ETV Bharat / entertainment

ಕಂಬ್ಳಿಹುಳ ಟ್ರೈಲರ್ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ - Kamblihula release date

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಂಬ್ಳಿಹುಳ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

Kamblihula trailer released
ಕಂಬ್ಳಿಹುಳ ಟ್ರೈಲರ್ ಬಿಡುಗಡೆ
author img

By

Published : Oct 21, 2022, 5:16 PM IST

ಸಿನಿಮಾರಂಗ ಬಹಳ ಬೇಗ ಅತಿ ಹೆಚ್ಚು ಮಂದಿಯನ್ನು ಆಕರ್ಷಿಸುತ್ತದೆ. ಕೆಲವರಿಗೆ ನಟರಾಗುವ ಆಸೆ, ಕೆಲವರಿಗೆ ನಿರ್ದೇಶಕರಾಗುವ ಆಸೆ. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸುವ ಕನಸು. ಆ ಕನಸುಗಳುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಮಾಡಿರುವ ಪ್ರೇಮಕಥೆಯುಳ್ಳ ಚಿತ್ರ 'ಕಂಬ್ಳಿಹುಳ'.

Kamblihula trailer released
ಕಂಬ್ಳಿಹುಳ ಚಿತ್ರದ ನಾಯಕಿ, ನಾಯಕ

ಟೈಟಲ್ ಮೂಲಕವೇ ಚಂದನವನ ಹಾಗೂ ಸಿನಿ ರಸಿಕರ ಮನಸ್ಸಲ್ಲಿ ಒಂದಿಷ್ಟು ಕುತೂಹಲ ಮೂಡಿಸಿದೆ. ಚೆಂದದ ಹಾಡಿನ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದ ಚಿತ್ರತಂಡವೀಗ ಟ್ರೈಲರ್ ಬಿಡುಗಡೆ ಮಾಡಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಯುವ ಪ್ರತಿಭೆಗಳನ್ನು ಬೆಂಬಲಿಸಿ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರವೀಣ್ ತೇಜ್, ನಿರ್ದೇಶಕ ಸತ್ಯ ಪ್ರಕಾಶ್ ಭಾಗಿಯಾಗಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದರು.

ಬಳಿಕ ಮಾತನಾಡಿದ ಆರಗ ಜ್ಞಾನೇಂದ್ರ, ಸಿನಿಮಾ ಮಾಯಾ ಜಗತ್ತು. ಸಿಹಿ ಕಹಿ ಎಲ್ಲವೂ ಇದರಲ್ಲಿರುತ್ತದೆ. ಒಂದು ಹೋರಾಟದ ಮನೋಭಾವ ಇದ್ದಾಗ ಮಾತ್ರ ಸಿನಿಮಾ ಮಾಡಲು ಸಾಧ್ಯ. ಈ ಚಿತ್ರದ ನಿರ್ಮಾಪಕರಲ್ಲಿಯೂ ಅಂಥದ್ದೊಂದು ಹೋರಾಟದ ಮನೋಭಾವ ಇದ್ದಿದ್ದರಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಲೆನಾಡಿನ ಯುವಕರು ತಾವು ಬೆಳೆದ ಊರು, ಪರಿಸರ, ಬದುಕು ಇವುಗಳ ಆಧಾರ ಮೇಲೆ ಕಥೆ ಕಟ್ಟಿ ಸಿನಿಮಾ ಮಾಡುತ್ತಾರೆ. ನೈಜತೆಯಿಂದ ಕೂಡಿರುವ ಕಂಬ್ಳಿಹುಳ ಸಿನಿಮಾ ಟ್ರೈಲರ್ ನೋಡಿದಾಗ ನನಗೂ ಅದೇ ಅನಿಸಿದ್ದು. ಸಿನಿಮಾ ಯಶಸ್ಸು ಕಾಣಲಿದೆ ಎಂದರು.

