ETV Bharat / entertainment

ಜ್ಯೂನಿಯರ್​​ ಎನ್‌ಟಿಆರ್ ಹುಟ್ಟುಹಬ್ಬ, ವಿಶೇಷವಾಗಿ ಶುಭಕೋರಿದ ಕೆನಡಾ, ಜಪಾನ್‌ನ ಅಭಿಮಾನಿಗಳು - kannada top news

ಜ್ಯೂನಿಯರ್​ ಎನ್​ಟಿಆರ್​ ಅವರಿಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಕೆನಡಾ ಮತ್ತು ಜಪಾನ್​​ನಲ್ಲಿರುವ ಅಭಿಮಾನಿಗಳು ಅವರ ಜನ್ಮದಿನ್ಕಕೆ ವಿಶೇಷವಾಗಿ ಶುಭಕೋರಿದ್ದಾರೆ.

jr-ntr-birthday-fans-from-canada-japan-celebrate-the-actors-special-day-no-less-than-a-festival
ಜ್ಯೂನಿಯರ್​​ ಎನ್‌ಟಿಆರ್ ಹುಟ್ಟುಹಬ್ಬ, ವಿಶೇಷವಾಗಿ ಶುಭಕೋರಿದ ಕೆನಡಾ, ಜಪಾನ್‌ನ ಅಭಿಮಾನಿಗಳು
author img

By

Published : May 20, 2023, 6:54 PM IST

ಹೈದರಾಬಾದ್​​: ಜ್ಯೂನಿಯರ್​​​ ಎನ್​ಟಿಆರ್​​​ ಎಂದೇ ಖ್ಯಾತರಾಗಿರುವ ತೆಲಗು ಚಿತ್ರರಂಗದ ನಟ ನಂದಮೂರಿ ತಾರಕ ರಾಮರಾವ್​​ ಜ್ಯೂನಿಯರ್​​​ ಅವರಿಂದು ತಮ್ಮ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಜ್ಯೂನಿಯರ್​ ಎನ್​ಟಿಆರ್​​ ಅವರಿಗೆ ಕೆನಡಾ ಮತ್ತು ಜಪಾನ್​ ದೇಶದ ಅಭಿಮಾನಿಗಳು ವಿಶೇಷವಾಗಿ ಶುಭಕೋರಿದ್ದಾರೆ.

ತಮ್ಮ ನೆಚ್ಚಿನ ನಟನ ಹುಟ್ಟು ಹಬಕ್ಕೆ ಶುಭ ಕೋರಿರುವ ಜಪಾನೀಸ್​ ಅಭಿಮಾನಿಗಳು ಎನ್​ಟಿಆರ್​​ ಫೋಟೋ ಸುತ್ತಲು ಮೇಣದ ಬತ್ತಿ ಮತ್ತು ಕೇಕ್​ಗಳಿಂದ ಅಲಂಕರಿಸಿ ಶುಭ ಕೋರಿದರೆ. ಕೆನಾಡಾದ ಅಭಿಮಾನಿಗಳು 'ಜೈ ಎನ್​ಟಿಆರ್​' ಎಂದು ಬರೆದಿರುವ ದ್ವಜವನ್ನು ಹಿಡಿದುಕೊಂಡು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಆರ್​ಆರ್​ಆರ್ ಚಿತ್ರದ ಮೂಲಕ ವಿಶ್ವಾದ್ಯಂತ ಅಭಿಮಾನಿ ಬಳಗ ಹೊಂದಿರುವ ಜ್ಯೂನಿಯರ್ ಎನ್​ಟಿಆರ್ ಹೊಸ‌ ಸಿನಿಮಾವನ್ನು ನಿರ್ದೇಶಕ ಕೊರಟಾಲ ಶಿವ ಜೊತೆ ಹೊಸ‌ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಈಗಾಗಲೇ ಚಿತ್ರಿಕರಣ ಪ್ರಾರಂಭವಾದರೂ ಚಿತ್ರತಂಡ ಮಾತ್ರ ಇದುವರೆಗೂ ಶೀರ್ಷಿಕೆಯನ್ನು ಘೋಷಣೆ ಮಾಡಿರಲಿಲ್ಲ. ಆದರೆ, ಇಂದು ವಿಶೇಷ ದಿನವಾದ್ದರಿಂದ ಚಿತ್ರತಂಡವು ಚಿತ್ರ ಹೆಸರನ್ನು ಘೋಷಿಸಿದ್ದಾರೆ. ಚಿತ್ರಕ್ಕೆ ‘ದೇವರ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫಸ್ಟ್​ಲುಕ್ ಪೋಸ್ಟರ್ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ದೇವರ ಚಿತ್ರ ಸುಮಾರು 6 ಭಾಷೆಗಳಲ್ಲಿ ತೆರೆ ಕಾಣಲಿದೆ.

