ETV Bharat / entertainment

ಹೊಟ್ಟೆಯ ಕ್ಯಾನ್ಸರ್​ನಿಂದ ನಟ ಜೂನಿಯರ್ ಮೆಹಮೂದ್ ನಿಧನ

Junior Mehmood passes away: ಹೊಟ್ಟೆಯ ಕ್ಯಾನ್ಸರ್​ನಿಂದ ಜೂನಿಯರ್ ಮೆಹಮೂದ್ ಎಂದೇ ಖ್ಯಾತಿ ಗಳಿಸಿದ್ದ ನಟ ನಯೀಮ್ ಸಯ್ಯದ್ (67) ನಿಧನರಾಗಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೆಸರಾಂತ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದರು.

Junior Mehmood death
ಹೊಟ್ಟೆಯ ಕ್ಯಾನ್ಸರ್​ನಿಂದ ಜೂನಿಯರ್ ಮೆಹಮೂದ್ ನಿಧನ
author img

By ETV Bharat Karnataka Team

Published : Dec 8, 2023, 8:21 AM IST

Updated : Dec 8, 2023, 9:28 AM IST

ಮುಂಬೈ (ಮಹಾರಾಷ್ಟ್ರ): ಜೂನಿಯರ್ ಮೆಹಮೂದ್ ಎಂದೇ ಖ್ಯಾತರಾಗಿದ್ದ ನಟ ನಯೀಮ್ ಸಯ್ಯದ್ ನಿನ್ನೆ (ಗುರುವಾರ) ರಾತ್ರಿ 2 ಗಂಟೆಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಹೊಟ್ಟೆಯ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಜೂನಿಯರ್ ಮೆಹಮೂದ್ ಅವರಿಗೆ 67 ವರ್ಷ ವಯಸ್ಸಾಗಿತ್ತು. ಹೊಟ್ಟೆಯ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದಾಗ ಅವರು ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇಂದು (ಶುಕ್ರವಾರ) ಮಧ್ಯಾಹ್ನದ ಅಂತಿಮ ನಮನ ಸಲ್ಲಿಸಿದ ನಂತರ, ಸಾಂತಾಕ್ರೂಜ್ ಸಮಾಧಿ ಮೈದಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸ್ನೇಹಿತರು ಖಚಿತಪಡಿಸಿದ್ದಾರೆ. ಹಾಸ್ಯನಟನಾಗಿ ಜೂನಿಯರ್ ಮೆಹಮೂದ್ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಅವರ ಮರಣದ ನಂತರ, ಸಿನಿಮಾ ರಂಗದವರಲ್ಲಿ ಮೌನ ಆವರಿಸಿದೆ.

  • Actor Naeem Sayyed, popularly known as Junior Mehmood, passed away last night at 2 am in Mumbai. He was suffering from stomach cancer and was not keeping well for the last few days. His last rites will be performed in Santacruz burial ground after today's afternoon prayers,… pic.twitter.com/VEFzyn0uXP

    — ANI (@ANI) December 8, 2023 " class="align-text-top noRightClick twitterSection" data=" ">

ಜ್ಯೂನಿಯರ್ ಮಹಮೂದ್ ಅವರ ಪುತ್ರ ಹಸ್ನೈನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ''18 ದಿನಗಳ ಹಿಂದೆಯಷ್ಟೇ ತಂದೆಯವರ ಹೊಟ್ಟೆಯ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿರುವ ಬಗ್ಗೆ ನಮಗೆ ತಿಳಿದಿತ್ತು. ಅವರನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಈ ಹಂತದಲ್ಲಿ ಚಿಕಿತ್ಸೆಯ ಜೊತೆಗೆ ಕೀಮೋಥೆರಪಿ ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.

ಜೂನಿಯರ್ ಮೆಹಮೂದ್ ಅವರು, ಮೊಹಬ್ಬತ್ ಜಿಂದಗಿ ಹೈ (1966) ಚಿತ್ರದ ಮೂಲಕ ಬಾಲ ಕಲಾವಿದರಾಗಿ ತಮ್ಮ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನೌನಿಹಾಲ್, ಕಾರವಾನ್, ಹಾಥಿ ಮೇರೆ ಸಾಥಿ, ಮೇರಾ ನಾಮ್ ಜೋಕರ್, ಸುಹಾಗ್ ರಾತ್, ಬ್ರಹ್ಮಚಾರಿ, ಕಟಿ ಪತಂಗ್, ಹರೇ ರಾಮ ಹರೇ ಕೃಷ್ಣ, ಗೀತ್ ಗಾತಾ ಚಲ್, ಇಮಂದಾರ, ಆಜ್ ಕಾ ಅರ್ಜುನ್, ಗುರುದೇವ್, ಛೋಟೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಸೆಳೆದಿದ್ದರು.

ದೂರದರ್ಶನದಲ್ಲಿ ''ಪ್ಯಾರ್ ಕಾ ದರ್ದ್ ಹೈ ಮೀಟಾ ಪ್ಯಾರಾ'', ''ಏಕ್ ರಿಶ್ತಾ ಶಾಮಂಡಿ ಕಾ'' ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ್ದರು. ಜೊತೆಗೆ ಜೂನಿಯರ್ ಮೆಹಮೂದ್ ಅವರು ಅನೇಕ ಮರಾಠಿ ಚಲನಚಿತ್ರಗಳನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದರು. ಲೇಟ್ ಕಾಮಿಡಿ ಐಕಾನ್ ಮೆಹಮೂದ್ 1968ರ ಚಲನಚಿತ್ರ ಸುಹಾಗ್ ರಾತ್ ನಲ್ಲಿ ಪರದೆ ಹಂಚಿಕೊಂಡ ನಂತರ, ನಯೀಮ್ ಸೈಯದ್​ ಅವರಿಗೆ ಜೂನಿಯರ್ ಮೆಹಮೂದ್ ಎಂಬ ಹೆಸರು ಬರಲು ಕಾರಣವಾಗಿತು.

ಇದನ್ನೂ ಓದಿ: ಕೆಜಿಎಫ್​ ಸ್ಟಾರ್​ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ; 'ಯಶ್​​ 19' ಅನೌನ್ಸ್​ಮೆಂಟ್​ಗೆ ಕಾತರ

Last Updated : Dec 8, 2023, 9:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.