ಲುವ ನೋಟ ಬೀರಿದ ರಾಕುಲ್ ಪ್ರೀತ್ ಸಿಂಗ್: ಬಹುಭಾಷಾ ನಟಿಯ ಫೋಟೋಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.