ETV Bharat / entertainment

'ರಾಜಕಾರಣಿಗಳ ಹೆಸರು ಹಾಳುಮಾಡುವ ಉದ್ದೇಶ ನನ್ನದಲ್ಲ': ನಟಿ ಕಾಜೋಲ್​ ಸ್ಪಷ್ಟನೆ - ರಾಜಕಾರಣಿಗಳ ಬಗ್ಗೆ ಕಾಜೋಲ್ ಹೇಳಿಕೆ

ರಾಜಕೀಯ ನಾಯಕರ ಶೈಕ್ಷಣಿಕ ಅರ್ಹತೆಯ ಬಗ್ಗೆ ನಟಿ ಕಾಜೋಲ್​ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು. ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

Kajol
ಕಾಜೋಲ್
author img

By

Published : Jul 9, 2023, 12:14 PM IST

ಬಾಲಿವುಡ್​ ನಟಿ ಕಾಜೋಲ್​​​ ತಮ್ಮ ಚೊಚ್ಚಲ ವೆಬ್​ ಸೀರೀಸ್​​ 'ದಿ ಟ್ರಯಲ್' ಪ್ರಮೋಶನ್​​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರದ ಸಂದರ್ಶನವೊಂದರಲ್ಲಿ ರಾಜಕೀಯ ನಾಯಕರು ಮತ್ತು ಅವರ ಶೈಕ್ಷಣಿಕ ಹಿನ್ನೆಲೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನು ಮನಗಂಡ ಕಾಜೋಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಹೇಳಿಕೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕಾಮೆಂಟ್‌ಗಳು ಶೈಕ್ಷಣಿಕ ಕೊರತೆಯಿರುವ ರಾಜಕಾರಣಿಗಳಿಗೆ ಅಪಖ್ಯಾತಿ ಉಂಟು ಮಾಡುವ ಗುರಿ ಹೊಂದಿಲ್ಲ. ಇದಕ್ಕೆ ಬದಲಾಗಿ, ಪರಿಣಾಮಕಾರಿ ನಾಯಕತ್ವದ ಗುಣಗಳನ್ನು ರೂಪಿಸುವಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಒತ್ತಿ ಹೇಳುವುದೇ ಆಗಿತ್ತು ಎಂದು ತಿಳಿಸಿದ್ದಾರೆ. ರಾಜಕೀಯ ನಾಯಕರ ಸಾಮರ್ಥ್ಯ ಅಥವಾ ಸಾಧನೆಗಳನ್ನು ಹಾಳುಮಾಡುವ ಉದ್ದೇಶವೂ ನನ್ನದಲ್ಲ. ಅವರ ಮೇಲೆ ಮೇಲೆ ಗೌರವವಿದೆ. ಆದ್ರೆ ಶಿಕ್ಷಣದ ಪ್ರಾಮುಖ್ಯತೆಯನ್ನು ಉತ್ತೇಜಿಸುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.

  • I was merely making a point about education and its importance. My intention was not to demean any political leaders, we have some great leaders who are guiding the country on the right path.

    — Kajol (@itsKajolD) July 8, 2023 " class="align-text-top noRightClick twitterSection" data=" ">

ಶನಿವಾರ ಟ್ವೀಟ್‌ ಮಾಡಿರುವ ಕಾಜೋಲ್​, "ನಾನು ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಯಾವುದೇ ರಾಜಕೀಯ ನಾಯಕರನ್ನು ಕೀಳಾಗಿ ಕಾಣಲಾರೆ. ನಮ್ಮಲ್ಲಿ ದೇಶವನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿರುವ ಕೆಲವು ಶ್ರೇಷ್ಠ ನಾಯಕರಿದ್ದಾರೆ" ಎಂದು ತಿಳಿಸಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ, "ಬದಲಾವಣೆ, ವಿಶೇಷವಾಗಿ ಭಾರತದಂತಹ ದೇಶದಲ್ಲಿ ನಿಧಾನಗತಿಯಲ್ಲಿದೆ. ನಾವು ನಮ್ಮ ಸಂಪ್ರದಾಯಗಳಲ್ಲಿ ಮುಳುಗಿದ್ದೇವೆ. ನಮ್ಮ ಚಿಂತನೆಯ ಪ್ರಕ್ರಿಯೆಗಳಲ್ಲಿ ಮುಳುಗಿದ್ದೇವೆ. ಸಹಜವಾಗಿ ಇದು ಶಿಕ್ಷಣದೊಂದಿಗೆ ಸಂಬಂಧಿಸಿದೆ. ಶೈಕ್ಷಣಿಕ ಹಿನ್ನೆಲೆಯಿಲ್ಲದ ರಾಜಕೀಯ ನಾಯಕರಿದ್ದಾರೆ. ಕ್ಷಮಿಸಿ, ನಾನು ಈ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮನ್ನು ಅಂಥ ನಾಯಕರು ಆಳುತ್ತಿದ್ದಾರೆ. ಅವರಲ್ಲಿ ಅನೇಕರಿಗೆ ಶಿಕ್ಷಣವು ನೀಡಬಹುದಾದ ದೃಷ್ಟಿಕೋನದ ಮಹತ್ವ ತಿಳಿದಿಲ್ಲ. ಶಿಕ್ಷಣವು ವಿಭಿನ್ನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವ ಅವಕಾಶ ನೀಡುತ್ತದೆ" ಎಂದು ಹೇಳಿದ್ದರು.

ಇದನ್ನೂ ಓದಿ: ಕತ್ರಿನಾ ವಿಕ್ಕಿ ರೊಮ್ಯಾಂಟಿಕ್ ಫೋಟೋ; ಮೇಡ್​ ಫಾರ್ ಈಚ್​ ಅದರ್ ಎನ್ನುವಂತಿದೆ 'ವಿಕ್ಯಾಟ್'​ ಜೋಡಿ

ಇನ್ನು ಕಾಜೋಲ್ ಅವರ ವೃತ್ತಿಬದುಕು ನೋಡುವುದಾದರೆ, ನೆಟ್‌ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿರುವ ಲಸ್ಟ್ ಸ್ಟೋರೀಸ್ 2ನಲ್ಲಿ ಅಭಿನಯಿಸುತ್ತಿದ್ದಾರೆ. 'ದಿ ಟ್ರಯಲ್ - ಪ್ಯಾರ್, ಕಾನೂನ್, ಧೋಕಾ' ಎಂಬ ಶೀರ್ಷಿಕೆಯ ವೆಬ್ ಸರಣಿಯಲ್ಲೂ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: Srk Jawan: ನಾಳೆ ಜವಾನ್​ ಟ್ರೇಲರ್​ ರಿಲೀಸ್; ಜೈ ಅಂತಾನಾ ಪ್ರೇಕ್ಷಕ? ಆ್ಯಕ್ಷನ್​ ಅವತಾರದಲ್ಲಿ ರೊಮ್ಯಾಂಟಿಕ್​ ಹೀರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.