ETV Bharat / entertainment

ಚಂದ್ರಮುಖಿ 2 ಮುಖ್ಯಪಾತ್ರದಲ್ಲಿ ಕಂಗನಾ ಮಿಂಚು: ದಕ್ಷಿಣದತ್ತ ಬಾಲಿವುಡ್ ಬೆಡಗಿ - ತಮಿಳು ನಟ ರಾಘವ್ ಲಾರೆನ್ಸ್

ಬಾಲಿವುಡ್ ನಟಿ ಕಂಗನಾ ರಣಾವತ್ ದಕ್ಷಿಣ ಭಾರತದ ಚಿತ್ರ ತಲೈವಿ ನಂತರ ಮತ್ತೊಂದು ತಮಿಳಿನ ಚಂದ್ರಮುಖಿ 2 ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಪೂರ್ವಭಾಗವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಪಿ ವಾಸು ಅವರು ಚಂದ್ರಮುಖಿ 2 ರಲ್ಲೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಪೂರ್ವಭಾಗದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜ್ಯೋತಿಕಾ ಸರವಣನ್ ನಟಿಸಿದ್ದರು. ಅಂತೂ ಕಂಗನಾ ದಕ್ಷಿಣದ ಕಡೆಗೆ ಮುಖ ಮಾಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Kangana Ranaut acts in Chandramukhi 2
ಚಂದ್ರಮುಖಿ 2 ಚಿತ್ರದಲ್ಲಿ ಕಂಗನಾ ರನೌತ್ ನಟನೆ
author img

By

Published : Nov 29, 2022, 7:52 PM IST

ಮುಂಬೈ: ದಕ್ಷಿಣದ ಚಿತ್ರ ತಲೈವಿ ನಂತರ, ಈಗ ನಟಿ ಕಂಗನಾ ರನೌತ್ ಮತ್ತೊಂದು ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೂ ಖ್ಯಾತ ನಿರ್ದೇಶಕ ಪಿ ವಾಸು ನಿರ್ದೇಶನದ ಚಂದ್ರಮುಖಿ 2 ಚಿತ್ರದಲ್ಲಿ ನಟಿ ಕಂಗನಾ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಪೂರ್ವ ಭಾಗದ ಸಿನಿಮಾ ಚಂದ್ರಮುಖಿಯೂ 2005ರಲ್ಲಿ ಪಿ.ವಾಸು ನಿರ್ದೇಶಿಸಿದ್ದರು. ಅದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜ್ಯೋತಿಕಾ ಸರವಣನ್ ಅವರು ಮುಖ್ಯಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ ಈ ಚಂದ್ರಮುಖಿ ಚಿತ್ರವನ್ನು ಮಲಯಾಳಂ ಮಣಿ ಅವರ ತಾಜು ಚಿತ್ರದಿಂದ ರಿಮೇಕ್ ಮಾಡಲಾಗಿತ್ತು. ಬಳಿಕ ಅಕ್ಷಯ್ ಕುಮಾರ್ ಅಭಿನಯದ ಭೂಲ್ ಭುಲೈಯಾ ಎಂದು ಹಿಂದಿಯಲ್ಲೂ ಚಿತ್ರ ತೆರೆ ಕಂಡಿತ್ತು.

ಚಂದ್ರಮುಖಿ 2 ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ಪ್ರಸಿದ್ಧ ನೃತ್ಯಗಾರ್ತಿ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಅವರು ನೃತ್ಯ ಕೌಶಲ್ಯ, ಸೌಂದರ್ಯಕ್ಕೆ ತಕ್ಕಂತೆ ಇದ್ದು, ಖ್ಯಾತ ತಮಿಳು ನಟ ರಾಘವ್ ಲಾರೆನ್ಸ್ ಜತೆಗೆ ಕಂಗನಾ ರಣಾವತ್ ಕಾಣಿಸಿಕೊಳ್ಳಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕಾಸ್ಟ್ಯೂಮ್ ಡಿಸೈನರ್ ನೀತಾ ಲುಲ್ಲಾ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದು, ಪಾತ್ರದ ರೇಖಾಚಿತ್ರದೊಂದಿಗೆ ಚಿತ್ರದ ಕುತೂಹಲವನ್ನು ಹೆಚ್ಚಿಸಿದ್ದಾರೆ.

ನೀತಾ ಲುಲ್ಲಾ ಅವರನ್ನು ಸಂಪರ್ಕಿಸಿದಾಗ, "ಅವರ ನಟನೆ, ನೋಟ, ಕೂದಲು, ಮತ್ತು ಅವರ ನೃತ್ಯ ಕೌಶಲ್ಯಗಳು ಈ ಪಾತ್ರಕ್ಕೆ ಹೇಳಿದಂತೆ ಸೂಕ್ತವಾಗಿವೆ. ಅವರು ನಮಗೆ ಚಂದ್ರಮುಖಿ ಇದ್ದಂತೆ. ಇದು ಸುಂದರ ಆದರೆ ಸವಾಲು ಇರುವ ಚಿತ್ರ. ಕಂಗನಾ ಜತೆಗೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ, ಕಂಗನಾ ರಣಾವತ್​ ನಟನೆಯ ಶಕ್ತಿಯು ಆ ಪಾತ್ರ ನಿರ್ವಹಿಸುವುದರಲ್ಲಿದೆ. ಆ ಪಾತ್ರಕ್ಕೆ ಜೀವತುಂಬಿ ನ್ಯಾಯ ಒದಗಿಸಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿವಿಧ ಮೂಲ ಮಾಹಿತಿ ಪ್ರಕಾರ, ಡಿಸೆಂಬರ್ ಮೊದಲ ವಾರದಲ್ಲಿ ಕಂಗನಾ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಲಿದೆ. ನಟಿ ತನ್ನ ಎರಡನೇ ಚಿತ್ರೀಕರಣ ವೇಳೆ ಸ್ವಲ್ಪ ವಿರಾಮ ತೆಗೆದುಕೊಳ್ಳಲಿದ್ದಾರೆ. ಚಂದ್ರಮುಖಿ 2 ರ ಎರಡನೇ ಶೆಡ್ಯೂಲ್ ಜನವರಿಯಲ್ಲಿ ಪ್ರಾರಂಭವಾಗಲಿದೆ.

ಚಂದ್ರಮುಖಿ 2 ಲೈಕ್ ಸಂಸ್ಥೆ ನಿರ್ಮಾಣ ಮಾಡಲಿದೆ. ಈಗಾಗಲೇ ನಿರ್ಮಿಸಿರುವ ಪಿಎಸ್1 ಚಿತ್ರವನ್ನೂ ಬಿಡುಗಡೆಗೊಳಿಸಿದೆ. ಇವುಗಳ ನಡುವೆಯೂ ತೇಜಸ್ ಸಿನಿಮಾವನ್ನು ಒಪ್ಪಿಕೊಂಡಿದ್ದು, ಭಾರತೀಯ ವಾಯುಪಡೆಯ ಪೈಲಟ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:'ದಿ ಕಾಶ್ಮೀರ್ ಫೈಲ್ಸ್ ಅಶ್ಲೀಲ ಚಲನಚಿತ್ರ': ನಡಾವ್ ಲಪಿಡ್ ವ್ಯಂಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.