ಹೃತಿಕ್​ ರೋಷನ್​ ಸಿನಿಮಾದಲ್ಲಿ ಜ್ಯೂನಿಯರ್​ ಎನ್​ಟಿಆರ್​​: ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಲಿರುವ ಸ್ಪೈ ಆಕ್ಷನ್ ಥ್ರಿಲ್ಲರ್‌ ಸಿನಿಮಾವಾದ 'ವಾರ್​ ​2'ನಲ್ಲಿ ಬಾಲಿವುಡ್​​ ಗ್ರೀಕ್​ಗಾಡ್​​​ ಹೃತಿಕ್​ ರೋಷನ್ ಜೊತೆ ಜ್ಯೂನಿಯರ್​​ ಎನ್​ಟಿಆರ್​ ಅವರು ತೆರೆ ಹಂಚಿಕೊಳ್ಳಲಿದ್ದಾರೆ, ಈ ಚಿತ್ರವನ್ನು ಅಯನ್ ಮುಖರ್ಜಿ ಅವರು ನಿರ್ದೇಶಿಸಲಿದ್ದಾರೆ. ಇನ್ನು ಕನ್ನಡ ನಿರ್ದೇಶಕ ಪ್ರಶಾಂತ್​ ನೀಲ್​​ ಜೊತೆ ಸಹ ಎನ್​ಟಿಆರ್​ ಅವರು ಸಿನಿಮಾ ಮಾಡಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ.

ಸೆಪ್ಟೆಂಬರ್ 28ಕ್ಕೆ 'ಸಲಾರ್' ಬಿಡುಗಡೆ: ನಟ ಪ್ರಭಾಸ್ ನಾಯಕನಾಗಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಚಿತ್ರ 'ಸಲಾರ್'. ಅದ್ಧೂರಿ ಸಾಹಸ ದೃಶ್ಯಗಳೊಂದಿಗೆ ತಯಾರಾಗುತ್ತಿರುವ ಚಿತ್ರಕ್ಕಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಲಾರ್ ಮುಂದೂಡಿಕೆಯಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಕೆಲವು ನೆಟ್ಟಿಗರು ಚಿತ್ರತಂಡವನ್ನು ಟ್ಯಾಗ್ ಮಾಡಿ ಬಿಡುಗಡೆ ವಿಚಾರದಲ್ಲಿ ಸ್ಪಷ್ಟನೆ ನೀಡುವಂತೆಯೂ ಕೋರಿದ್ದರು. ಆಧಾರವಿಲ್ಲದ ಸುದ್ದಿಗಳನ್ನು ನಂಬಬೇಡಿ. ಸಿನಿಮಾ ಸೆಪ್ಟೆಂಬರ್ 28 ರಂದು ಥಿಯೇಟರ್‌ಗೆ ಬರಲಿದೆ ಎಂದು ಸಿನಿಮಾ ತಂಡ ಸ್ಪಷ್ಟ ಪಡಿಸಿದೆ.

ಸದ್ಯ ಅಂತಿಮ ಹಂತದಲ್ಲಿರುವ ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಹೊಂಬಾಳೆ ಫಿಲಂಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಮತ್ತೊಂದೆಡೆ, ಪ್ರಭಾಸ್ ಅಭಿನಯದ 'ಆದಿಪುರುಷ' ಟ್ರೇಲರ್ ಉತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇವುಗಳ ಹೊರತಾಗಿ ಪ್ರಭಾಸ್ 'ಪ್ರಾಜೆಕ್ಟ್ ಕೆ' ಯಲ್ಲೂ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: 'ಆದಿಪುರುಷ್'​ ಸಿನಿಮಾದ ಜೀವಾಳವಾಗಿರುವ 'ಜೈ ಶ್ರೀ ರಾಮ್'​ ಹಾಡು ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.