ETV Bharat / entertainment

'ಸಲಾರ್' ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್; ಹೊಂಬಾಳೆ ಫಿಲ್ಮ್ಸ್​ಗೆ ದೊಡ್ಡ ಗೆಲುವು - prashanth neel

ಪ್ಯಾನ್​​ ಇಂಡಿಯಾ ಸಿನಿಮಾ 'ಸಲಾರ್'ನಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಅಬ್ಬರಿಸಿದ್ದಾರೆ.

Kannada Actors in Salaar movie
'ಸಲಾರ್' ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್
author img

By ETV Bharat Karnataka Team

Published : Dec 23, 2023, 10:33 AM IST

ಡಾರ್ಲಿಂಗ್ ಪ್ರಭಾಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬೋದ ಬಹುನಿರೀಕ್ಷಿತ ಸಿನಿಮಾ 'ಸಲಾರ್​​' ಶುಕ್ರವಾರ ವಿಶ್ವಾದ್ಯಂತ ತೆರೆಕಂಡಿದೆ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಲಾರ್ ಮೊದಲ ದಿನವೇ ಬರೋಬ್ಬರಿ 175 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ಸಿನಿಪ್ರಿಯರ ಹುಬ್ಬೇರಿಸಿದೆ.

ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಪ್ಯಾನ್‍ ಇಂಡಿಯಾ ಸಿನಿಮಾವಾಗಿರೋ 'ಸಲಾರ್' ಅದ್ಧೂರಿ ಮೇಕಿಂಗ್ ಜೊತೆ ಮೈನವಿರೇಳಿಸುವ‌ ಆ್ಯಕ್ಷನ್​​ ದೃಶ್ಯಗಳಿಂದ ಪ್ರೇಕ್ಷಕರಿಗೆ ಮೆಚ್ಚುಗೆಗೆ ಪಾತ್ರವಾಗಿದೆ. ಬಿಗ್​​ ಸ್ಟಾರ್ ಕಾಸ್ಟ್ ಕೂಡ ಈ ಚಿತ್ರದ ಹೈಲೆಟ್ಸ್ ಅಂತಲೇ ಹೇಳಬಹುದು.

ಸಲಾರ್ ಒಂದು ಪ್ಯಾನ್ ಇಂಡಿಯಾ ಚಿತ್ರವಾದರೂ, ಇದರಲ್ಲಿ ಕನ್ನಡದ ನಟರ ಪಾಲು ದೊಡ್ಡದಿದೆ ಎಂಬುದು ಹಳೇ ವಿಷಯ. ನಿರ್ಮಾಪಕ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍, ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಹಲವು ಕನ್ನಡಿಗರು ಚಿತ್ರದಲ್ಲಿ ಮಹತ್ವದ ಜವಾಬ್ದಾರಿಗಳನ್ನು ಹೊತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಇನ್ನೂ, ನಟರಾದ ಪ್ರಮೋದ್‍, ನವೀನ್‍ ಶಂಕರ್‍ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕೂಡ ಹೇಳಲಾಗಿತ್ತು.

Kannada Actors in Salaar movie
'ಸಲಾರ್' ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್

ಆದ್ರೆ ಪ್ರಮೋದ್‍ ಮತ್ತು ನವೀನ್‍ ಶಂಕರ್ ಅಷ್ಟೇ ಅಲ್ಲ, ಹಲವು ಕನ್ನಡದ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಗಳಿಗೆ ಸಲ್ಲುವ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ವಿಶೇಷವೆಂದರೆ, ಕನ್ನಡದ ನಟರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಿರಿಯ ನಟ ದೇವರಾಜ್‍ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮೋದ್‍ ಹಾಗೂ ಪೃಥ್ವಿರಾಜ್‍ ಸಹೋದರನಾಗಿ ಕಾಣಿಸಿಕೊಂಡಿದ್ದಾರೆ. ನವೀನ್‍ ಶಂಕರ್ ಮತ್ತೊಂದು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಲ್ಲದೇ ರವಿ ಭಟ್‍, ಕೆಜಿಎಫ್ ಗರುಡ ರಾಮ್‍, ಭಜರಂಗಿ ಲೋಕಿ, ಅಶ್ವಿನಿ ಹಾಸನ್‍, ಮಧು ಗುರು ಸ್ವಾಮಿ ಸೇರಿದಂತೆ ಕನ್ನಡ ಕಲಾವಿದರು ಹೆಚ್ಚಾಗಿರೋದು ಈ ಚಿತ್ರದ ವಿಶೇಷ.

ಇದನ್ನೂ ಓದಿ: ಮೊದಲ ದಿನವೇ 175 ಕೋಟಿ ಗಳಿಸಿದ 'ಸಲಾರ್​'; ಬಾಕ್ಸ್ ಆಫೀಸ್ ದಾಖಲೆ ಉಡೀಸ್​!

ಹೊಂಬಾಳೆ ಫಿಲ್ಮ್ಸ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಂಗದೂರ್ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾಂತಾರ, ಕೆಜಿಎಫ್​ ಸೇರಿ ಕೆಲ ಹಿಟ್​ ಸಿನಿಮಾ ಕೊಟ್ಟ ವಿಜಯ್​​ ಕಿರಗಂದೂರ್ ಅವರು ಸದ್ಯ ಸಲಾರ್​ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಮೊದಲ ಭಾಗದಲ್ಲಿ ಪ್ರಭಾಸ್‍, ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಬಹುಮುಖ್ಯ ಪಾತ್ರದಲ್ಲಿದ್ದಾರೆ‌. ಇವರ ಮಧ್ಯೆ ಕನ್ನಡ ಕಲಾವಿದರು ಕೊಟ್ಟ ಪಾತ್ರದಲ್ಲಿ ಅಬ್ಬರಿಸುತ್ತಿರೋದು ಹೆಮ್ಮೆಯ ವಿಷಯ.

ಇದನ್ನೂ ಓದಿ: ಸಲ್ಮಾನ್​ ಖಾನ್​​ ಕೈಗೆ ಮುತ್ತಿಕ್ಕಿದ ಮಹಿಳಾ ಅಭಿಮಾನಿ: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.