ETV Bharat / entertainment

19ನೇ ಶತಮಾನದ ರಂಗಭೂಮಿ ತಾರೆ 'ನೋಟಿ ಬಿನೋದಿನಿ' ಬಯೋಪಿಕ್‌ನಲ್ಲಿ ಕಂಗನಾ - 19ನೇ ಶತಮಾನದ ರಂಗಭೂಮಿ ತಾರೆಯರು

ಕಂಗನಾ ರಣಾವತ್ ಮತ್ತೊಂದು ಬಯೋಪಿಕ್​ಗೆ ಒಪ್ಪಿಕೊಂಡಿದ್ದಾರೆ. ಪ್ರಸಿದ್ಧ ರಂಗಭೂಮಿ ಕಲಾವಿದೆ ನೋಟಿ ಬಿನೋದಿನಿ ಅವರ ಜೀವನ​ ಇದಾಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

Kangana Ranaut to play 19th century theatre star Noti Binodini

author img

By

Published : Oct 19, 2022, 6:49 PM IST

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್ ಮಗದೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಪಾತ್ರ, ಸಿನಿಮಾಗಳ ಆಯ್ಕೆಯಲ್ಲಿ ಚುರುಕುತನ ತೋರಿಸುವ ಅವರು ಈ ಸಾರಿ ವಿಭಿನ್ನ ಚಿತ್ರಕ್ಕೆ ಒಕೆ ಹೇಳಿದ್ದಾರೆ. ನೋಟಿ ಬಿನೋದಿನಿ ಎಂದೇ ಖ್ಯಾತರಾಗಿರುವ ಬಂಗಾಳಿ ರಂಗಭೂಮಿ ದಂತಕಥೆ ಬಿನೋದಿನಿ ದಾಸಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ.

ಪರಿಣೀತಾ ಮತ್ತು ಮರ್ದಾನಿ ಖ್ಯಾತಿಯ ಪ್ರದೀಪ್ ಸರ್ಕಾರ್ ಚಿತ್ರವನ್ನು ನಿರ್ದೇಶಿಸುವರು. ರಂಗಭೂಮಿ ದಂತಕಥೆಯನ್ನು ಆಧರಿಸಿದ ಚಿತ್ರ ಇದಾಗಿದ್ದು ‘ದೇವದಾಸ್’, ‘ಪದ್ಮಾವತ್’ ಮತ್ತು ‘ತನ್ಹಾಜಿ: ದಿ ಅನ್‌ಸಂಗ್ ವಾರಿಯರ್’ ಚಿತ್ರಗಳಲ್ಲಿ ಕೆಲಸ ಮಾಡಿದ ಪ್ರಕಾಶ್ ಕಪಾಡಿಯಾ ಬಯೋಪಿಕ್‌ಗೆ ಸ್ಕ್ರಿಪ್ಟ್ ಮಾಡುತ್ತಾರಂತೆ.

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಯೋಪಿಕ್​ ಎಮರ್ಜೆನ್ಸಿ (ತುರ್ತು ಪರಿಸ್ಥಿತಿ)ಯಲ್ಲಿ ನಟಿಸುತ್ತಿರುವ ಮಧ್ಯಯೇ ಮಗದೊಂದು ಜೀವನಾಧಾರಿತ ಚಿತ್ರಕ್ಕೆ ಕಂಗನಾ ಸಹಿ ಹಾಕಿದ್ದಾರೆ. ಇಂತಹ ಚಿತ್ರದ ಭಾಗವಾಗಲು ಥ್ರಿಲ್ ಆಗಿದ್ದೇನೆ. ನಾನು ಪ್ರದೀಪ್ ಸರ್ಕಾರ್ ಜಿ ಅವರ ದೊಡ್ಡ ಅಭಿಮಾನಿ. ಈ ಅವಕಾಶ ನೀಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಪ್ರಕಾಶ್ ಕಪಾಡಿಯಾ ಅವರೊಂದಿಗೆ ಇದು ನನ್ನ ಮೊದಲ ಚಿತ್ರ. ಶ್ರೇಷ್ಠ ಕಲಾವಿದರ ಕಥೆಯಾಗಲು ನನಗೆ ರೋಮಾಂಚನವಾಗುತ್ತದೆ ಎಂದು ನಟಿ ಕಂಗನಾ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸುವ ನಿರೀಕ್ಷೆ ಕೂಡ ಇದೆ.