  • " class="align-text-top noRightClick twitterSection" data="">

ಕಿರು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದು. ಇದು ಮಲೆನಾಡು ಭಾಗದಲ್ಲಿ ನಡೆಯುವ ಕಥೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ ಸುತ್ತಮುತ್ತ ಕಂಬ್ಳಿಹುಳ ಚಿತ್ರೀಕರಣ ನಡೆಸಲಾಗಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು, ರಂಗಭೂಮಿ ಕಲಾವಿದರಾದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ನಿರ್ದೇಶಕ ನವನ್ ಶ್ರೀನಿವಾಸ್ ಮಾತನಾಡಿ, ಇಡೀ ಸಿನಿಮಾ ತಂಡ ಹೊಸಬರಿಂದ ಕೂಡಿದ್ದರಿಂದ 90 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಅಷ್ಟು ದಿನಗಳ ಶ್ರಮ ನವೆಂಬರ್ 4ರಂದು ತೆರೆ ಮೇಲೆ ಅನಾವರಣಗೊಳ್ಳುತ್ತಿದೆ. ನಾನು ಕೂಡ ಮಲೆನಾಡಿನವನಾದ್ದರಿಂದ ಸುಲಭವಾಗಿ ನಿರ್ದೇಶನ ಮಾಡಬಹುದುದೆಂದು ಆ ಭಾಗದ ಕಥೆಯನ್ನೇ ಆಯ್ಕೆ ಮಾಡಿಕೊಂಡೆ. ಖಂಡಿತ ಸಿನಿಮಾ ಎಲ್ಲರಿಗೂ ಒಳ್ಳೆಯ ಫೀಲ್ ಕೊಡಲಿದೆ ಎಂದು ತಿಳಿಸಿದರು.

ನಾಯಕ ಅಂಜನ್ ನಾಗೇಂದ್ರ ಮಾತನಾಡಿ, ಕಂಬ್ಳಿಹುಳ ನನಗೆ ಹೊಸ ಜೀವನ ಕೊಟ್ಟ ಸಿನಿಮಾ. ನಿರ್ದೇಶಕರಿಗೆ ನನಗೆ ಯಾವುದಾದರೂ ಪಾತ್ರ ಕೊಡಿ ಮಾಡುತ್ತೇನೆ ಎಂದಿದ್ದೆ. ಒಂದಷ್ಟು ದಿನಗಳ ನಂತರ ಈ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಬೇಕು ಎಂದರು. ನಾನು ರಂಗಭೂಮಿ ಕಲಾವಿದನಾದ್ದರಿಂದ ಸಿನಿಮಾ ನಟನೆಗೆ ಹೊಂದಿಕೊಳ್ಳಲು ಒಂದಿಷ್ಟು ವರ್ಕ್ ಮಾಡಿ ನಟಿಸಿದ್ದೇನೆ. ಇಲ್ಲಿವರೆಗೆ ನಮ್ಮ ಸಿನಿಮಾಗೆ ಹೇಗೆ ಸಪೋರ್ಟ್ ಮಾಡಿದ್ದೀರಾ ಹಾಗೆಯೇ ಬಿಡುಗಡೆಯಾದ ಮೇಲೂ ಪ್ರೀತಿ ತೋರಿಸಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

Kamblihula trailer released
ಕಂಬ್ಳಿಹುಳ ಚಿತ್ರತಂಡ

ಚಿತ್ರದ ನಾಯಕಿ ಅಶ್ವಿತಾ ಆರ್ ಹೆಗ್ಡೆ ಮಾತನಾಡಿ, ಚಿತ್ರದಲ್ಲಿ ಮಲೆನಾಡಿನಲ್ಲಿ ವಾಸವಾಗಿರುವ ಮಲಯಾಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ಮೂಲತಃ ನಾನು ರಂಗಭೂಮಿ ಕಲಾವಿದೆ. ನಮ್ಮೆಲ್ಲರಿಗೂ ಚಿತ್ರರಂಗ ಹೊಸತು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಹೊಸಬರ ಸಿನಿಮಾ ನೋಡಿ ಹಾರೈಸಿ. ಅವಕಾಶ ನೀಡಿದ್ದಕ್ಕಾಗಿ ಚಿತ್ರದ ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದರು.

ಇದನ್ನೂ ಓದಿ: 'ಓ...' ಎನ್ನುವುದು ಬರೀ ಶಬ್ದವಲ್ಲ, ಅದೊಂದು ನಂಬಿಕೆ; ಅಪಹಾಸ್ಯ ಮಾಡದಂತೆ ರಿಷಬ್ ಶೆಟ್ಟಿ ಮನವಿ

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿ ಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ. ನವೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.