ETV Bharat / entertainment

'ಎಸ್‌ಆರ್‌ಕೆ ಸಿನಿಮಾ ಗಾಡ್, ನಿಮ್ಮ ಪರಿಶ್ರಮ, ನಮ್ರತೆಗೆ ನನ್ನ ನಮಸ್ಕಾರ': ಕಂಗನಾ ಗುಣಗಾನ - Kangana Ranaut on srk

Kangana Ranaut: ಜವಾನ್​ ಕ್ರೇಜ್​ ಕಂಡ ಬಾಲಿವುಡ್​ 'ಕ್ವೀನ್​​' ಕಂಗನಾ ರಣಾವತ್​ ಅವರು ಬಾಲಿವುಡ್​ ಕಿಂಗ್​ ಖಾನ್​ ಬಗ್ಗೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

Kangana Ranaut praises Shah Rukh Khan
ಶಾರುಖ್ ಖಾನ್ ಅವರನ್ನು ಹೊಗಳಿದ ಕಂಗನಾ ರಣಾವತ್
author img

By ETV Bharat Karnataka Team

Published : Sep 8, 2023, 2:01 PM IST

ಸಿನಿಮಾ ಜೊತೆಜೊತೆಗೆ ತಮ್ಮ ಹೇಳಿಕೆಗಳಿಂದಲೂ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್​. ತರಾಟೆ ತೆಗೆದುಕೊಳ್ಳಲು ನಿಂತ್ರೆ ಸ್ಟಾರ್​ ನಟ, ನಟಿ ಎಂಬುದನ್ನೂ ನೋಡಲ್ಲ. ಬೋಲ್ಡ್​ ಹೇಳಿಕೆಗಳಿಗೆ ಇವರು ಹೆಸರುವಾಸಿ. ಹೆಚ್ಚಾಗಿ ನಿರ್ದೇಶಕ, ನಿರ್ಮಾಪಕರು, ನಟ, ನಟಿಯ ಬಗ್ಗೆ ಕಾಮೆಂಟ್​ ಮಾಡುವ 'ಚಂದ್ರಮುಖಿ' ಇದೀಗ ಎಸ್​ಆರ್​ಕೆ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಹೌದು, ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಇನ್​ಸ್ಟಾಗ್ರಾಮ್​​ನಲ್ಲಿ ಬಾಲಿವುಡ್​ 'ಕ್ವೀನ್​​' ಕಂಗನಾ ರಣಾವತ್​ ಅವರು ಬಾಲಿವುಡ್​ ಕಿಂಗ್​ ಖಾನ್​ ಬಗ್ಗೆ ಮಾತನಾಡಿದ್ದಾರೆ. ಇನ್​ಸ್ಟಾ ಸ್ಟೋರಿನಲ್ಲಿ ಹೃದಯಸ್ಪರ್ಶಿ ಬರಹದೊಂದಿಗೆ ನಟ ಶಾರುಖ್​ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಾಲಿವುಡ್​ಗೆ ಕಿಂಗ್​ ಖಾನ್​ ಪುನರಾಗಮನವನ್ನು ಸುದೀರ್ಘ ಹೋರಾಟದ ನಂತರದ ಅದ್ಭುತ ಪ್ರಯಾಣ ಎಂದು ವರ್ಣಿಸಿದ್ದಾರೆ.

Kangana Ranaut praises Shah Rukh Khan
ನಟಿ ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಸ್ಟೋರಿ

