ETV Bharat / entertainment

ಆರ್‌ಆರ್‌ಆರ್‌ ಆಯ್ತು, ಜೂ.ಎನ್‌ಟಿಆರ್ ಮುಂದಿನ ಸಿನಿಮಾಗಳು ಯಾವುವು? - ಜೂ ಎನ್‌ಟಿಆರ್ ಮುಂದಿನ ಸಿನಿಮಾ

ನಿರ್ದೇಶಕ ವೆಟ್ರಿಮಾರನ್ ಅವರೊಂದಿಗೆ ಜೂನಿಯರ್ ಎನ್‌ಟಿಆರ್ ಸಿನಿಮಾ ಮಾಡಲಿದ್ದಾರೆ.

Jr NTR to work with director Vetrimaaran
ವೆಟ್ರಿಮಾರನ್ ಜೊತೆ ಜೂನಿಯರ್ ಎನ್‌ಟಿಆರ್ ಮುಂದಿನ ಸಿನಿಮಾ
author img

By

Published : Apr 12, 2023, 3:12 PM IST

Updated : Apr 12, 2023, 6:17 PM IST

ಆಸ್ಕರ್​ 2023 ಪ್ರಶಸ್ತಿ ಬಳಿಕ ದಕ್ಷಿಣ ಭಾರತದ​ ಸೂಪರ್​​ ಸ್ಟಾರ್​​ ಜೂನಿಯರ್​ ಎನ್​ಟಿಆರ್​ ಜನಪ್ರಿಯತೆ ಹೆಚ್ಚುತ್ತಿದೆ. ದೇಶ, ಸಾಗರದಾಚೆಗೂ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಆರ್​ಆರ್​ಆರ್​ ಎಂಬ ಸೂಪರ್​ ಹಿಟ್​ ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸೆಳೆದಿರುವ ಇವರು ಮುಂದಿನ ಪ್ರೊಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ.

ಜೂ.ಎನ್‌ಟಿಆರ್ ಅಭಿನಯದ ಮುಂದಿನ 'ಎನ್‌ಟಿಆರ್ 30' ಸಿನಿಮಾದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. NTR30 ಎಂಬ ತಾತ್ಕಾಲಿಕ ಶೀರ್ಷಿಕೆಯುಳ್ಳ ಚಿತ್ರಕ್ಕೆ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿ. ಕೊರಟಾಲ ಶಿವ ಆ್ಯಕ್ಸನ್​ ಕಟ್​ ಹೇಳಲಿದ್ದಾರೆ.

ಜಾನ್ವಿ ಕಪೂರ್ ಅವರ ಚೊಚ್ಚಲ ಟಾಲಿವುಡ್​ ಚಿತ್ರವಿದು. ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ಯೋಜಿಸಿದೆ. 'ಎನ್‌ಟಿಆರ್ 30' ಮೂಲಕ ಜಾನ್ವಿ ಬಹುಭಾಷಾ ತಾರೆಯಾಗಿ ಗುರುತಿಸಿಕೊಳ್ಳುವರು. ಈವರೆಗಿನ ಸಿನಿಮಾಗಳು ನಟಿಗೆ ಹೇಳಿಕೊಳ್ಳುವಂಥ ಬ್ರೇಕ್​ ಕೊಟ್ಟಿಲ್ಲ. ಆದ್ರೆ ತೆಲುಗು ಚಿತ್ರ ಯಶಸ್ವಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

'ಎನ್‌ಟಿಆರ್ 30' ಅಲ್ಲದೇ ಮತ್ತೊಂದು ಸಿನಿಮಾಗೂ ಜೂ.ಎನ್​ಟಿಅರ್​ ಒಪ್ಪಿಗೆ​ ಕೊಟ್ಟಿದ್ದಾರೆ ಎಂಬ ಸುದ್ದಿ ಇದೆ. ನಿರ್ದೇಶಕ ವೆಟ್ರಿಮಾರನ್ (Vetrimaaran) ಅವರು ಈ ಹಿಂದೆ ತಮಿಳು ನಟ ಧನುಷ್ ಅವರೊಂದಿಗೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಜೂ. ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಆದ್ರೆ ಹೊಸ ಚಿತ್ರಕ್ಕಿನ್ನೂ ಟೈಟಲ್​ ಅಂತಿಮಗೊಂಡಿಲ್ಲ. ಆರ್​ಆರ್​ಆರ್ ಖ್ಯಾತಿಯ ತಾರೆಗೆ ಅಗತ್ಯವಿರುವ ಕಂಟೆಂಟ್​ ಇಟ್ಟುಕೊಂಡು ಕೆಲಸ ಮಾಡುವುದಾಗಿ ನಿರ್ದೇಶಕರು ಹೇಳಿದ್ದಾರೆ.

