ETV Bharat / entertainment

ಸಂಡೇ ವಿತ್ ಸುದೀಪ್​.. ನಾಮಿನೇಟ್ ಆದ 12 ಮಂದಿಯಲ್ಲಿ ಮೂವರು ಸೇಫ್.. ಯಾರಾಗ್ತಾರೆ ಔಟ್? - bigg boss contestant

ಕನ್ನಡ ಬಿಗ್​​ ಬಾಸ್ ಸೀಸನ್ 9ರಲ್ಲಿ ನಾಮಿನೇಟ್ ಆದ 12 ಸ್ಪರ್ಧಿಗಳ ಪೈಕಿ ಮೂವರು ಸೇಫ್ ಆಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಓರ್ವರು ಎಲಿಮಿನೇಟ್ ಆಗಲಿದ್ದಾರೆ.

kannada bigg boss elimination episode
ಕನ್ನಡ ಬಿಗ್​​ ಬಾಸ್ ಎಲಿಮಿನೇಶನ್
author img

By

Published : Oct 2, 2022, 4:08 PM IST

Updated : Oct 2, 2022, 4:28 PM IST

ಕನ್ನಡ ಬಿಗ್​​ ಬಾಸ್ ಸೀಸನ್ 9 ಆರಂಭವಾಗಿ ನಿನ್ನೆಗೆ ಒಂದು ವಾರ ಆಗಿದೆ. ನಿನ್ನೆ ಸಂಜೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆದಿದ್ದು, ನಾಮಿನೇಟ್ ಆದ 12 ಸ್ಪರ್ಧಿಗಳ ಪೈಕಿ ಮೂವರು ಸೇಫ್ ಆಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಓರ್ವರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ.

ಸುಮಾರು ನೂರು ದಿನಗಳ ಕಾಲ ನಡೆಯುವ ಈ ಶೋನಲ್ಲಿ ಎಲ್ಲರೂ ಅಂತಿಮ ಹಂತದವರೆಗೆ ಸ್ಪರ್ಧಿಸಲು ಬಯಸುತ್ತಾರೆ. ಟ್ರೋಫಿ ಗೆಲ್ಲಲು ಪೈಪೋಟಿ ನಡೆಸುತ್ತಾರೆ. ಕನಸುಗಳನ್ನು ಹೊತ್ತು ತಂದು ಮೊದಲ ವಾರದಲ್ಲೇ ಎಲಿಮಿನೇಟ್ ಆಗಿಬಿಟ್ಟರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಎಲಿಮಿನೇಷನ್ ಪ್ರಕ್ರಿಯೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಮೊದಲ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಶನಿವಾರ ಸಂಜೆ ಕಿಚ್ಚನ ಪಂಚಾಯ್ತಿ ನಡೆದಿದ್ದು, ಕೆಲ ವಿಚಾರಗಳ ಕುರಿತು ಚರ್ಚೆ ನಡೆಯಿತು. ಮೊದಲ ವಾರದ ಎಲಿಮಿನೇಷನನ್​​ಗೆ 18 ಸ್ಪರ್ಧಿಗಳಲ್ಲಿ 12 ಸ್ಪರ್ಧಿಗಳು ನಾಮಿನೇಟ್‌ ಆಗಿದ್ದರು. ನಿನ್ನೆ 3 ಜನರನ್ನು ನಿನ್ನೆ ಕಿಚ್ಚ ಸುದೀಪ್‌ ಸೇಫ್‌ ಮಾಡಿದ್ದಾರೆ. ಇಂದಿನ ಶೋನಲ್ಲಿ ಓರ್ವರನ್ನು ಎಲಿಮಿನೇಟ್ ಮಾಡಲಿದ್ದಾರೆ.

ಬಿಗ್​​ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು: ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ. ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್. ಸಿನಿಮಾಗಳ ರಿವ್ಯೂ ಡಿಫರೆಂಟಾಗಿ ಕೊಡೋ, ಸೋಷಿಯಲ್ ಮೀಡಿಯಾ ಸ್ಟಾರ್ ನವಾಝ್. ಸೀಸನ್​ 8ರ ಎರಡನೇ ರನ್ನರ್ ಅಪ್ ದಿವ್ಯಾ ಉರುಡುಗ. ಕಿರುತೆರೆ ನಟ, ಉದ್ಯಮಿ ದರ್ಶ್ ಚಂದ್ರಪ್ಪ. ಸೀಸನ್​ 8ರ ಟಾಪ್​ 5 ಸ್ಪರ್ಧಿ ಪ್ರಶಾಂತ್ ಸಂಬರಗಿ, ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ.

ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳ ಸ್ಪರ್ಧಿ ವಿನೋದ್ ಗೊಬ್ಬರಗಾಲ, ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ನಟಿ ನೇಹಾ ಗೌಡ. ಬಿಗ್​ಬಾಸ್ ಒಟಿಟಿ ಖ್ಯಾತಿಯ ಸಾನ್ಯ ಅಯ್ಯರ್. ಬಿಗ್​ಬಾಸ್ ಒಟಿಟಿ ಟಾಪರ್​ ರೂಪೇಶ್ ಶೆಟ್ಟಿ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ. ಒಟಿಟಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ.ಒಟಿಟಿ ಸ್ಪರ್ಧಿ ರಾಕೇಶ್ ಅಡಿಗ. ಲೇಡಿ ಬೈಕರ್ ಐಶ್ವರ್ಯಾ. ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಕಾವ್ಯಶ್ರೀ ಗೌಡ. ಅಕ್ಕ ಧಾರಾವಾಹಿ ಮೂಲಕ ಜನರ ಮನ ಸೆಳೆದ ಈಗ ನಿರೂಪಕಿಯಾಗಿ ಮಿಂಚಿದ ಅನುಪಮಾ ಗೌಡ.

ನಾಮಿನೇಟ್​ ಆಗಿದ್ದ ಸ್ಪರ್ಧಿಗಳು : ಆಟ ಶುರುವಾದ ಮೊದಲ ದಿನ ನಾಮಿನೇಷನ್​ ಪ್ರಕ್ರಿಯೆ ನಡೆದಿತ್ತು. ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ, ಪ್ರಶಾಂತ್​ ಸಂಬರಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ರಾಜಣ್ಣ, ಕಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದರು.

ಸೇಫ್ ಆದ ಸ್ಪರ್ಧಿಗಳು: ನಿನ್ನೆ ನಡೆದ ಸಂಚಿಕೆಯಲ್ಲಿ ಅರುಣ್, ದಿವ್ಯಾ ಉರುಡುಗ, ವಿನೋದ್ ಸೇಫ್‌ ಆಗಿದ್ದಾರೆ. ಇನ್ನೂ ಒಂಭತ್ತು ಮಂದಿ ಡೇಂಜರ್​ ಝೋನ್​ನಲ್ಲಿದ್ದಾರೆ. ದರ್ಶ್, ಐಶ್ವರ್ಯಾ, ಪ್ರಶಾಂತ್ ಸಂಬರಗಿ, ಆರ್ಯವರ್ಧನ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ಇವರಲ್ಲಿ ಇಂದು ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಇದನ್ನೂ ಓದಿ: ವಾರದ ಕಥೆ ಕಿಚ್ಚನ ಜೊತೆ.. ಮೊದಲ ವಾರ ಎಲಿಮಿನೇಟ್ ಆಗೋದ್ಯಾರು?

ಈ ವಾರ ಬೈಕ್ ರೇಸರ್ ಐಶ್ವರ್ಯಾ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ.

Last Updated : Oct 2, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.