ಭಾರತೀಯ ಚಿತ್ರರಂಗದಲ್ಲಿ ಬೇಜಾನ್ ಟಾಕ್ ಆಗುತ್ತಿರುವ ಬಹು ನಿರೀಕ್ಷಿತ ಚಿತ್ರ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರೋ ಬಿಗ್ ಬಜೆಟ್ ಕಬ್ಜ ಸಿನಿಮಾ ಟೀಸರ್ ಕಳೆದ ಶನಿವಾರ ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಉಪೇಂದ್ರ ಹುಟ್ಟು ಹಬ್ಬದ ಉಡುಗೊರೆಯಾಗಿ ರಿವೀಲ್ ಆದ ಕಬ್ಜ ಟೀಸರ್ ಅನ್ನು ಮಿಲಿಯನ್ಗಟ್ಟಲೆ ಜನರು ನೋಡುವ ಮೂಲಕ ಹೊಸ ರೆಕಾರ್ಡ್ ಮಾಡಿದೆ.
ಕಬ್ಜ ಟೀಸರ್ನಲ್ಲಿ ಅನೇಕ ವಿಷಯಗಳು ಹೈಲೈಟ್ ಆಗಿವೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಇಡೀ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗಿದೆ ಎಂಬುದಕ್ಕೆ ಈ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ಗೆಟಪ್ ಕೂಡ ಇದರಲ್ಲಿ ರಿವೀಲ್ ಆಗಿದೆ.
ಉಪೇಂದ್ರ ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನಾಲ್ಕು ದಿನಕ್ಕೆ ಬರೋಬ್ಬರಿ 25 ಮಿಲಿಯನ್ ಜನ ಕಬ್ಜ ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಖುಷಿಯನ್ನು ನಿರ್ದೇಶಕ ಆರ್ ಚಂದ್ರು, ನಟ ಉಪೇಂದ್ರ ಹಾಗೂ ಟಗರು ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ಕಬ್ಜ ಚಿತ್ರದ ಟೀಸರ್ ಸಕ್ಸಸ್ ಅನ್ನು ಸೆಲೆಬ್ರೇಟ್ ಮಾಡಿದರು.
ನಟ ಉಪೇಂದ್ರ ಮಾತನಾಡಿ, ಕಬ್ಜ ಸಿನಿಮಾದ ಟೀಸರ್ಗೆ ಸಿಕ್ಕ ರೆಸ್ಪಾನ್ಸ್ ಕುರಿತು ಹರ್ಷ ವ್ಯಕ್ತಪಡಿಸಿದರು. ನಾನೊಬ್ಬ ನಿರ್ದೇಶಕನಾಗಿ ಚಂದ್ರು ಅವರಿಂದ ಅವರ ಕಾರ್ಯವೈಖರಿ ಹಾಗು ಅದ್ಧೂರಿ ಮೇಕಿಂಗ್ ಮಾಡೋದನ್ನು ಕಲಿಯಬೇಕು. ಮೊದಲಿಗೆ ಡೈರೆಕ್ಟರ್ ಚಂದ್ರು ಬಂದು ಈ ಸಿನಿಮಾದ ಕಥೆ ಹೇಳಿದಾಗ ನಾನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
ಆದರೆ, ಚಂದ್ರು ಈ ಸಿನಿಮಾ ಬಗ್ಗೆ ಹೋಂ ವರ್ಕ್ ಮಾಡಿ ಶೂಟಿಂಗ್ ಮಾಡುವಾಗ ಈ ಸಿನಿಮಾದ ಕ್ವಾಲಿಟಿ ಕಥೆ ಬಗ್ಗೆ ಗೊತ್ತಾಯಿತು. ಇನ್ನು ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕರೆ ಮಾಡಿ ಟೀಸರ್ ಹೇಳಿದಾಗ ಮತ್ತಷ್ಟು ಹೆಮ್ಮೆ ಅನಿಸಿತು ಎಂದು ತಿಳಿಸಿದರು.
ಇದನ್ನೂ ಓದಿ: ಟ್ರೆಂಡ್ ಸೆಟ್ ಮಾಡಿದ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಸಿನಿಮಾ ಟೀಸರ್
ನಂತರ ಮಾತನಾಡಿದ ನಿರ್ದೇಶಕ ಆರ್ ಚಂದ್ರು, ನಾನು ಕೆಜಿಎಫ್ ಸಿನಿಮಾ ನೋಡಿ ಸ್ವಲ್ಪ ದಿನಗಳ ಕಾಲ ನಿದ್ದೆ ಮಾಡೋದಿಕ್ಕೆ ಆಗಿರಲಿಲ್ಲ. ಯಾಕೆಂದರೆ ನಾನು ಇಷ್ಟು ಸಿನಿಮಾ ಮಾಡಿದ್ದೀನಿ. ನನಗೆ ಯಾಕೆ ಅದ್ಧೂರಿ ಮೇಕಿಂಗ್ ಸಿನಿಮಾ ಮಾಡೋದಿಕ್ಕೆ ಆಗಿಲ್ಲ ಅಂತಾ ಅಂದುಕೊಂಡಾಗ ಶುರುವಾಗಿದ್ದೆ ಕಬ್ಜ ಚಿತ್ರ. ಸ್ವಾತಂತ್ರ್ಯ ಪೂರ್ವ ಕಾಲ ಘಟ್ಟದ ಕಥೆ ಜೊತೆಗೆ ಅಂಡರ್ ವರ್ಲ್ಡ್ ಕಥೆಯನ್ನು ಕಬ್ಜ ಒಳಗೊಂಡಿದೆ.
ಟೀಸರ್ ಅನ್ನು ಬರೋಬ್ಬರಿ 150ಕ್ಕೂ ಹೆಚ್ಚು ಬಾರಿ ಕಟ್ ಮಾಡಿಸಿ ಫೈನಲ್ ಆಗಿ ಈ ಟೀಸರ್ ಅನ್ನ ಬಿಡಲಾಗಿದೆ. ಅಷ್ಟು ಹಾರ್ಡ್ ವರ್ಕ್ ಈ ಕಬ್ಜ ಸಿನಿಮಾಗೆ ಮಾಡುತ್ತಿದ್ದೇವೆ ಎಂದು ಹೇಳಿದರು. ಸದ್ಯ ಒಂದು ಹಾಡು ಬಾಕಿ ಇದೆ. ಆ ಹಾಡಿಗೆ ಬಾಲಿವುಡ್ ನಟಿಯೊಬ್ಬರನ್ನು ಆಪ್ರೋಚ್ ಮಾಡುತ್ತಿದ್ದೇವೆ. ಆ ಹಾಡಿನ ಶೂಟಿಂಗ್ ಮುಗಿದರೆ ಈ ವರ್ಷದ ಎಂಡ್ನಲ್ಲಿ ಕಬ್ಜ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ ಅಂತಾ ತಿಳಿಸಿದರು.