ವೆಟ್ರಿಮಾರನ್ ಅವರು ತಮಿಳು ಚಲನಚಿತ್ರ ವಿಡುದಲೈ: ಭಾಗ 1ರ ತೆಲುಗು ಡಬ್ಬಿಂಗ್ ಆವೃತ್ತಿಯ ಪ್ರಚಾರ ಸಲುವಾಗಿ ಹೈದರಾಬಾದ್‌ನಲ್ಲಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಸಂವಾದದ ವೇಳೆ, ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡಲಿರುವ ವದಂತಿಗಳ ಬಗ್ಗೆ ನಿರ್ದೇಶಕರನ್ನು ಮಾಧ್ಯಮದವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರು ಆರ್​ಆರ್​ಆರ್​ ನಟನೊಂದಿಗೆ ಸಿನಿಮಾ ಮಾಡುವ ವಿಚಾರವನ್ನು ಬಹಿರಂಗಪಡಿಸಿದ್ದು, ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

"ಕೊಲಾಬ್ರೇಶನ್ (ನಟ-ನಿರ್ದೇಶಕರ ಸಹಭಾಗಿತ್ವ) ಬಹಳ ಅರ್ಥಪೂರ್ಣವಾದದ್ದು. ನಾನು ಕೇವಲ ಸ್ಟಾರ್ ವ್ಯಾಲ್ಯೂಗಾಗಿ ಸಹಕರಿಸುವುದಿಲ್ಲ. ಅವರಂಥ ಸ್ಟಾರ್‌ಗೆ ಬೇಡಿಕೆಯಿರುವ ಕಂಟೆಂಟ್​ಗೆ ಮಾತ್ರ ಸಹಕರಿಸುತ್ತೇನೆ. ಅಷ್ಟು ಮಾತ್ರ ಈಗ ಹೇಳಬಲ್ಲೆ" ಎಂದರು. ಅಭಿಮಾನಿಗಳು ನಿರ್ದೇಶಕರು ಮಾತನಾಡಿರುವ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್ 2: ಪ್ರೇಕ್ಷಕರ ಮನ‌‌ಗೆಲ್ಲಲು ಸಜ್ಜಾಗಿದ್ದಾರೆ ರಮೇಶ್ ಅರವಿಂದ್

ವೆಟ್ರಿಮಾರನ್ ಮತ್ತು ಜೂ.ಎನ್​ಟಿಆರ್​ ಸಹಯೋಗದಲ್ಲಿ ಸಿನಿಮಾ ಬರಲಿದೆ ಎಂಬ ವಿಚಾರ ಕೇಳಿ ಬಹಳ ಸಂತೋಷವಾಗಿದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. "ಇದು ಅದ್ಭುತ ಸಹಯೋಗ" ಎಂದು ಓರ್ವರು ಬರೆದರೆ, ಇನ್ನೊಬ್ಬರು "ಈ ಪ್ರೊಜೆಕ್ಟ್​​ ಪ್ರಾರಂಭವಾಗುವವರೆಗೆ ಕಾಯಲು ಸಾಧ್ಯವಿಲ್ಲ" ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇನ್ನು, ಬಾಲಿವುಡ್​ನ ಸೂಪರ್ ಹಿಟ್ ಸಿನಿಮಾ 'ವಾರ್' ಸೀಕ್ವೆಲ್​ನಲ್ಲಿ ಜೂನಿಯರ್ ಎನ್​ಟಿಆರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಇತ್ತೀಚೆಗಷ್ಟೇ ತಿಳಿಸಿದ್ದರು. ಸಲ್ಮಾನ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ 'ಟೈಗರ್ 3'ನಲ್ಲಿಯೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಒಟ್ಟಾರೆ ಸೌತ್​ ಸೂಪರ್​ ಸ್ಟಾರ್​ ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಿ ಶಾರುಖ್ ಖಾನ್​​ ಪುತ್ರಿ: ಜಾಲತಾಣದಲ್ಲಿ ಚರ್ಚೆ ಶುರು

Last Updated : Apr 12, 2023, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.