ETV Bharat / entertainment

ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಪ್ರಭಾಸ್ ಎದುರು ಕಮಲ್ ಹಾಸನ್! ಹೈಪ್​ ಕ್ರಿಯೆಟ್​ ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ - project k

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ನಟ ಕಮಲ್ ಹಾಸನ್ ನಟಿಸಲಿದ್ದಾರಂತೆ.

kamal haasan to play the antagonist in prabhas project k

author img

By

Published : May 31, 2023, 2:40 PM IST

Updated : May 31, 2023, 3:10 PM IST

ಹೈದರಾಬಾದ್: ಅದ್ಧೂರಿ ತಾರಾಗಣದಲ್ಲಿ ತಯಾರಾಗುತ್ತಿರುವ 'ಪ್ರಾಜೆಕ್ಟ್ ಕೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಅದ್ಧೂರಿ ಸೆಟ್​ ಹಾಗೂ ತಾರೆಯರ ಸಮಾಗಮದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಬಾಲಿವುಡ್​ ಸೂಪರ್​ ಸ್ಟಾರ್​ ಅಮಿತಾಬ್ ಬಚ್ಚನ್ ಅವರಂತಹ ಮೇರು ನಟರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೆ ಗೊತ್ತಿರುವುದೆ! ಈ ಸ್ಟಾರ್​ಗಳ ಪ್ರವೇಶದ ನಡುವೆ ಮತ್ತೊಬ್ಬ ಖ್ಯಾತ ನಟ ಸೇರಿಕೊಂಡಿದ್ದಾರೆ.

ಹೌದು, ನಟ ಕಮಲ್ ಹಾಸನ್ 'ಪ್ರಾಜೆಕ್ಟ್ - ಕೆ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಪಾತ್ರ ಚಿತ್ರದ ಕೇಂದ್ರ ಬಿಂದು ಆಗಿರಲಿದ್ದು, ಕಮಲ್ ಹಾಸನ್ ಆಗಮನದಿಂದ ಚಿತ್ರವು ತಿರುವು ಪಡೆದುಕೊಳ್ಳಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಚಿತ್ರತಂಡ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಲವರು ಕಮಲ್ ಹಾಸನ್ ಅವರು 'ಪ್ರಾಜೆಕ್ಟ್-ಕೆ' ಚಿತ್ರದಲ್ಲಿ ಖಳ ನಟರಾಗಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವು ನೆಟಿಜನ್ಸ್, ಅವರ ಪ್ರವೇಶವೇ ಒಂದು ಭಾಗ್ಯ,​ ಕಾದು ನೋಡಬೇಕು ಎಂದು ಹೇಳುತ್ತಿದ್ದಾರೆ.

'ಪ್ರಾಜೆಕ್ಟ್-ಕೆ' ಚಿತ್ರದಲ್ಲಿ ನಾಯಕ ನಟ ಪ್ರಭಾಸ್ ಜೊತೆಗೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮುಂದಿನ ವರ್ಷ ಸಂಕ್ರಾಂತಿಗೆ ಉಡುಗೊರೆಯಾಗಿ ಪ್ರೇಕ್ಷಕರ ಮುಂದೆ ಬರಲಿದೆ. 'ಪ್ರಾಜೆಕ್ಟ್ ಕೆ' ಚಿತ್ರವನ್ನು ಹಿಂದೆಂದೂ ನೋಡಿರದ ಅದ್ಧೂರಿ ದೃಶ್ಯಗಳ ಮೂಲಕ ಮತ್ತು ಆ್ಯಕ್ಷನ್ ಥ್ರಿಲ್ಲರ್ ಆಗಿ ರೂಪಿಸುವ ತವಕದಲ್ಲಿದ್ದಾರೆ ನಿರ್ದೇಶಕ-ನಿರ್ಮಾಪಕರು.

ಇದೊಂದು ಸೈನ್ಸ್​ ಫಿಕ್ಷನ್​ ಸಿನಿಮಾ ಆಗಿದ್ದು, ಅದಕ್ಕೆ ತಕ್ಕಂತೆಯೇ ಪಾತ್ರಧಾರಿಗಳ ಕಾಸ್ಟ್ಯೂಮ್​ ಡಿಸೈನ್ ಕೂಡ​ ಮಾಡಲಾಗಿದೆಯಂತೆ. ಇತ್ತೀಚೆಗೆ 'ಪ್ರಾಜೆಕ್ಟ್​ ಕೆ' ಚಿತ್ರತಂಡ ಹೊಸದೊಂದು ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಈ ಬಗ್ಗೆ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಪ್ರತಿ ಪಾತ್ರದ ಕಾಸ್ಟ್ಯೂಮ್​ ಡಿಫರೆಂಟ್​ ಆಗಿರಲಿದ್ದು ಇಂಗ್ಲಿಷ್​​ ​ ಚಿತ್ರಗಳಿಗೂ ಪೈಪೋಟಿ ನೀಡಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ತೆಲುಗಿನ ಪ್ರತಿಷ್ಠಿತ ವೈಜಯಂತಿ ಮೂವೀಸ್​ ಮೂಲಕ ಪ್ರಾಜೆಕ್ಟ್​ ಸಿನಿಮಾ ನಿರ್ಮಾಣವಾಗುತ್ತಿದೆ. ಬಹು ಕೋಟಿ ರೂಪಾಯಿಗಳ ಬಂಡವಾಳ ಸುರಿದು ಈ ಚಿತ್ರವನ್ನು ತಯಾರಿಸಲಾಗುತ್ತಿದೆ. 'ಮಹಾನಟಿ' ಸಿನಿಮಾದಿಂದ ಭರ್ಜರಿ ಗೆಲುವನ್ನು ಕಂಡಿದ್ದ ರಾಷ್ಟ್ರೀಯ ಪ್ರಶಸ್ತಿ ನಿರ್ದೇಶಕ ಅಶ್ವಿನ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಪ್ರಭಾಸ್​ ಸದ್ಯ 'ಸಲಾರ್'​, 'ಆದಿಪುರುಷ್' ಚಿತ್ರದಲ್ಲಿ ತಲ್ಲೀನರಾಗಿದ್ದಾರೆ. ಸದ್ಯದಲ್ಲೆ 'ಆದಿಪುರುಷ್' ಚಿತ್ರ ತೆರೆಗೆ ಅಪ್ಪಳಿಸಲಿದ್ದು, ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ 'ಆದಿಪುರುಷ್' ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್ 16 ರಂದು ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: ಅಭಿಷೇಕ್ ಅಂಬರೀಶ್- ಅವಿವಾ ಮದುವೆಗೆ ಸಿದ್ಧತೆ: ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

Last Updated : May 31, 2023, 3:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.