ನೋಟಿ ಬಿನೋದಿನಿ ಯಾರು?: 1862 ರಲ್ಲಿ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ಬಿನೋದಿನಿ ಅವರು ಗಿರೀಶ್ ಚಂದ್ರ ಘೋಷ್ ಎಂಬುವರ ಮಾರ್ಗದರ್ಶನದಲ್ಲಿ ಬೆಳೆದ ಓರ್ವ ಪ್ರಸಿದ್ಧ ಕಲಾವಿದೆ. ತನ್ನ 12ನೇ ವಯಸ್ಸಿನಲ್ಲೇ ನಟನೆ ಆರಂಭಿಸಿದ ಬಿನೋದಿನಿ 23 ವರ್ಷ ಅನ್ನುವಷ್ಟರಲ್ಲಿ ನಟನೆಯಿಂದ ಹಿಂದೆ ಸರಿದವರು. ರಂಗಭೂಮಿ ಕಲಾವಿದೆಯಾಗಿದ್ದ ಇವರು ಸರಿಸುಮಾರು 80ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ನಟನೆ ಜೊತೆಗೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಅವರ ನಟನೆ ಕಂಡು ಯುರೋಪಿಯನ್ ರಂಗಭೂಮಿ ಪ್ರೇಮಿಗಳು ಅವರನ್ನು 'The flower of native stages' ಎಂದು ಕರೆಯುತ್ತಿದ್ದರು.

ಆತ್ಮಚರಿತ್ರೆ ಬರೆದ ಮೊದಲ ದಕ್ಷಿಣ ಏಷ್ಯಾದ ರಂಗಭೂಮಿ ನಟಿ: ಕೋಲ್ಕತ್ತಾದ ಲೈಂಗಿಕ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಬಿನೋದಿನಿ 19 ನೇ ಶತಮಾನದ ಬಂಗಾಳದ ಅತ್ಯಂತ ಪ್ರಸಿದ್ಧ ನಟಿಯಾಗಿ ಹೊರಹೊಮ್ಮಿದ್ದರು. ಅವರು ಸೀತೆ, ದ್ರೌಪದಿ, ರಾಧಾ, ಕೈಕೇ ಮತ್ತು ಮೋತಿಬೀಬಿ ಸೇರಿದಂತೆ 80ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದಾರೆ. ತನ್ನದೇ ಆತ್ಮಚರಿತ್ರೆ ಬರೆಯುವ ಮೂಲಕ ಅವರು ದಕ್ಷಿಣ ಏಷ್ಯಾದ ಮೊದಲ ರಂಗಭೂಮಿ ನಟಿಯಾಗಿ ಹೊರಹೊಮ್ಮಿದವರು. ಇದಕ್ಕೂ ಮುನ್ನ ಇವರ ಪಾತ್ರವನ್ನು ದೀಪಿಕಾ ಮೊದಲು ಒಪ್ಪಿಗೆ ಸೂಚಿಸಿದ್ದರಂತೆ. ಬಳಿಕ ಕೆಲವು ಕಾರಣಾಂತರಗಳಿಂದ ಈ ಬಯೋಪಿಕ್​ನಿಂದ ಹಿಂದೆ ಸರಿದಿದ್ದರು.

ಇದನ್ನೂ ಓದಿ: ಟೀಂ ಇಂಡಿಯಾದ ಜೆರ್ಸಿ ಧರಿಸಿ ಕ್ರಿಕೆಟ್​ ಮೈದಾನಕ್ಕಿಳಿದ ಅನುಷ್ಕಾ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.