ಸೆಪ್ಟೆಂಬರ್​ 7, ಅಂದರೆ ನಿನ್ನೆ ಬಹುನಿರೀಕ್ಷಿತ ಜವಾನ್​ ಸಿನಿಮಾ ಬಿಡುಗಡೆ ಆಗಿದೆ. ಶಾರುಖ್​ ಖಾನ್​ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನಿನ್ನೆ ದೇಶಾದ್ಯಂತ ಜವಾನ್​ನದ್ದೇ ಸದ್ದು. ಚಿತ್ರಮಂದಿರಗಳ ಒಳಗೂ ಮತ್ತು ಹೊರಗೂ ಸಂಭ್ರಮವೋ ಸಂಭ್ರಮ. ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಜವಾನ್​ ಸಂಭ್ರಮಾಚರಣೆ ಕುರಿತಾದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಇನ್ನೂ ಸದ್ದು ಮಾಡುತ್ತಿವೆ. ಮೊದಲ ದಿನವೇ ದೇಶೀಯ ಗಲ್ಲಾಪೆಟ್ಟಿಯಲ್ಲಿ 75 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಹಿಂದಿ ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದೆ. ಇಷ್ಟೆಲ್ಲಾ ಸಂಭ್ರಮ, ಸಾಧನೆ ನೋಡಿದ ನಟಿ ಕಂಗನಾ ರಣಾವತ್​ ಅವರಿಗೆ ಶಾರುಖ್​ ಬಗ್ಗೆ ಗುಣಗಾನ ಮಾಡುವುದರಿಂದ ಹಿಂದೆ ಸರಿಯಲು ಸಾಧ್ಯವಾಗಲಿಲ್ಲ.

''90ರ ಕಾಲದಲ್ಲಿ ಲವರ್​ ಬಾಯ್​ ಆಗಿ, ಸೂಪರ್​ ಸ್ಟಾರ್ ಆಗಲು ಸುದೀರ್ಘ ಹೋರಾಟ, ಅಭಿಮಾನಿಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಸರ್ವ ಪ್ರಯತ್ನ, ಅಂತಿಮವಾಗಿ ತಮ್ಮ 60ರ (ಆಸುಪಾಸು) ಹರೆಯದಲ್ಲಿ ಇಂಡಿಯನ್​ ಮಾಸ್​ ಸೂಪರ್​ ಹೀರೋ ಆಗಿ ಹೊರಹೊಮ್ಮಿದ್ದಾರೆ. ನಿಜಜೀವನದಲ್ಲೂ ಸೂಪರ್​ ಸ್ಟಾರ್. ನನಗೆ ನೆನಪಿದೆ, ನಟನ ಆಯ್ಕೆಗಳ ಕುರಿತು ಟೀಕೆ ಮಾಡಿದ್ದರು. ಆದ್ರೆ ಇವರ ಸುದೀರ್ಘ ಹೋರಾಟ ಅದೆಷ್ಟೋ ಕಲಾವಿದರಿಗೆ ಒಂದು ಮಾಸ್ಟರ್ ಕ್ಲಾಸ್​. ಎಸ್​ಆರ್​ಕೆ ಸಿನಿಮಾ ಗಾಡ್​​. ಕಿಂಗ್​ ಖಾನ್​​, ನಿಮ್ಮ ಪರಿಶ್ರಮ ಮತ್ತು ನಮ್ರತೆಗೆ ನನ್ನ ದೊಡ್ಡ ನಮಸ್ಕಾರಗಳು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್ ಬರ್ತ್​ಡೇಯಂದು ಘೋಷಣೆಯಾಗುವುದೇ ವೆಲ್ಕಮ್​ 3, ಹೇರಾ ಫೇರಿ 3?

ಕಂಗನಾ ರಣಾವತ್​ ಅವರ ಮುಂದಿನ ಸಿನಿಮಾ ಚಂದ್ರಮುಖಿ 2. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ನಿರ್ಮಾಣದ ಈ ಚಿತ್ರವನ್ನು ಸ್ಟಾರ್ ಡೈರೆಕ್ಟರ್​ ಪಿ ವಾಸು ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್​ ಅನಾವರಣಗೊಂಡು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದೇ ಸೆಪ್ಟೆಂಬರ್​ 19ರಂದು ಬಹುಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ: 'ಬಜಾರ್' ಹುಡುಗನ ಹುಟ್ದಬ್ಬ: ಧನ್ವೀರ್ ಗೌಡ ನಟನೆಯ ಹೊಸ ಸಿನಿಮಾ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.